ಸಾಮಾನ್ಯವಾಗಿ ಪ್ರತಿಯೊಬ್ಬರೂ ಮನೋರಂಜನೆ ಇಷ್ಟ ಪಡುತ್ತಾರೆ. ಜೀವನದ ಒತ್ತಡ ಮರೆಯಬೇಕು, ಅದರಿಂದ ಹೊರ ಬರಬೇಕು ಅಂತಿದ್ದರೆ ಮನೋರಂಜನೆ ಬೇಕೇ ಬೇಕು. ಅದಕ್ಕಾಗಿಯೇ ಕನ್ನಡ ವಾಹಿನಿಗಳು ಜನರ ಮನಸನ್ನು ಡೈವರ್ಟ್ ಮಾಡುವಂತಹ, ಜನರಿಗೆ ಖುಷಿ ಕೊಡುವಂತಹ ಧಾರವಾಹಿಗಳನ್ನು ಪ್ರಸಾರ ಮಾಡುತ್ತಿವೆ. ಇದರಲ್ಲಿ ಜೀ ವಾಹಿನಿ, ಕಲರ್ಸ್ ಕನ್ನಡ ಮುಂತಾದ ವಾಹಿನಿಗಳು ಮುಂಚೂಣಿಯಲ್ಲಿವೆ.
ಪ್ರತಿಯೊಂದ ವಾಹಿನಿಗಳು ಒಂದಕ್ಕಿಂತ ಒಂದು ಭಿನ್ನವಾದ ಕಥಾಹಂದರವುಳ್ಳ ಧಾರವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಅದರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಕನ್ನಡತಿ ಧಾರವಾಹಿ ಕೂಡ ಒಂದು. ಈ ಧಾರವಾಹಿ ಉಳಿದೆಲ್ಲಾ ಧಾರವಾಹಿಗಳಿಗಿಂತ ತುಂಬಾ ಭಿನ್ನ ಅಂದರೆ ತಪ್ಪಾಗಲ್ಲ. ಯಾಕಂದರೆ ಅದರಲ್ಲಿನ ಸಂಭಾಷಣೆ ತುಂಬಾನೇ ಸ್ಪೆಷಲ್ ಆಗಿದೆ. ತುಂಬಾ ಓವರ್ ಅನ್ನಿಸದ ನೈಜತೆಯನ್ನು ಅನುಭವಕ್ಕೆ ತರುವಂತಹ ಸಂಭಾಷಣೆ ಅದರಲ್ಲಿ ಇದೆ.
ಅದೇ ರೀತಿ, ಆ ಧಾರವಾಹಿಯ ಪಾತ್ರಗಳು ಕೂಡ ಆ ಧಾರವಾಹಿಗೆ ಹೇಳಿ ಮಾಡಿಸಿದಂತಿದೆ. ಕಿನ್ನರಿ ಧಾರವಾಹಿಯಲ್ಲಿ ನಟಿಸಿ ನಂತರ ಹಿಂದಿ ಧಾರವಾಹಿಯಲ್ಲೂ ನಟಿಸಿದ್ದ ಕಿರಣ್ ರಾಜ್ ಅವರು ಹರ್ಷನಾಗಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಪುಟ್ಟ ಗೌರಿ ಮದುವೆಯಲ್ಲಿ ನಟಿಸಿದ್ದ ರಂಜನಿಯವರು ಭುವಿಯಾಗಿ ನಾಯಕಿ ಪಾತ್ರ ಮಾಡಿದ್ದಾರೆ. ಇವರಿಬ್ಬರ ಜೋಡಿ ಹೇಳಿ ಮಾಡಿಸಿದಂತಿದೆ. ಇದರ ಜೊತೆ ರತ್ನಮಾಲಾ ಅವರು ಹರ್ಷನ ತಾಯಿ ಪಾತ್ರ ಮಾಡಿ ಧಾರವಾಹಿ ಗೆ ಇನ್ನಷ್ಟು ಕಳೆ ತಂದಿದ್ದಾರೆ.
