ದಕ್ಷಿಣ ಭಾರತದ ಖ್ಯಾತ ನಟಿ ಪ್ರಣೀತಾ ಸುಭಾಷ್ ಅವರು ತಮ್ಮ ಸೀಮಂತ ಶಾಸ್ತ್ರದ ಕೆಲ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಪ್ರಣಿತಾ ಸುಭಾಷ್ ಅವರು ಕಳೆದ ವರ್ಷ ಮೇ 30 2021 ರಂದು ತುಂಬ ಸರಳವಾಗಿ ಕಡಿಮೆ ಜನರ ಸಮ್ಮುಖದಲ್ಲಿ ಬಿಸಿನೆಸ್ ಮನ್ ಆಗಿರುವ ನಿತಿನ್ ರಾಜು ಎನ್ನುವವರನ್ನು ವಿವಾಹ ಮಾಡಿಕೊಂಡರು.
ಇನ್ನೂ ಇವರಿಬ್ಬರು ಬಹು ವರ್ಷಗಳ ಕಾಲ ಪ್ರೀತಿಸಿ ನಂತರ ಮನೆಯವರನ್ನೆಲ್ಲಾ ಒಪ್ಪಿಸಿ ವಿವಾಹ ಮಾಡಿಕೊಂಡಿದ್ದಾರೆ. ಪ್ರಣೀತಾ ಸುಭಾಷ್ ಅವರು ಅಕ್ಟೋಬರ್ 17 1992 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಹಾರ್ವರ್ಡ್ ಕೆನೆಡಿ ಶಾಲೆಯಲ್ಲಿ ತಮ್ಮ ಶಾಲೆಯ ಶಿಕ್ಷಣವನ್ನು ಮುಗಿಸಿದ್ದಾರೆ. ಇನ್ನು ಇವರ ತಂದೆಯ ಹೆಸರು ಸುಭಾಷ್ ಮತ್ತು ತಾಯಿಯ ಹೆಸರು ಜಯಶ್ರೀ.
ಪ್ರಣಿತಾ ಸುಭಾಷ್ ಅವರು ಕನ್ನಡ ತೆಲುಗು ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಣೀತಾ ಅವರು ಮೊದಲು 2010 ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಪೊರ್ಕಿ ಚಿತ್ರದ ಮೂಲಕ ಮೊಟ್ಟ ಮೊದಲನೆಯದಾಗಿ ಬೆಳ್ಳಿತೆರೆಗೆ ಕಾಲಿಟ್ಟರು.
ಇದಾದ ಮೇಲೆ ಜರಾಸಂಧ, ಭೀಮಾ ತೀರದಲ್ಲಿ, ಸ್ನೇಹಿತರು, ಮಿಸ್ಟರ್ 420, ವಿಸೆಲ್, ಅಂಗಾರಕ, ಬ್ರಹ್ಮ, ಎ ಸೆಕೆಂಡ್ ಹಾಫ್ ಲವರ್, ಜಗ್ಗುದಾದ, ಮಾಸ್ ಲೀಡರ್ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ತೆಲುಗಿನಲ್ಲಿ ನೋಡಿದರೆ 2010 ರಲ್ಲಿ ಏಮ್ ಪಿಲ್ಲೋ ಏಮ್ ಪಿಲ್ಲಾಡೋ ಚಿತ್ರದ ಮೂಲಕ ಟಾಲಿವುಡ್ ಗೆ ಪ್ರವೇಶ ಮಾಡಿದರು.
ಪ್ರಣೀತಾ ಅವರು ಎಲ್ಲ ಭಾಷೆಗಳಲ್ಲಿ ಸೇರಿ ಸುಮಾರು 25 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಪ್ರಣಿತಾ ಸುಭಾಷ್ ಅವರು ತಮ್ಮ ಮೆಟರ್ನಿಟಿ ಫೋಟೊಶೂಟ್ ಮಾಡಿಸಿಕೊಂಡು ಕೆಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದೀಗ ಇವರು ಹಿಂದೂ ಸಾಂಪ್ರದಾಯಿಕವಾಗಿ ಸೀಮಂತ ಶಾಸ್ತ್ರವನ್ನು ಮಾಡಿಕೊಂಡಿದ್ದು ಅದರ ಕೆಲ ಸುಂದರ ದೃಶ್ಯಗಳನ್ನು ನೀವು ನೋಡಬಹುದು…..