15 ವರ್ಷಗಳ ಬಳಿಕ ತನ್ನ ಆಪ್ತ ಗೆಳತಿಯನ್ನು ಭೇಟಿಯಾದಾಗ ನಟ ಶ್ರೀಮುರುಳಿ ಮಾಡಿದ್ದೇನು? ಫ್ರೆಂಡ್ಸ್ ಅಂದ್ರೆ ಹೀಗಿರಬೇಕು!!!
ಕನ್ನಡದ ಖ್ಯಾತ ನಟಿ ಮಾನ್ಯ ನಾಯ್ಡು ಮತ್ತು ಶ್ರೀಮುರಳಿ ಅವರು ಒಳ್ಳೆಯ ಸ್ನೇಹಿತರು. ಇವರಿಬ್ಬರು 15 ವರ್ಷಗಳ ನಂತರ ಭೇಟಿಯಾಗಿದ್ದಾರೆ. 15 ವರ್ಷಗಳ ನಂತರ ಭೇಟಿಯಾಗುವುದರ ಸಲುವಾಗಿ ಇವರಿಬ್ಬರು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಇವರ ಒಂದು ಚಿಕ್ಕ ವಿಡಿಯೋ ತುಣುಕು ನಿಮಗಾಗಿ ಇಲ್ಲಿದೆ ನೋಡಿ.
ಇನ್ನೂ ಮಾನ್ಯ ನಾಯ್ಡು ಅವರು ಅಕ್ಟೋಬರ್ 17 1982 ರಂದು ಜನಿಸಿದ್ದಾರೆ. ಇವರು ಮಲಯಾಳಂ ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರದ್ದು ಮಾತೃಭಾಷೆ ತೆಲುಗು ಆಗಿದ್ದರೂ ಕೂಡ ಕನ್ನಡ ಎಷ್ಟು ಚೆನ್ನಾಗಿ ಮಾತನಾಡುತ್ತಾರೆ ಗೊತ್ತಾ. ಇನ್ನೂ ಮಾನ್ಯ ಅವರ ತಂದೆಯ ಹೆಸರು ಪ್ರಹ್ಲಾದ ಮತ್ತು ತಾಯಿಯ ಹೆಸರು ಪದ್ಮಿನಿ. ಇವರಿಗೆ ಅಂಜನಾ ಎನ್ನುವ ತಂಗಿ ಕೂಡ ಇದ್ದಾರೆ.
ಮಾನ್ಯ ನಾಯ್ಡು ಅವರು ಕೇವಲ 14 ವರ್ಷದ ವಯಸ್ಸಿನಲ್ಲಿದ್ದಾಗಲೇ ಚೈಲ್ಡ್ ಆರ್ಟಿಸ್ಟ್ ಆಗಿ ತಮ್ಮ ಮಾಡೆಲಿಂಗ್ ಕೆರಿಯರ್ ಶುರು ಮಾಡಿಕೊಂಡರು. ಇದಾದ ಮೇಲೆ ಇವರು ಮಲಯಾಳಂನಲ್ಲಿ 1989 ರಲ್ಲಿ ಸ್ವಂತಂ ಇನ್ನೂ ಕಾರುತಿ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಗೆ ಕಾಲಿಟ್ಟರು. ಇನ್ನೂ ನಮ್ಮ ಕನ್ನಡದಲ್ಲಿ 2005 ರಲ್ಲಿ ವರ್ಷ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.
ತದನಂತರ ಶಾಸ್ತ್ರೀ, ಶಂಭು, ಬೆಳ್ಳಿಬೆಟ್ಟ, ಅಂಬಿ, ಸುಂಟರಗಾಳಿ, ಈ ಪ್ರೀತಿ ಒಂಥರಾ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಮಾನ್ಯ ನಾಯ್ಡು ಅವರು ವಿಕಾಸ ಬಾಜಿಪೈ ಅವರನ್ನು 2013 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಒಮಿಷ್ಕಾ ಎನ್ನುವ ಮುದ್ದಾದ ಮಗಳು ಸಹ ಇದ್ದಾರೆ.
ಇನ್ನು ಶ್ರೀಮುರಳಿ ಅವರು ಸ್ಯಾಂಡಲ್ ವುಡ್ ನಲ್ಲಿ ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದಾರೆ. ಇವರ ತಂದೆಯ ಹೆಸರು ಎಸ್ ಎ ಚಿನ್ನೇಗೌಡ ಮತ್ತು ತಾಯಿಯ ಹೆಸರು ಜಯಮ್ಮ ಎಂದು. ಇವರು 2003 ರಲ್ಲಿ ಬಿಡುಗಡೆಯಾದ ಚಂದ್ರ ಚಕೋರಿ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು.
ಇದಾದ ಮೇಲೆ ಸಾಕಷ್ಟು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಶ್ರೀಮುರಳಿ ಅವರು ವಿದ್ಯಾ ಎನ್ನುವವರನ್ನು 2008 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಅಗಸ್ತ್ಯ ಶ್ರೀಮುರಳಿ ಮತ್ತು ಅತೀವ ಶ್ರೀಮುರಳಿ ಎನ್ನುವ ಇಬ್ಬರು ಮಕ್ಕಳಿದ್ದಾರೆ…..