ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಅವರು ಸೆಪ್ಟೆಂಬರ್ 16 1976 ರಂದು ಚೆನ್ನೈನಲ್ಲಿ ಜನಿಸಿದರು. ಇವರ ತಂದೆಯ ಹೆಸರು ದೊರೈರಾಜ್ ಮತ್ತು ತಾಯಿಯ ಹೆಸರು ರಾಜ್ ಮಲ್ಲಿಕಾ. ಇನ್ನು ಮೀನಾ ಅವರು ಕನ್ನಡ ಹಿಂದಿ ತೆಲುಗು ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ನಟಿಸಿ ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನೂ ಇವರು ಚೈಲ್ಡ್ ಆರ್ಟಿಸ್ಟ್ ಆಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದವರು.
ಹೌದು ಮೀನಾ ಅವರು 1982 ರಲ್ಲಿ ತಮಿಳಿನಲ್ಲಿ ನೆಂಜನ್ಗಲ್ ಎನ್ನುವ ಚಿತ್ರದ ಮೂಲಕ ಬಾಲನಟಿಯಾಗಿ ಅಭಿನಯ ಮಾಡಿದ್ದಾರೆ. ಇದಾದ ಮೇಲೆ ಇವರು ತೆಲುಗು ತಮಿಳು ಹಿಂದಿ ಮಲಯಾಳಂ ನ ಬಹು ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯ ಮಾಡಿದ್ದಾರೆ. ಇದಾದ ಮೇಲೆ 1990ರ ಲ್ಲಿ ತೆಲುಗಿನಲ್ಲಿ ಕರ್ತವ್ಯಂ ಎನ್ನುವ ಚಿತ್ರದ ಮೂಲಕ ಹೀರೋಯಿನ್ ಆಗಿ ತೆರೆಯ ಮೇಲೆ ಕಾಣಿಸಿದರು.
ಇದಾದ ಮೇಲೆ ಇವರು ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿ 90 ಮತ್ತು 2000ರ ಸಮಯದಲ್ಲಿ ಟಾಪ್ ಲೀಡಿಂಗ್ ನಟಿಯಾಗಿ ಗುರುತಿಸಿಕೊಂಡರು. ಇನ್ನೂ ಇವರು ಸಾಕಷ್ಟು ಕಾರ್ಯಕ್ರಮಗಳಿಗೆ ಜಡ್ಜ್ ಕೂಡ ಆಗಿದ್ದರು. ಇನ್ನು ಮೀನಾ ಅವರು 2009ರ ಲ್ಲಿ ವಿದ್ಯಾಸಾಗರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದರು. ಇವರ ಪತಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು.
ಆದರೆ 2022ರ ಲ್ಲಿ ಅಂದರೆ ಇದೇ ವರ್ಷದಲ್ಲಿ ಶ್ವಾಸಕೋಶದ ಅನಾರೋಗ್ಯದ ಸಮಸ್ಯೆಗಳಿಂದ ವಿದ್ಯಾಸಾಗರ್ ಅವರು ಸಾವನ್ನಪ್ಪಿದರು. ಕೇವಲ ಚಿಕ್ಕ ವಯಸ್ಸಿನಲ್ಲಿಯೇ ಮೀನಾ ಅವರು ತಮ್ಮ ಪತಿಯನ್ನು ಕಳೆದುಕೊಂಡು ತುಂಬಾನೇ ನೋವನ್ನು ಅನುಭವಿಸುತ್ತಿದ್ದಾರೆ. ಹಾಗೆಯೇ ಇವರಿಗೆ ನೈನಿಕ ವಿದ್ಯಾಸಾಗರ್ ಎನ್ನುವ ಮುದ್ದಾದ ಮಗಳು ಕೂಡ ಇದ್ದಾರೆ.
ಇನ್ನೂ ನೈನಿಕಾ ಕೇವಲ 5 ವರ್ಷದ ವಯಸ್ಸಿನಲ್ಲಿದ್ದಾಗಲೇ ದಳಪತಿ ವಿಜಯ್ ಅವರ ಸಿನಿಮಾ ಆದ ತೇರಿ ಚಿತ್ರದಲ್ಲಿ ದಳಪತಿ ವಿಜಯ್ ಅವರ ಮಗಳಾಗಿ ಅಭಿನಯ ಮಾಡಿದ್ದಾರೆ. ಇನ್ನೂ ತಮ್ಮ ಮಗಳನ್ನು ಸಿನಿಮಾ ರಂಗಕ್ಕೆ ತಂದು ದೊಡ್ಡ ನಟಿಯಾಗಿ ಮಾಡಬೇಕೆಂಬ ಆಸೆ ಮೀನಾ ಅವರಲ್ಲಿ ತುಂಬ ಇದೆ. ಆದರೆ ಪ್ರಸ್ತುತ ಮೀನಾ ಅವರು ತಮ್ಮ ಪತಿಯನ್ನು ಕಳೆದುಕೊಂಡು ತುಂಬಾನೇ ನೋವಲ್ಲಿದ್ದಾರೆ. ಇಲ್ಲಿ ನೀವು ಮೀನಾ ಅವರ ಮನೆಯ ಒಳಗಡೆ ಹೇಗಿದೆಯೆಂದು ಕೆಲ ದೃಶ್ಯಗಳಿಂದ ನೋಡಬಹುದು…..