ಈ ಲೋಕದಲ್ಲಿ ಅಣ್ಣ ತಂಗಿಯರ ಸಂಬಂಧ ತುಂಬ ಶ್ರೇಷ್ಠವಾದದ್ದು ಮತ್ತು ಇವರಿಬ್ಬರ ಮಧ್ಯೆ ಪ್ರೀತಿ ಕೂಡ ಹೆಚ್ಚು ಇರುತ್ತದೆ. ಅದರಲ್ಲೂ ತಂಗಿ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋದ ಮೇಲೆ ಅಣ್ಣನಿಗೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಬರುತ್ತದೆ. ಇದರ ಜೊತೆಗೆ ದುಃಖವನ್ನು ಕೂಡ ಅನುಭವಿಸುತ್ತಾನೆ.
ಇದರಂತೆಯೇ ಈ ಸಮಾಜದಲ್ಲಿ ಸಾಕಷ್ಟು ಅಣ್ಣ ತಂಗಿಯರು ರಾಖಿ ಹಬ್ಬ ಬಂದರೆ ಅಣ್ಣನಿಗೆ ಕುಂಕುಮ ಇಟ್ಟು ರಾಖಿ ಕಟ್ಟಿ ಒಂದು ಸಿಹಿಯನ್ನು ತಿನ್ನಿಸಿ ಸುಖವಾಗಿರಲಿ ಎಂದು ತಂಗಿಯರು ಬಯಸುತ್ತಾರೆ. ಇದರಂತೆಯೇ ನಮ್ಮ ಪಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಅವರಿಗೂ ಕೂಡ ಅವರ ತಂಗಿ ನಂದಿನಿ ಅವರು ರಾಖಿ ಹಬ್ಬದ ದಿನದಂದು ರಾಖಿಯನ್ನು ಕಟ್ಟಿ ಅಣ್ಣನಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಇದರ ವೀಡಿಯೋವನ್ನು ನೀವು ನೋಡಬಹುದು.
ಇನ್ನು ಯಶ್ ಅವರು ಕೆಜಿಎಫ್ ಚಿತ್ರದ ಮೂಲಕ ಇಡೀ ವಿಶ್ವದಾದ್ಯಂತ ಜನಪ್ರಿಯ ನಟನಾಗಿ ಗುರುತಿಸಿಕೊಂಡರು. ಇವರು ಜನವರಿ 8 1986 ರಂದು ಹಾಸನದಲ್ಲಿ ಜನಿಸಿದರು. ಇವರ ಮೊದಲಿನ ಹೆಸರು ನವೀನ್ ಕುಮಾರ್ ಗೌಡ. ಇನ್ನೂ ಇವರ ತಂದೆಯ ಹೆಸರು ಅರುಣ್ ಕುಮಾರ್ ಮತ್ತು ತಾಯಿಯ ಹೆಸರು ಪುಷ್ಟ. ಮೊದಲು ಯಶ್ ಅವರು ಕಿರುತೆರೆಯಲ್ಲಿ ನಂದಗೋಕುಲ ಎನ್ನುವ ಧಾರಾವಾಹಿಯಲ್ಲಿ ಅಭಿನಯ ಮಾಡಿದ್ದಾರೆ.
ಇದರ ಜೊತೆಗೆ ಉತ್ತರಾಯಣ, ಸಿಲ್ಲಿ ಲಲ್ಲಿ, ಮಳೆ ಬಿಲ್ಲು, ಪ್ರೀತಿ ಇಲ್ಲದ ಮೇಲೆ, ಶಿವ ಎನ್ನುವ ಬೇರೆ ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದಾರೆ. ತದನಂತರ 2007 ರಲ್ಲಿ ಜಂಭದ ಹುಡುಗಿ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದಾದ ಮೇಲೆ 2008 ರಲ್ಲಿ ರಾಧಿಕಾ ಪಂಡಿತ್ ಅವರ ಜೊತೆಗೆ ಮೊಗ್ಗಿನ ಮನಸು ಚಿತ್ರದಲ್ಲೂ ಕೂಡ ಸಹಾಯಕ ನಟರಾಗಿ ಅಭಿನಯಿಸಿ ರಾಕಿ ಚಿತ್ರದ ಮೂಲಕ ಇವರು ತೆರೆಯ ಮೇಲೆ ನಾಯಕ ನಟರಾಗಿ ಕಾಣಿಸಿಕೊಂಡರು.
ತದನಂತರ ಕಳ್ಳರ ಸಂತೆ, ಗೋಕುಲ, ತಮಸ್ಸು, ಮೊದಲಸಲ, ರಾಜಧಾನಿ, ಕಿರಾತಕ, ಲಕ್ಕಿ, ಜಾನು, ಡ್ರಾಮಾ, ಗೂಗ್ಲಿ, ರಾಜಾಹುಲಿ, ಮಿಸ್ಟರ್ & ಮಿಸಸ್ ರಾಮಾಚಾರಿ, ಮಾಸ್ಟರ್ ಪೀಸ್, ಸಂತು ಸ್ಟ್ರೇಟ್ ಫಾರ್ವರ್ಡ್, ಕೆಜಿಎಫ್ ಚಾಪ್ಟರ್ 1, ಕೆಜಿಎಫ್ ಚಾಪ್ಟರ್ 2 ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಇದರ ಜೊತೆಗೆ ಯಶ್ ಅವರು ಅಣ್ತಮ್ಮ ಮತ್ತು ಅಣ್ಣಂಗೆ ಲವ್ ಆಗಿದೆ ಎನ್ನುವ ಹಾಡುಗಳನ್ನು ಸಹ ಹಾಡಿದ್ದಾರೆ. ಇನ್ನೂ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಯಶ್ ಅವರು ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಅವರನ್ನು ಡಿಸೆಂಬರ್ 9 2016 ರಂದು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಐರಾ ಯಶ್ ಮತ್ತು ಯಥರ್ವ್ ಯಶ್ ಎನ್ನುವ ಇಬ್ಬರು ಮಕ್ಕಳಿದ್ದಾರೆ…..