ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರತಿವರ್ಷ ತಮ್ಮ ಮನೆಯಲ್ಲಿ ತನ್ನ ಕುಟುಂಬದವರ ಜೊತೆಗೆ ಗಣೇಶ ಹಬ್ಬವನ್ನು ತುಂಬ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಪ್ರತಿವರ್ಷ ಪೂಜಾರಿಯನ್ನು ಕರೆಸಿ ಗಣೇಶನಿಗೆ ವಿಧಿ ವಿಧಾನಗಳಿಂದ ಪೂಜಿಸಿ ಹಬ್ಬವನ್ನು ತುಂಬ ಸಂಭ್ರಮದಿಂದ ಮಾಡುತ್ತಾರೆ.
ಇನ್ನೂ ಸ್ಯಾಂಡಲ್ ವುಡ್ ನಲ್ಲಿ ಎಲ್ಲಾ ಕಲಾವಿದರು ಗಣೇಶ ಹಬ್ಬವನ್ನು ತುಂಬ ವಿಜೃಂಭಣೆಯಿಂದ ಆಚರಣೆ ಮಾಡಿದ್ದಾರೆ. ಹೌದು ತಮ್ಮ ತಮ್ಮ ಮನೆಗಳಲ್ಲಿ ಗೌರಿ ಗಣೇಶನನ್ನು ಕೂರಿಸಿ ತಮ್ಮ ಮಕ್ಕಳ ಜೊತೆಗೆ ಸಾಂಪ್ರದಾಯಿಕವಾಗಿ ಹಬ್ಬವನ್ನು ಮಾಡಿದ್ದಾರೆ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟು ವಿಧವಿಧವಾದ ಹಬ್ಬಗಳು ಇವೆ ಎಂದು ಹೇಳಬಹುದು. ಇನ್ನೂ ಎಲ್ಲಾ ಹಬ್ಬಗಳಲ್ಲೂ ಹೋಲಿಸಿದರೆ ಎಲ್ಲರಿಗೂ ಇಷ್ಟವಾಗುವ ಹಬ್ಬ ಎಂದರೆ ಅದು ಗೌರಿಗಣೇಶ ಹಬ್ಬ. ಏಕೆಂದರೆ ಮನೆಯಲ್ಲಿ ಗೌರಿ ಗಣೇಶನನ್ನು ಕೂರಿಸುವುದು ಅಲ್ಲದೆ ಆಚೆ ಕೂಡ ಗಣೇಶನನ್ನು ಕೂರಿಸಿ ಪೂಜೆ ಮಾಡಿ ಮೆರವಣಿಗೆ ಮಾಡಿ ತುಂಬಾ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡುತ್ತಾರೆ.
ಇನ್ನೂ ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನದಂದು ಗಣೇಶ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಇನ್ನೂ ಸಾಕಷ್ಟು ಜನರು ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ಪೂಜಿಸಿ ನೈವೇದ್ಯಕ್ಕೆ ಮೋದಕ ಕಡುಬು ಇನ್ನೂ ಮುಂತಾದ ಸಿಹಿ ತಿಂಡಿಗಳನ್ನು ಮಾಡಿ ಗಣೇಶನಿಗೆ ನೈವೇದ್ಯ ಇಡುತ್ತಾರೆ.
ಇನ್ನು ಗೌರಿ ಹಬ್ಬ ಆಚರಣೆಯನ್ನು ಮದುವೆಯಾದ ಮಹಿಳೆಯರು ಮಾಡುತ್ತಾರೆ. ಗೌರಿ ದೇವಿಯ ವಿಗ್ರಹವನ್ನು ಮಂಟಪದಲ್ಲಿ ಅಥವಾ ಧಾನ್ಯಗಳಲ್ಲಿ ತುಂಬಿದ ಪಾತ್ರೆಯ ಮೇಲೆ ಪ್ರತಿಷ್ಠಾಪನೆ ಮಾಡಿ ಅಲಂಕರಿಸಿ ಪೂಜೆಯನ್ನು ಮಾಡುತ್ತಾರೆ. ಇನ್ನು ಗೌರಿ ಹಬ್ಬದ ದಿನದಂದು ಸಾಂಪ್ರದಾಯಿಕವಾಗಿ ವಸ್ತುಗಳಿಂದ ಮಾಡಿದ ಕೊಡುಗೆಗಳನ್ನು ತಯಾರಿಸಲಾಗುತ್ತದೆ.
ಪ್ರತಿ ಬುಟ್ಟಿಯಲ್ಲಿ ಅರಿಶಿನ ಸಿಂಧೂರ ಬಳೆಗಳು ಮಣಿಗಳು ತೆಂಗಿನಕಾಯಿ ಹಲವು ಸಿರಿಧಾನ್ಯಗಳು ಮತ್ತು ಬೆಲ್ಲದಂತಹ ಸಿಹಿ ತಿಂಡಿಗಳನ್ನು ಸೇರಿಸಿ ವಿವಾಹಿತ ಮಹಿಳೆಯರಿಗೆ ಎಲ್ಲವನ್ನು ಉಡುಗೊರೆಯಾಗಿ ನೀಡುತ್ತಾರೆ. ಇನ್ನೂ ಗಣೇಶ ಹಬ್ಬ ಕೂಡ ಒಂದು ಪ್ರಮುಖ ಹಬ್ಬವಾಗಿ ಭಾರತದಲ್ಲಿ ಗುರುತಿಸಿಕೊಂಡಿದೆ.
ಈ ಹಬ್ಬವನ್ನು ದೇವ ಗಣೇಶನ ಜನ್ಮದಿನದಂದು ಆಚರಣೆ ಮಾಡಲಾಗುತ್ತದೆ. ಈ ದಿನದಂದೇ ತನ್ನ ತಂದೆ ಶಿವನಿಂದ ತುಂಡರಿಸಲ್ಪಟ್ಟ ಗಣೇಶನ ಮುಖದ ಜಾಗದಲ್ಲಿ ಆನೆಯ ಮುಖವನ್ನು ಸೇರಿಸಲಾಯಿತು. ಈ ಮೂಲಕ ಗಣೇಶನು ಗಜಾನನ ಆದನು…..