Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಾಲ್ಯ ವಯಸ್ಸಿನ ಕೆಲ ಅಪರೂಪದ ಫೋಟೋಗಳು..!!

0

ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಅವರಿಗೆ ಹ್ಯಾಟ್ರಿಕ್ ಹೀರೋ ಎನ್ನುವ ಬಿರುದು ಹೇಗೆ ಬಂತು ಎಂದರೆ ಇವರು ಮೊದಲನೆಯದಾಗಿ ನಟಿಸಿದ ಸತತ 3 ಸಿನಿಮಾಗಳು ಕೂಡ ನೂರು ದಿನಗಳು ದಾಟಿತು. ಹೀಗಾಗಿ ಇವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎನ್ನುವ ಹೆಸರು ಬಂತು. ಶಿವರಾಜ್ ಕುಮಾರ್ ಅವರು ಜುಲೈ 12 1962 ರಂದು ಜನಿಸಿದ್ದಾರೆ. ಇವರ ಮೊದಲನೆಯ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ ಎಂದು.

ಇನ್ನು ಶಿವರಾಜ್ ಕುಮಾರ್ ಅವರು ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಹಿರಿಯ ಮಗ. ಹಾಗೆ ಶಿವರಾಜ್ ಕುಮಾರ್ ಅವರಿಗೆ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಲಕ್ಷ್ಮಿ ಮತ್ತು ಪೂರ್ಣಿಮಾ ಎನ್ನುವ ಸಹೋದರರು ಸಹೋದರಿಯರು ಕೂಡ ಇದ್ದಾರೆ. ಇದರಲ್ಲಿ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾದರು.

 

ಶಿವರಾಜ್ ಕುಮಾರ್ ಅವರು ಚೆನ್ನೈ ನಲ್ಲಿ ತಮ್ಮ ಶಾಲೆ ಮತ್ತು ಕಾಲೇಜಿನ ಶಿಕ್ಷಣವನ್ನು ಮಾಡಿ ಮುಗಿಸಿದ್ದಾರೆ. ಇದಾದ ಮೇಲೆ ಇವರು ಕೆಮಿಸ್ಟ್ರಿಯಲ್ಲಿ ಬಿ.ಎಸ್.ಸಿ ಪದವಿಯನ್ನು ಕೂಡ ಓದಿ ಮುಗಿಸಿದ್ದಾರೆ. ಶಿವರಾಜ್ ಕುಮಾರ್ ಅವರು ಖ್ಯಾತ ನಿರ್ದೇಶಕರಾದ ಕೆ.ಬಾಲಚಂದರ್ ಅವರ ನೇತೃತ್ವದಲ್ಲಿ ಆಕ್ಟಿಂಗ್ ತರಬೇತಿಗೆ ಸೇರ್ಪಡೆಯಾದರು. ಇದಾದ ಮೇಲೆ ಇವರು ಕೂಚುಪುಡಿ ನೃತ್ಯವನ್ನು ಕಲಿತರು.

ತದನಂತರ ಶಿವರಾಜ್ ಕುಮಾರ್ ಅವರು 1974 ರಲ್ಲಿ ಬಿಡುಗಡೆಯಾದ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಇವರು ಬಾಲ ನಟರಾಗಿ ತೆರೆಯ ಮೇಲೆ ಕಾಣಿಸಿದರು. ತದನಂತರ 1986 ರಲ್ಲಿ ಆನಂದ್ ಚಿತ್ರದ ಮೂಲಕ ಇವರು ಹೀರೋ ಆಗಿ ಪಾದಾರ್ಪಣೆ ಮಾಡಿದರು. ಇದಾದ ಮೇಲೆ ಇವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವರು ಕನ್ನಡದಲ್ಲಿ ಮೊತ್ತ 100 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ಇನ್ನು ಶಿವರಾಜ್ ಕುಮಾರ್ ಅವರು ಮಾಜಿ ಸಿಎಂ ಬಂಗಾರಪ್ಪ ಅವರ ಮಗಳು ಗೀತಾ ಅವರನ್ನು 1986 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ನಿರುಪಮ ರಾಜ್ ಕುಮಾರ್ ಮತ್ತು ನಿವೇದಿತ ರಾಜ್ ಕುಮಾರ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಲ್ಲಿ ನೀವು ಶಿವರಾಜ್ ಕುಮಾರ್ ಅವರ ಬಾಲ್ಯ ವಯಸ್ಸಿನ ಕೆಲ ಅಪರೂಪದ ಫೋಟೋಗಳನ್ನು ನೋಡಬಹುದು…..

Leave A Reply