ಹರ್ಷ -ಭುವಿಯ ಲವ್ ಸ್ಟೋರಿ, ಸಾನಿಯಾಳ ಸೇಡು, ವರೂಧಿನಿ ನೋವು , ಅಮ್ಮಮ್ಮ ಆತಂಕ ಹೀಗೆ ಸಾಕಷ್ಟು ಕೋನಗಳಲ್ಲಿ ಈ ಧಾರವಾಹಿಯ ಕತೆಯನ್ನು ಹೆಣೆಯುತ್ತಾ ಹೋಗಲಾಗ್ತಿದೆ. ಪ್ರಸ್ತುತ ಧಾರವಾಹಿಯಲ್ಲಿ ಭುವಿ ಹಾಗೂ ಹರ್ಷ ಮದುವೆ ಸಮೀಪಿಸುತ್ತಿದ್ದು ಈ ಕುರಿತು ಎಪಿಸೋಡ್ಗಳು ಸಾಗುತ್ತಿದೆ.ಈ ನಡುವೆ ಭುವಿಯವರ ತಂಗಿಯಾಗಿ ಬಿಂದು ಪಾತ್ರ ಎಲ್ಲರ ಪ್ರೀತಿಗೆ ಪಾತ್ರ ವಾಗಿದೆ. ಯಾಕಂದರೆ ಬಿಂದು ಪಾತ್ರ ಸಖತ್ ಬಬ್ಲಿಯಾಗಿದೆ.
ಸದಾ ಅಕ್ಕನನ್ನು ರೇಗಿಸುತ್ತಾ ಮಲತಾಯಿ ಮಗಳಾದರೂ ಅಕ್ಕನ ಮೇಲೆ ಜೀವವನ್ನೇ ಇಟ್ಟಿರುವ ಆ ಪಾತ್ರ ತಂಗಿ ಅಂದರೆ ಹೇಗಿರುತ್ತಾಳೆ ಅನ್ನುವುದನ್ನು ನೈಜವಾಗಿ ತೋರಿಸುತ್ತದೆ. ಅಕ್ಕನ ವ್ಯಕ್ತಿತ್ವಕ್ಕೆ ಪಕ್ಕಾ ವಿರುದ್ಧವಾಗಿ, ಪಟ ಪಟನೆ ಮಾತನಾಡುತ್ತಾ, ಅಕ್ಕನ ಕಾಳೆಲೆಯುತ್ತಾ, ಹರ್ಷ – ಭುವಿಯನ್ನು ಒಂದು ಮಾಡಲು ಪ್ರಯತ್ನಿಸುವ ಬಿಂದು ಪಾತ್ರ ಎಲ್ಲರ ಮನ ಗೆದ್ದಿದೆ. ಈ ಬಿಂದು ಪಾತ್ರದಲ್ಲಿ ನಟಿಸಿರುವವರ ಹೆಸರು ಮೋಹಿರ ಆಚಾರ್ಯ.
ಇವರು ಮಲೆನಾಡಿನ ಸುಂದರಿ. ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದ ಬಿಂದು ಬೆಳೆದಿದ್ದು ಹಾಗೂ ಶಿಕ್ಷಣವನ್ನು ಪೂರೈಸಿದ್ದು ಎಲ್ಲಾ ಬೆಂಗಳೂರಿನಲ್ಲಿ. ನೃತ್ಯ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡಿದ್ದ ಮೋಹಿರಾರನ್ನು ಕೈ ಬೀಸಿ ಕರೆದಿದ್ದು ನಟನಾ ಕ್ಷೇತ್ರ. ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದಾಗ ಧಾರವಾಹಿಯಲ್ಲಿ ನಟಿಸುವ ಅವಕಾಶ ಮೋಹಿರಾಗೆ ಒಲಿದು ಬಂದಿತ್ತು.
ಇವರು ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಪ್ರೇಮಲೋಕ ಎಂಬ ಧಾರವಾಹಿಯ ಮೂಲಕ. ಅದರಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಕನ್ನಡತಿ ಧಾರವಾಹಿಯಲ್ಲಿ ನಾಯಕಿಯ ತಂಗಿ ಪಾತ್ರ ಮಾಡುವ ಅವಕಾಶ ಬಂತು.
ಅದನ್ನು ಚೆನ್ನಾಗಿಯೇ ನಿಭಾಯಿಸಿದ ಮೋಹಿರಾ ಆಚಾರ್ಯ ಇದೀಗ ಕನ್ನಡಿಗರ ಫೆವರಿಟ್ ಆಗಿ ಬಿಟ್ಟಿದ್ದಾರೆ. ಲೈವ್ಲಿಯಾಗಿ, ಕ್ಯೂಟ್ ಆಗಿ ನಟಿಸುತ್ತಿರುವ ಮೋಹಿರಾ ಆಚಾರ್ಯ ಅವರು ನಟನಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸೋಣ. ಮೋಹಿರಾ ಆಚಾರ್ಯ ನಟನೆ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.