ಹುಚ್ಚ ವೆಂಕಟ್ ಒಟ್ಟು ಆಸ್ತಿ ಎಷ್ಟು ಗೊತ್ತಾ..?? ಅವರ ಮನೆ ಹೇಗಿದೆ ನೋಡಿ, ಅಬ್ಬಬ್ಬಾ! ಎಷ್ಟು ಕಾರುಗಳಿವೆ ನೋಡಿದರೆ ನಿಜಕ್ಕೂ ಬೆರಗಾಗುತ್ತಿರಿ…
ನಮಸ್ಕಾರ ಸ್ನೇಹಿತರೇ, ಹುಚ್ಚ ವೆಂಕಟ್ ಇವರ ಬಗ್ಗೆ ನಿಮಗೆ ಬಹಳ ಚೆನ್ನಾಗಿ ಗೊತ್ತಿರುತ್ತದೆ. ಚಂದನವನದಲ್ಲಿ ನಟನಾಗಿ ನಿರ್ಮಾಪಕನಾಗಿ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಇವರು ಸಿನಿಮಾಳಿಗಿಂತ ಹೆಚ್ಚಾಗಿ ವಿವಾದಗಳಲ್ಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಹುಚ್ಚ ವೆಂಕಟ್ ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಸಹ ಬಂದು ವಿವಾದಕ್ಕೆ ಕಾರಣವಾಗಿದ್ದರು.
ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದುಕೊಂಡಿರುವ ಹುಚ್ಚ ವೆಂಕಟ್ ಅವರು ಇದೀಗ ಒಂದು ಪ್ರೆಸ್ಸ್ ಮೀಟ್ ಕರೆದು ತಾವು ಚಿತ್ರರಂಗಕ್ಕೆ ವಾಪಸ್ ಬರುವ ಬಗ್ಗೆ ಮಾತನಾಡಿದರು. ಹಲವಾರು ಸಂಕಷ್ಟಗಳನ್ನು ನೋಡಿದ ಹುಚ್ಚ ವೆಂಕಟ್ ಅವರ ಬ್ಯಾಂಕ್ ಬ್ಯಾಲೆನ್ಸ್ ಈಗ ಎಷ್ಟಿದೆ ಗೊತ್ತಾ? ಒಂದು ಸಂದರ್ಶನದಲ್ಲಿ ಅವರು ಇದರ ಬಗ್ಗೆ ಹೇಳಿದ್ದೇನು ಗೊತ್ತಾ? ಹಾಗಾದರೆ ನೋಡೋಣ ಬನ್ನಿ.
ಹುಚ್ಚ ವೆಂಕಟ್ ಅವರು ಒಳ್ಳೆಯ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಸಿನಿಮಾ ಪ್ರಪಂಚದ ಮೇಲೆ ಇವರಿಗೆ ಬಹಳ ಶ್ರದ್ಧೆ ಇತ್ತು. ಹುಚ್ಚ ವೆಂಕಟ್ ಅವರು ಮೊದಲ ಫೇಮಸ್ ಆಗಿದ್ದು ಯೂಟ್ಯೂಬ್ ವಿಡಿಯೋ ಮೂಲಕ. ಕನ್ನಡದ ಬಗ್ಗೆ ಕರ್ನಾಟಕಕ್ಕೆ ಗೌರವ ಕೊಡುವ ಬಗ್ಗೆ ಮಾತನಾಡಿ ವೀಡಿಯೋಗಳನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಇದರಿಂದ ಅವರು ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ನನ್ನ ಅಕೌಂಟ್ ನಲ್ಲಿ ಸುಮಾರು 4 ಕೋಟಿ ಹಣ ಅಷ್ಟೇ ಉಳಿದಿದೆ.
ಅಷ್ಟು ಹಣವನ್ನು ನಾನು ನನ್ನ ಸಿನಿಮಾ ಹುಚ್ಚ ವೆಂಕಟ್ ಸಿನಿಮಾಗೆ ಹಾಕುತ್ತಿದ್ದೇನೆ, ಕನ್ನಡಿಗರು ದಯವಿಟ್ಟು ನನ್ನನ್ನು ಗೆಲ್ಲಿಸಿ ಎಂದು ಹುಚ್ಚ ವೆಂಕಟ್ ಅವರು ಮಾಧ್ಯಮಗಳ ಜೊತೆ ಮಾತನಾಡಿ ಭಾವುಕರಾಗಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಸಮಸ್ಯೆಯಿಂದ ಕಷ್ಟಪಡುತ್ತಿದ್ದ ವೆಂಕಟ್ ಅವರಿಗೆ ಸಹಾಯ ಸಿಕ್ಕಿದ್ದೆ ಯುಟ್ಯೂಬ್ ಚಾನೆಲ್ ಗಳ ಮುಖಾಂತರ.
ಇನ್ನು ಹುಚ್ಚವೆಂಕಟ್ ಅವರಿಗೆ ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಇದೆ. ಮತ್ತೊಂದು ಮನೆಯನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಇದರ ಜೊತೆಗೆ ಇವರಿಗೆ ಎರಡು ಕಾರುಗಳು ಸಹ ಇದೆ. ಯುಟ್ಯೂಬ್ ಚಾನಲ್ ನಲ್ಲಿ ಇಂಟರ್ವ್ಯೂ ಕೊಡಲು ಹಣ ಪಡೆಯುತ್ತಿದ್ದಾರಂತೆ. ಈ ರೀತಿಯಾಗಿ ವೆಂಕಟ್ ಅವರಿಗೆ ಸಹಾಯವಾಗುತ್ತಿದೆ ಯುಟ್ಯೂಬ್ ಚಾನೆಲ್. ಹುಚ್ಚ ವೆಂಕಟ್ ಅವರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ಏನು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ….