Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಒಂದು ಕಾಲದಲ್ಲಿ ಟಾಪ್ ನಟಿಯರು ಈಗ ಸನ್ಯಾಸಿನಿಯರು ನೋಡಿದ್ರೆ ಶಾಕ್..!!

0

ಒಂದು ಕಾಲದಲ್ಲಿ ಟಾಪ್ ಸ್ಟಾರ್ ನಟಿಯರು ಸಿನಿಮಾಗಳಲ್ಲಿ ಮಿಂಚಿದ್ದರು. ಆದರೆ ಈಗ ಸನ್ಯಾಸಿನಿಯರಾಗಿ ಬದಲಾಗಿದ್ದಾರೆ. ಅಂತಹ ನಟಿಯರು ಯಾರು ಎಂದು ನೋಡೋಣ ಬನ್ನಿ..

ಖ್ಯಾತ ಬಾಲಿವುಡ್ ನಟಿ ಮನಿಷಾ ಕೋಯಿರಾಲ ಅವರು ಆಗಸ್ಟ್ 16 1970 ರಂದು ನೇಪಾಳದಲ್ಲಿ ಜನಿಸಿದ್ದಾರೆ. ಇವರು ಸಾಮ್ರಾಟ್ ದಹಲ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದರು. ಇವರಿಗೆ ಕ್ಯಾನ್ಸರ್ ಕಾಯಿಲೆ ಕೂಡ ಬಂದಿತ್ತು. ಆದರೆ ಇದರಿಂದ ಚಿಕಿತ್ಸೆ ತೆಗೆದುಕೊಂಡು ಚೇತರಿಸಿಕೊಂಡಿದ್ದಾರೆ. ಈಗ ಇವರು ಉಜ್ಜೈನಿಯಲ್ಲಿ ಸನ್ಯಾಸಿನಿಯಾಗಿದ್ದಾರೆ.

ಖ್ಯಾತ ಮಾಡೆಲ್ ಮತ್ತು ನಟಿಯಾಗಿ ಗುರುತಿಸಿಕೊಂಡಿದ್ದ ಸೋಫಿಯಾ ಹೈಯಾತ್ ಅವರು ಡಿಸೆಂಬರ್ 6 1984 ರಂದು ಲಂಡನ್ ನಲ್ಲಿ ಜನಿಸಿದ್ದಾರೆ. ಇವರು ಮೊದಲು ಸನ್ಯಾಸಿ ಜೀವನವನ್ನು ನಡೆಸುತ್ತಿದ್ದರು ಆದರೆ ಮದುವೆಯ ಮೇಲೆ ಆಸಕ್ತಿ ಬಂದ ಕಾರಣ ಇವರು ಸನ್ಯಾಸಿನಿ ಜೀವನವನ್ನು ತೊರೆದು ಈಗ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ.

ನಟಿ ಮಮತಾ ಕುಲಕರ್ಣಿ ಅವರು ಏಪ್ರಿಲ್ 20 1972 ರಂದು ಮುಂಬೈನಲ್ಲಿ ಜನಿಸಿದ್ದಾರೆ. ಇವರು ವಿಕ್ಕಿ ಗೋಸ್ವಾಮಿ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದರು. ಆದರೆ ಇವರು ಕೆಲ ಕಾರಣಾಂತರಗಳಿಂದ ಸನ್ಯಾಸಿನಿ ಪಟ್ಟವನ್ನು ಏರಿದ್ದಾರೆ.

ನಟಿ ಬರ್ಕಾ ಮದನ್ ಅವರು ಆಗಸ್ಟ್ 17 1974 ರಂದು ಪಂಜಾಬ್ ನಲ್ಲಿ ಜನಿಸಿದ್ದಾರೆ. ಇವರು ತುಂಬ ಐಷಾರಾಮಿ ಜೀವನವನ್ನು ನಡೆಸುತ್ತಿದ್ದರು. ಆದರೆ ಅವೆಲ್ಲವನ್ನು ತೊರೆದು ಜೀವನ ಇಷ್ಟೇ ಎಂದು ಹೇಳಿ ಈಗ ಬಡವರಿಗೆ ಸಹಾಯ ಮಾಡುತ್ತಾ ಬೌದ್ಧ ಸನ್ಯಾಸಿನಿಯಾಗಿ ಬದಲಾಗಿದ್ದಾರೆ.

ಖ್ಯಾತ ನಟಿ ಸುಚಿತ್ರಾ ಸೇನ್ ಅವರು ಕೇವಲ ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ಸ್ಟಾರ್ ನಟಿಯಾಗಿ ಗುರುತಿಸಿಕೊಂಡವರು. ಆದರೆ ಇವರ ಮನೆಯಲ್ಲಿ ಅಶಾಂತಿ ಇದ್ದ ಕಾರಣ ಇವರು ರಾಮಕೃಷ್ಣ ಆಶ್ರಮದಲ್ಲಿ ಸನ್ಯಾಸಿ ಜೀವನವನ್ನು ಮಾಡುತ್ತಿದ್ದರು. ತದನಂತರ ಜನವರಿ 17 2014 ರಲ್ಲಿ ಮರಣ ಹೊಂದಿದರು.

ಅನು ಅಗರ್ವಾಲ್ ಅವರು ಜನವರಿ 11 1969 ರಂದು ನ್ಯೂ ಡೆಲ್ಲಿಯಲ್ಲಿ ಜನಿಸಿದ್ದಾರೆ. ಇವರು ಸಿನಿಮಾಗಳಲ್ಲಿ ಒಳ್ಳೆಯ ಹೆಸರನ್ನು ಸಾಧಿಸಿಕೊಂಡಿದ್ದರು. ಆದರೆ ಇವರಿಗೆ ಏನಾಯ್ತೊ ಗೊತ್ತಿಲ್ಲ ಉತ್ತರ ಕಾಂಡದಲ್ಲಿರುವ ಯೋಗ ಆಶ್ರಮದಲ್ಲಿ ಸನ್ಯಾಸಿನಿಯಾಗಿ ಬದಲಾಗಿದ್ದಾರೆ….

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply