500 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾಗಳು, ಯಾವುವು ಗೊತ್ತೇ ?? ನಿಮ್ಮ ನೆಚ್ಚಿನ ಚಿತ್ರ ಯಾವುದು ??
ಈಗ ಬರುತ್ತಿರುವ ಸಿನಿಮಾಗಳು ಬಿಡುಗಡೆಯಾದ ಮೊದಲನೆಯ ದಿನವೇ ಸಕ್ಕತ್ತಾಗಿ ಫೇಮಸ್ ಆಗ್ತಿದೆ. ಅದರಲ್ಲೂ 100 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಆಗುತ್ತಿದೆ. ಇದು ಈಗ ಸಾಮಾನ್ಯವಾಗಿದೆ.
ಆದರೆ ಕೆಲ ಸಿನಿಮಾಗಳು 500 ರಿಂದ 2000 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಮುರಿದಿದೆ. ಆ ಸಿನಿಮಾಗಳು ಯಾವುವು ಎಂದು ಇಲ್ಲಿ ತಿಳಿದುಕೊಳ್ಳೋಣ ಬನ್ನಿ..
ಸಂಜು ಬಾಲಿವುಡ್ ಚಿತ್ರವನ್ನು ರಾಜ್ ಕುಮಾರ್ ಹಿರಾನಿ ಅವರು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ರಣಬೀರ್ ಕಪೂರ್, ವಿಕ್ಕಿ ಕೌಶಾಲ್, ಅನುಷ್ಕಾ ಶರ್ಮಾ, ದಿಯಾ ಮಿರ್ಜಾ, ಪರೇಶ್ ರಾವಲ್ ಇನ್ನು ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಇದರ ಬಜೆಟ್ 96 ಕೋಟಿ ಮತ್ತು ಕಲೆಕ್ಷನ್ 576 ಕೋಟಿ.
ಸುಲ್ತಾನ್ ಬಾಲಿವುಡ್ ಚಿತ್ರವನ್ನು ಅಲಿ ಅಬ್ಬಾಸ್ ಜಾಫರ್ ಅವರು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮಾ ಅವರು ಮುಖ್ಯವಾದ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರ ಬಜೆಟ್ 145 ಕೋಟಿ ಮತ್ತು ಕಲೆಕ್ಷನ್ 623 ಕೋಟಿ.
ಬಾಹುಬಲಿ ಪಾರ್ಟ್ 1 ತೆಲುಗು ಚಿತ್ರವನ್ನು ಎಸ್ ಎಸ್ ರಾಜಮೌಳಿ ಅವರು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಡಾರ್ಲಿಂಗ್ ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ, ತಮನ್ನಾ, ರಮ್ಯಕೃಷ್ಣ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಇದರ ಬಜೆಟ್ 180 ಕೋಟಿ ಮತ್ತು ಕಲೆಕ್ಷನ್ 650 ಕೋಟಿ.
ರೋಬೋ 2.0 ಚಿತ್ರವನ್ನು ಎಸ್ ಶಂಕರ್ ಅವರು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ರಜನಿಕಾಂತ್, ಆಮಿ ಜಾಕ್ಸನ್, ಅಕ್ಷಯ್ ಕುಮಾರ್, ಐಶ್ವರ್ಯ ರೈ ಬಚ್ಚನ್ ಇನ್ನೂ ಮುಂತಾದ ಕಲಾವಿದರು ಅಭಿನಯ ಮಾಡಿದ್ದಾರೆ. ಇದರ ಬಜೆಟ್ 600 ಕೋಟಿ ಮತ್ತು ಕಲೆಕ್ಷನ್ 800 ಕೋಟಿ.
ಪಿ.ಕೆ ಬಾಲಿವುಡ್ ಚಿತ್ರವನ್ನು ರಾಜಕುಮಾರ್ ಹಿರಾನಿ ಅವರು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಅಮೀರ್ ಖಾನ್, ಅನುಷ್ಕಾ ಶರ್ಮಾ, ಸುಶಾಂತ್ ಸಿಂಗ್ ರಜ್ಪೂತ್, ಸಂಜಯ್ ದತ್ ಇನ್ನೂ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಇದರ ಬಜೆಟ್ 85 ಕೋಟಿ ಮತ್ತು ಕಲೆಕ್ಷನ್ 854 ಕೋಟಿ.
