ಕನ್ನಡದ ಹಿರಿಯ ನಟರಲ್ಲಿ ಲಕ್ಷ್ಮಣ ಅವರು ಕೂಡ ಒಬ್ಬರು ಎಂದು ಹೇಳಬಹುದು. ಆದರೆ ದುರದೃಷ್ಟವಶಾತ್ ಇವರು ಹೃದಯಘಾತದಿಂದ ಇದೇ ವರ್ಷ ಜನವರಿ ತಿಂಗಳಿನಂದು ಹೃದಯಘಾತದಿಂದ ಸಾವನ್ನಪ್ಪಿದರು. ಇವರ ಸಾವಿನಿಂದ ಅವರ ಕುಟುಂಬದವರು ಜೊತೆಗೆ ಸಾಕಷ್ಟು ಅಭಿಮಾನಿಗಳು ದುಃಖವನ್ನು ಅನುಭವಿಸುತ್ತಿದ್ದಾರೆ. ಇನ್ನು ಇವರಿಗೆ 74 ವರ್ಷಗಳಾಗಿದ್ದು ಹೃದಯ ನೋವಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು.
ನಂತರ ಆಸ್ಪತ್ರೆಯಲ್ಲಿ ಮತ್ತೆ ತೀವ್ರ ಹೃದಯಘಾತದಿಂದ ಮೃತಪಟ್ಟರು. ಇವರ ಶರೀರವನ್ನು ಅಂತಿಮ ದರ್ಶನಕ್ಕಾಗಿ ತಮ್ಮ ಮನೆಯಲ್ಲಿಯೇ ಇರಿಸಲಾಗಿತ್ತು. ಇನ್ನು ಲಕ್ಷ್ಮಣ್ ಅವರು ಹಿರಿಯ ಕಲಾವಿದರಾಗಿ ಕನ್ನಡ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಇವರು ಸುಮಾರು 200 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ವಿವಿಧ ಪಾತ್ರಗಳಲ್ಲಿ ನಟಿಸಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದರು.
ಇನ್ನು ದಿವಂಗತ ಡಾ ರಾಜ್ ಕುಮಾರ್, ದಿವಂಗತ ಅಂಬರೀಶ್, ದಿವಂಗತ ವಿಷ್ಣುವರ್ಧನ್, ದಿವಂಗತ ಶಂಕರ್ ನಾಗ್ ಸೇರಿದಂತೆ ಹಲವಾರು ದೊಡ್ಡ ದೊಡ್ಡ ನಟರ ಜೊತೆಗೆ ಸಾಕಷ್ಟು ಚಿತ್ರಗಳಲ್ಲಿ ಲಕ್ಷ್ಮಣ ಅವರು ಅವರು ಅಭಿನಯ ಮಾಡಿದ್ದಾರೆ. ಇನ್ನೂ ಲಕ್ಷ್ಮಣ್ ಅವರು ಸಿನಿಮಾಗಳಲ್ಲಿ ತುಂಬಾ ನೈಜವಾದ ರೀತಿಯಲ್ಲಿ ಅಭಿನಯ ಮಾಡುತ್ತಿದ್ದರು. ಹಾಗಾಗಿ ಇವರ ನಟನೆಗೆ ಸಾಕಷ್ಟು ಅಭಿಮಾನಿಗಳು ಮನಸೋದಿದ್ದರು.
ಇನ್ನು ಲಕ್ಷ್ಮಣ್ ಅವರು ಸಿನಿಮಾ ರಂಗಕ್ಕೆ ಬರುವ ಮುನ್ನ ಇವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಇನ್ನು ಇವರ ಕೆಲವು ಗಮನಾರ್ಹ ಚಿತ್ರಗಳು ಯಾವುವು ಎಂದರೆ ದಾದಾ, ಹಾಲುಂಡ ತವರು, ಯಜಮಾನ, ಸೂರ್ಯವಂಶ, ಸಾಂಗ್ಲಿಯಾನ, ಮಲ್ಲ ಇನ್ನು ಇತ್ತೀಚಿಗೆ ಇಷ್ಟ ಬಿಡುಗಡೆಯಾದ ರವಿ ಬೋಪಣ್ಣ ಹೀಗೆ ಸಾಕಷ್ಟು ಚಿತ್ರಗಳು ಒಳ್ಳೆಯ ಹೆಸರನ್ನು ತಂದು ಕೊಟ್ಟಿದೆ.
ಇನ್ನು ಲಕ್ಷ್ಮಣ್ ಅವರಿಗೆ ಪೊಲೀಸ್ ಆಗಬೇಕೆನ್ನುವ ಆಸೆ ಇತ್ತು. ಆದರೆ ತಮ್ಮ ತಾಯಿಯ ಒತ್ತಾಯದಿಂದ ಇವರು ರಂಗಭೂಮಿಗೆ ಪ್ರವೇಶ ಮಾಡಿ ಈಗ ಕನ್ನಡ ಇಂಡಸ್ಟ್ರಿಯಲ್ಲಿ ಒಳ್ಳೆಯ ನಟರಾಗಿ ಹೆಸರು ಮಾಡಿದ್ದಾರೆ. ಇನ್ನು ಇವರ ಸಾವಿನಿಂದ ನಟ ಲಕ್ಷ್ಮಣ್ ಅವರ ಹೆಂಡತಿ ಮಕ್ಕಳು ತುಂಬಾನೇ ಅಗಲಿದ್ದಾರೆ. ಹಾಗೆ ಇವರ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾ ಮುಖಾಂತರ ತಮ್ಮ ಅಗಲಿಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ನೀವು ನಟ ಲಕ್ಷ್ಮಣ್ ಅವರ ಹೆಂಡತಿ ಮಕ್ಕಳು ಹೇಗಿದ್ದಾರೆ ಎಂಬುದನ್ನು ನೋಡಬಹುದು….