ಕೆಜಿಎಫ್ 1 ಮತ್ತು ಕೆಜಿಎಫ್ 2 ಸಿನಿಮಾಗಳ ಯಶಸ್ಸಿನ ನಂತರ ಬಹಳ ವರ್ಷಗಳು ಆದ ಮೇಲೆ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಅವರು ಯುರೋಪ್ ಪ್ರವಾಸಕ್ಕೆ ಹೋಗಿದ್ದಾರೆ. ಹೌದು ಯಶ್ ಮತ್ತು ರಾಧಿಕಾ ಪಂಡಿತ್ ಅವರು ಯುರೋಪ್ ಪ್ರವಾಸದಲ್ಲಿ ತುಂಬಾನೇ ಎಂಜಾಯ್ ಮಾಡುತ್ತಿದ್ದಾರೆ.
ಅಲ್ಲಿ ತೆಗೆಸಿಕೊಂಡಿರುವ ಕೆಲ ಫೋಟೋಗಳನ್ನು ಯಶ್ ಮತ್ತು ರಾಧಿಕಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನೀವು ಕೂಡ ಯುರೋಪ್ ನಲ್ಲಿ ಇರುವ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಕೆಲ ಸುಂದರ ಫೋಟೋಗಳನ್ನು ನೋಡಬಹುದು.
ಈಗಾಗಲೇ ಯಶ್ ಅವರು ಕೆಜಿಎಫ್ ಚಿತ್ರದ ಮೂಲಕ ವಿಶ್ವಾದ್ಯಂತ ಜನಪ್ರಿಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಇವರು ಜನವರಿ 8 1986 ರಂದು ಹಾಸನದಲ್ಲಿ ಜನಿಸಿದರು. ಇವರ ತಂದೆಯ ಹೆಸರು ಅರುಣ್ ಕುಮಾರ್ ಮತ್ತು ತಾಯಿಯ ಹೆಸರು ಪುಷ್ಪ.
ಯಶ್ ಅವರು ಸಿನಿಮಾಗಳಿಗೆ ಬರುವ ಮುನ್ನ ಕೆಲ ಧಾರಾವಾಹಿಗಳಲ್ಲಿ ರಾಧಿಕಾ ಪಂಡಿತ್ ಅವರ ಜೊತೆಗೆ ನಟಿಸಿದ್ದಾರೆ. ಹೌದು ರಾಧಿಕಾ ಪಂಡಿತ್ ಮತ್ತು ಯಶ್ ಅವರು ಇಬ್ಬರು ಕಿರುತೆರೆಯಲ್ಲಿ ನಂದಗೋಕುಲ ಎನ್ನುವ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಇದಾದ ಮೇಲೆ ಯಶ್ ಅವರು 2007 ರಲ್ಲಿ ಬಿಡುಗಡೆಯಾದ ಜಂಭದ ಹುಡುಗಿ ಎನ್ನುವ ಚಿತ್ರದ ಮೂಲಕ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿದರು.
ಇದಾದ ಮೇಲೆ ಮೊಗ್ಗಿನ ಮನಸು ಚಿತ್ರದಲ್ಲಿ ಸಹಾಯಕ ನಟರಾಗಿ ಅಭಿನಯಿಸಿ ರಾಕಿ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ನೀಡಿದರು. ತದನಂತರ ಸಾಕಷ್ಟು ಹಿಟ್ ಚಿತ್ರಗಳನ್ನು ನಮಗೆ ನೀಡಿದ್ದಾರೆ. ಹಾಗೆಯೇ ರಾಧಿಕಾ ಪಂಡಿತ್ ಅವರು ಮಾರ್ಚ್ 7 1984 ರಂದು ಜನಿಸಿದ್ದಾರೆ. ಇವರು ಮೊಗ್ಗಿನ ಮನಸು ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು.
ಇವರು ಕೂಡ ಇದಾದ ಮೇಲೆ ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಆದಿ ಲಕ್ಷ್ಮಿ ಪುರಾಣ ಎನ್ನುವ ಚಿತ್ರದಲ್ಲಿ ರಾಧಿಕಾ ಪಂಡಿತ್ ಅವರು ಕೊನೆಯದಾಗಿ ನಟಿಸಿದ್ದಾರೆ. ಇನ್ನು ಯಶ್ ಮತ್ತು ರಾಧಿಕಾ ಪಂಡಿತ್ ಅವರು ಇಬ್ಬರೂ ಪ್ರೀತಿಸಿ ಡಿಸೆಂಬರ್ 9 2016 ರಂದು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಐರಾ ಯಶ್ ಮತ್ತು ಯಥರ್ವ್ ಯಶ್ ಎನ್ನುವ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ…..