ಸೀಕ್ರೆಟ್ ಸೂಪರ್ ಸ್ಟಾರ್ ಬಾಲಿವುಡ್ ಚಿತ್ರವನ್ನು ಅದ್ವೈತ್ ಚಂದನ್ ಅವರು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಜೈರಾ ವಾಸಿಮ್, ಆಮೀರ್ ಖಾನ್, ಮೆಹರ್ ವಿಜ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಇದರ ಬಜೆಟ್ 15 ಕೋಟಿ ಮತ್ತು ಕಲೆಕ್ಷನ್ 977 ಕೋಟಿ.
ಭಜರಂಗಿ ಭಾಯ್ ಜಾನ್ ಬಾಲಿವುಡ್ ಚಿತ್ರವನ್ನು ಕಬೀರ್ ಖಾನ್ ಅವರು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಸಲ್ಮಾನ್ ಖಾನ್, ಕರೀನಾ ಕಪೂರ್ ಮುಂತಾದ ಕಲಾವಿದರು ನಟಿಸಿದ್ದಾರೆ. ಇದರ ಬಜೆಟ್ 90 ಕೋಟಿ ಮತ್ತು ಕಲೆಕ್ಷನ್ 969 ಕೋಟಿ.
ಬಾಹುಬಲಿ ಪಾರ್ಟ್ 2 ತೆಲುಗಿ ಚಿತ್ರವನ್ನು ಎಸ್ ಎಸ್ ರಾಜಮೌಳಿ ಅವರು ನಿರ್ದೇಶನ ಮಾಡಿದ್ದಾರೆ. ಇದರ ಬಜೆಟ್ 250 ಕೋಟಿ ಮತ್ತು ಕಲೆಕ್ಷನ್ 1810 ಕೋಟಿ.
ಆರ್ ಆರ್ ಆರ್ ತೆಲುಗು ಚಿತ್ರವನ್ನು ಎಸ್ ಎಸ್ ರಾಜಮೌಳಿ ಅವರು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ರಾಮ್ ಚರಣ್, ಅಜಯ್ ದೇವ್ ಗನ್, ಎನ್.ಟಿ.ಆರ್, ಆಲಿಯಾ ಭಟ್, ಶ್ರೇಯಾ ಇನ್ನು ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಇದರ ಬಜೆಟ್ 550 ಕೋಟಿ ಮತ್ತು ಬಿಡುಗಡೆಯಾದ 15 ದಿನಗಳಿಗೆ 1000 ಕೋಟಿಗಳನ್ನು ಮೀರಿದೆ.
ದಂಗಲ್ ಬಾಲಿವುಡ್ ಚಿತ್ರವನ್ನು ನಿತೇಶ್ ತಿವಾರಿ ಅವರು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಅಮೀರ್ ಖಾನ್, ಸಾಕ್ಷಿ ತನ್ವರ್, ಫಾತಿಮಾ, ಜೈರಾ ವಾಸಿಮ್ ಇನ್ನು ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಇದರ ಬಜೆಟ್ 75 ಕೋಟಿ ಮತ್ತು ಕಲೆಕ್ಷನ್ 2024 ಕೋಟಿ.
ಇನ್ನೂ ನೆನ್ನೆಯಷ್ಟೇ ಬಿಡುಗಡೆಯಾದ ಪ್ರಶಾಂತ್ ನೀಲ್ ಅವರ ನಿರ್ದೇಶನದ ಕೆಜಿಎಫ್ ಪಾರ್ಟ್ 2 ಕನ್ನಡ ಸಿನಿಮಾ ಕೂಡ ಎಲ್ಲಾ ಬಾಕ್ಸಾಫೀಸ್ ನಲ್ಲಿ ಮೀರಿಸಿ ಇದು ನಮ್ಮ ಭಾರತ ದೇಶಕ್ಕೆ ಒಂದು ಹೆಸರನ್ನು ತಂದುಕೊಡಲಿದೆ.
ಇದು ಕೂಡ 500 ಕೋಟಿ ರೂ.ಗಳನ್ನು ಬಾಕ್ಸ್ ಆಫೀಸ್ ನಲ್ಲಿ ಮೀರುತ್ತದೆ. ಇದಕ್ಕಿಂತ ಕೂಡ ಇನ್ನೂ ಹೆಚ್ಚಾಗಿ ಕಲೆಕ್ಷನ್ ಅನ್ನು ಪಡೆಯುವುದರಲ್ಲಿ ಯಾವುದೇ ಸಂಶಯ ಇಲ್ಲ…..