ಖ್ಯಾತ ಹಿರಿಯ ನಟ ಆಗಿರುವ ಬಾಲಕೃಷ್ಣ ಅವರು ಖಳ ನಟರಾಗಿ ಪೋಷಕ ನಟರಾಗಿ ನಟ ಹಾಸ್ಯ ನಟರಾಗಿ ಒಳ್ಳೆಯ ಹೆಸರನ್ನು ಸಾಧಿಸಿಕೊಂಡಿದ್ದಾರೆ. ಇನ್ನೂ ಇವರಿಗೆ ಕಿವಿ ಕೇಳಿಸುತ್ತಿರಲಿಲ್ಲ ಎಂದರೆ ಯಾರೂ ಕೂಡ ನಂಬುವುದಿಲ್ಲ. ಹೌದು ಇವರಿಗೆ ಕಿವಿ ಕೇಳಿಸದೇ ಇದ್ದರೂ ಕೂಡ ಸಿನಿಮಾಗಳಲ್ಲಿ ಎಷ್ಟು ಚೆನ್ನಾಗಿ ಅಭಿನಯ ಮಾಡಿದ್ದಾರೆ ನೋಡಿ.
ನಟ ಧ್ರುವ ಶರ್ಮಾ ಅವರು ನೋಡುವುದಕ್ಕೆ ತುಂಬಾನೆ ಸುಂದರವಾಗಿದ್ದರು. ಇನ್ನೂ ಇವರಿಗೂ ಕೂಡ ಕಿವಿ ಕೇಳಿಸುತ್ತಿರಲಿಲ್ಲ ಮತ್ತು ಮಾತು ಕೂಡ ಬರುತ್ತಿರಲಿಲ್ಲ. ಆದರೆ ಕೆಲ ಅನಾರೋಗ್ಯ ಕಾರಣಾಂತರಗಳಿಂದ ಇವರು ಚಿಕ್ಕವಯಸ್ಸಿನಲ್ಲಿಯೇ ಮರಣ ಹೊಂದಿದರು.
ಕಿರುತೆರೆಯ ನಟಿ ರಶ್ಮಿ ಪ್ರಭಾಕರ್ ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಇದ್ದಾಗಲೇ ತಮ್ಮ ಎಡ ಕಣ್ಣಿಗೆ ಸುಣ್ಣ ಬಿದ್ದ ಕಾರಣ ಆ ಕಣ್ಣು ಶೇ. 70 ರಷ್ಟು ಸರಿಯಾಗಿ ಕಾಣಿಸುವುದಿಲ್ಲ. ಹೀಗಿದ್ದರೂ ಕೂಡ ಇವರು ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಒಳ್ಳೆಯ ಹೆಸರನ್ನು ಸಾರಿಸಿದ್ದಾರೆ.
ಟಾಲಿವುಡ್ ನ ಖ್ಯಾತ ನಟ ನಿತಿನ್ ಅವರಿಗೆ ತೊದಲು ಇತ್ತು. ಇದರ ಕಾರಣ ಇವರು ಮೊದಲು ತಮಗೆ ಬೇರೆಯವರು ಹಿನ್ನೆಲೆ ಧ್ವನಿಯನ್ನು ನೀಡುತ್ತಿದ್ದರು. ಆದರೆ ಈಗ ಅವೆಲ್ಲವನ್ನು ಮೆಟ್ಟಿನಿಂತು ಸ್ವತಃ ತಮ್ಮ ಧ್ವನಿಯನ್ನು ನೀಡುತ್ತಾರೆ.
ತೆಲುಗಿನ ಹಾಸ್ಯನಟ ಅಲಿ ಅವರಿಗೂ ಕೂಡ ತೊದಲು ಸಮಸ್ಯೆ ಇದೆ. ಆದರೆ ಅದನ್ನು ನೆಗೆಟಿವ್ ಆಗಿ ತೆಗೆದುಕೊಳ್ಳದೆ ಅದರ ಮುಖಾಂತರ ಇವರು ಹಾಸ್ಯಗಳನ್ನು ಮಾಡುವುದಕ್ಕೆ ಶುರು ಮಾಡಿ ಒಳ್ಳೆಯ ಹೆಸರನ್ನು ಸಾಧಿಸಿಕೊಂಡಿದ್ದಾರೆ.
ಬಾಹುಬಲಿ ಸಿನಿಮಾದಲ್ಲಿ ನಟಿಸಿರುವ ರಾಣಾ ಅವರಿಗೆ ಬಲಗಣ್ಣು ಪೂರ್ತಿಯಾಗಿ ಕಾಣಿಸುವುದೇ ಇಲ್ಲ. ಆದರೂ ಇವರಿಗೆ ಈ ಸಮಸ್ಯೆ ಇದೆ ಎಂದರೆ ಯಾರೂ ಕೂಡ ನಂಬುವುದಿಲ್ಲ.
ಅಭಿನಯ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಹುಡುಗರು ಚಿತ್ರದಲ್ಲಿ ಪುನೀತ್ ಅವರಿಗೆ ತಂಗಿಯಾಗಿ ನಟಿಸಿದ್ದಾರೆ. ಇನ್ನು ಇವರಿಗೆ ಕಿವಿ ಕೇಳಿಸುವುದಿಲ್ಲ ಮತ್ತು ಮಾತು ಕೂಡ ಬರುವುದಿಲ್ಲ. ಆದರೆ ಎಷ್ಟು ಚೆನ್ನಾಗಿ ಅಭಿನಯ ಮಾಡುತ್ತಾರೆ ಎಂದು ನಮಗೆಲ್ಲರಿಗೂ ಗೊತ್ತೇ ಇದೆ.
ಸುಧಾ ಚಂದ್ರನ್ ಅವರು ಒಳ್ಳೆಯ ನಟಿಯಾಗಿ ಮತ್ತು ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಇವರಿಗೆ ರಸ್ತೆಯ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡರು. ಆದರೂ ಛಲಬಿಡದೆ ಕೃತಕ ಕಾಲನ್ನು ಧರಿಸಿ ಸಾಕಷ್ಟು ನೃತ್ಯಗಳನ್ನು ಮಾಡಿದ್ದಾರೆ…..