ಆಗಿನ ಕಾಲದಲ್ಲಿ ಸಿನಿಮಾದಲ್ಲಿ ಐಟಂ ಹಾಡು ಇದೆ ಎಂದರೆ ಆ ಹಾಡಿಗೆ ಕುಣಿಯುವುದಕ್ಕೆ ಮತ್ತೊಂದು ನಟಿಯನ್ನು ಕರೆಸುತ್ತಿದ್ದರು. ಆದರೆ ಈಗ ಹಾಗೆ ಇಲ್ಲ ಸಿನಿಮಾದ ಮುಖ್ಯವಾದ ನಟಿಯರೇ ಬೇರೆ ಸಿನಿಮಾಗಳಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಂತಹ ಸ್ಯಾಂಡಲ್ ವುಡ್ ನಟಿಯರು ಯಾರು ಎಂದು ನೋಡೋಣ ಬನ್ನಿ..
ತುಪ್ಪದ ಹುಡುಗಿ ಎಂದೇ ಫೇಮಸ್ ಆಗಿರುವ ರಾಗಿಣಿ ದ್ವಿವೇದಿ ಅವರು ಕಿಚ್ಚ ಸುದೀಪ್ ಅವರ ಅಭಿನಯದ ಮದಕರಿ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿಕೊಂಡರು. ಇನ್ನೂ ಇವರು ಐಟಂ ಹಾಡುಗಳಿಗೂ ಕೂಡ ಸ್ಟೆಪ್ ಹಾಕಿದ್ದಾರೆ. ಹೌದು ವಿಕ್ಟರಿ 2, ಕಳ್ಳ ಮಳ್ಳ ಸುಳ್ಳ ಮತ್ತು ಟೈಗರ್ ಎನ್ನುವ ಸಿನಿಮಾಗಳ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.
ಮೋಹಕ ತಾರೆ ರಮ್ಯಾ ಅವರು ಸ್ಯಾಂಡಲ್ ವುಡ್ ತಮ್ಮ ನಟನೆಯಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಇವರು ಈಗ ಸಿನಿಮಾ ರಂಗದಿಂದ ದೂರವಾಗಿದ್ದರು ಕೂಡ ಇವರ ಅಭಿಮಾನಿಗಳ ಸಂಖ್ಯೆಯಂತೂ ಹಾಗೆಯೇ ಇದೆ. ಇನ್ನು ರಮ್ಯಾ ಅವರು ಊರಿಗೊಬ್ಬಳೇ ಪದ್ಮಾವತಿ ಎನ್ನುವ ಐಟಂ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಸ್ಯಾಂಡಲ್ ವುಡ್ ನ ಖ್ಯಾತ ನಟಿ ಆಶಿಕಾ ರಂಗನಾಥ್ ಅವರು ಕೇವಲ ಹೀರೋಯಿನ್ ಆಗಿ ಮಾತ್ರವಲ್ಲ ಇವರು ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಚಿತ್ರದಲ್ಲಿ ಪಟಾಕಿ ಪೊರಿಯೋ ಎನ್ನುವ ಐಟಂ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಕನ್ನಡದ ಖ್ಯಾತ ನಟಿ ಸಂಯುಕ್ತಾ ಹೆಗ್ಡೆ ಅವರು ಒಳ್ಳೊಳ್ಳೆಯ ಸಿನಿಮಾಗಳನ್ನು ನೀಡಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇನ್ನು ಇವರು ರಾಣ ಸಿನಿಮಾದಲ್ಲಿ ಇರುವ ಮಳ್ಳಿ ಮಳ್ಳಿ ಎನ್ನುವ ಐಟಂ ಹಾಡಿಗೆ ಸ್ಟೆಪ್ ಹಾಕಿ ಎಲ್ಲರ ಮನಸ್ಸನ್ನು ಅಲ್ಲೂ ಕೂಡ ದೋಚಿಕೊಂಡಿದ್ದಾರೆ.
ಸ್ಟಾರ್ ನಟಿ ಐಂದ್ರಿತಾ ರೇ ಅವರು ನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟಿಯಾಗಿ ಅಲ್ಲದೆ ಐಟಂ ಹಾಡುಗಳಿಗೆ ಸ್ಟೆಪ್ ಹಾಕಿ ಅಲ್ಲೂ ಕೂಡ ಹೆಚ್ಚು ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಹೌದು ಐಂದ್ರಿತಾ ರೇ ಅವರು ಪ್ರೇಮ್ ಅಡ್ಡ ಸಿನಿಮಾದ ಬಸಂತಿ, ಕಡ್ಡಿಪುಡಿ ಸಿನಿಮಾದ ಸೌಂದರ್ಯ ಸಮರ, ರಾಂಬೋ 2 ಸಿನಿಮಾದ ಧಮ್ ಮಾರೋ ಧಮ್ ಎನ್ನುವ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.
ಪಾರುಲ್ ಯಾದವ್ ಅವರು ನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಒಳ್ಳೆಯ ಹೆಸರನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಇನ್ನೂ ಇವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿನಯದ ಶ್ರಾವಣಿ ಸುಬ್ರಹ್ಮಣ್ಯ ಎನ್ನುವ ಸಿನಿಮಾದಲ್ಲಿ ಇರುವ ಆಕಳ್ ಬೆಣ್ಣೆ ಎನ್ನುವ ಐಟಂ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ.
ನಟಿ ಸುಮನ್ ರಂಗನಾಥ್ ಅವರು ಬಿಂದಾಸ್ ಸಿನಿಮಾದ ಕಲ್ಲು ಮಾಮಾ ಮತ್ತು ಮೈನಾ ಸಿನಿಮಾದ ಓ ಪ್ರೇಮದ ಪೂಜಾರಿ ಎನ್ನುವ ಐಟಂ ಹಾಡುಗಳಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಯಜಮಾನ ಚಿತ್ರದ ಮೂಲಕ ತಾನ್ಯ ಹೋಪ್ ಅವರು ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು. ಇನ್ನು ಈ ಸಿನಿಮಾದಲ್ಲಿ ಬಸಂಡಿ ಬಾ ಎನ್ನುವ ಐಟಂ ಹಾಡಿಗೆ ಸ್ಟೆಪ್ ಹಾಕಿದ್ದಾರೆ…..