ದಕ್ಷಿಣ ಭಾರತದ ಖ್ಯಾತ ನಟಿ ಆಗಿರುವ ಜಯಚಿತ್ರಾ ಅವರು ಕನ್ನಡದಲ್ಲಿ ಹುಲಿ ಹಾಲಿನ ಮೇವು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು. ಇವರು ಸೆಪ್ಟೆಂಬರ್ 9 1957 ರಂದು ಚೆನ್ನೈನಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಮಹೀಂದ್ರಾ ಮತ್ತು ತಾಯಿಯ ಹೆಸರು ಅಮ್ಮಾಜಿ ಎಂದು.
ಇವರ ತಂದೆ ಮೊದಲು ಲಾಯರ್ ಆಗಿದ್ದರು ತದನಂತರ ವೆಟರ್ನರಿ ಡಾಕ್ಟರ್ ಆಗಿ ಕೆಲಸ ಮಾಡಿದ್ದರು ಮತ್ತು ತಾಯಿ ನಟ್ಟಿಯಾಗಿದ್ದು ಸಾಕಷ್ಟು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರು 1970 ಮತ್ತು 1980ರ ಸಮಯದಲ್ಲಿ ಟಾಪ್ ಲೀಡಿಂಗ್ ನಟಿಯಾಗಿ ಮಿಂಚ್ಚಿದ್ದಾರೆ. ಇವರು ತಮಿಳು ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
ಜಯಚಿತ್ರ ಅವರು ಕೇವಲ 6 ವರ್ಷದಲ್ಲಿದ್ದಾಗಲೇ ತೆಲುಗಿನಲ್ಲಿ ಭಕ್ತ ಪೋತನ ಎನ್ನುವ ಚಿತ್ರದ ಮೂಲಕ ಬಾಲನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಮಾಡಿದರು. ತದನಂತರ 1968 ರಲ್ಲಿ ಮಣ್ಣಿನ ಮಗ ಎನ್ನುವ ಚಿತ್ರದ ಮೂಲಕ ಇವರು ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.
ಇದಾದ ಮೇಲೆ ಹುಲಿಯ ಹಾಲಿನ ಮೇವು, ಕುಳ್ಳ ಕುಳ್ಳಿ, ಮನೆ ಮನೆ ಕಥೆ, ಅಪರಂಜಿ, ಸತ್ವಪರೀಕ್ಷೆ, ಪ್ರೇಮಲೋಕ, ರಣಧೀರ, ಲಾಕಪ್ ಡೆತ್, ವಿಜಯದಶಮಿ, ಅಟ್ಟಹಾಸ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರು ಕೇವಲ ನಟಿ ಮಾತ್ರವಲ್ಲ ಪುದಿಯಾ ರಾಗಂ ಎನ್ನುವ ತಮಿಳು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಮತ್ತು ಸ್ವತಃ ಅದರಲ್ಲಿ ನಟಿಸಿದ್ದಾರೆ.
ಇದಾದ ಮೇಲೆ ತಮ್ಮ ಮಗ ಅಮರೇಶ್ ಗಣೇಶ್ ಅವರು ನಟಿಸಿದ ನಾನು ಎನ್ನೂಲ್ ಇಲ್ಲೈ ಎನ್ನುವ ತಮಿಳು ಚಿತ್ರವನ್ನು ಜಯಚಿತ್ರ ಅವರು ಬರೆದು ನಿರ್ದೇಶಿಸಿ ಮತ್ತು ನಿರ್ಮಾಣ ಕೂಡ ಮಾಡಿದ್ದಾರೆ. ಈ ಸಿನಿಮಾ 2010 ರಲ್ಲಿ ಬಿಡುಗಡೆಯಾಯಿತು.
ಇನ್ನೂ ಜಯಚಿತ್ರ ಅವರು 1983 ರಲ್ಲಿ ಗಣೇಶ್ ಎಂಬವರನ್ನು ವಿವಾಹ ಮಾಡಿಕೊಂಡಿದ್ದಾರೆ. ಜಯಚಿತ್ರ ಅವರು ಈಗಲೂ ಸಹ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯ ಮಾಡುತ್ತಾ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ನಟ ಜಯಚಿತ್ರ ಅವರಿಗೆ ಈಗ 64 ವರ್ಷಗಳಾಗಿವೆ ಇವರು ಈಗ ಹೇಗಿದ್ದಾರೆ ಎಂದು ನೋಡಿ…..