ನ್ನಡದ ಜನಪ್ರಿಯ ನಟಿ ಭವ್ಯಾ ಅವರು ಜನವರಿ 12 1966 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಕನ್ನಡದ ಜೊತೆಗೆ ಕೆಲ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ಕೂಡ ಅಭಿನಯ ಮಾಡಿದ್ದಾರೆ. ಇವರು 1985 ರಿಂದ 1992 ರವರೆಗೂ ಟಾಪ್ ಲೀಡಿಂಗ್ ನಟಿಯಾಗಿ ಮಿಂಚಿದವರು. ಇನ್ನೂ ಭವ್ಯಾ ಅವರು 1983 ರಲ್ಲಿ ಪ್ರೇಮ ಪರ್ವ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಶುರು ಮಾಡಿಕೊಂಡರು.
ಇದಾದ ಮೇಲೆ ಇವರು ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಬಹುದು. ಕಲ್ಲು ವೀಣೆ ನುಡಿಯಿತು, ಬಡ್ಡಿ ಬಂಗಾರಮ್ಮ, ಪ್ರಳಯಾಂತಕ, ಪ್ರೀತಿ, ಕೃಷ್ಣ ನೀ ಬೇಗನೆ ಬಾರೋ, ಕರುಣಾಮಯಿ, ಸಂಗ್ರಾಮ, ಸಾಂಗ್ಲಿಯಾನ, ಆವೇಶ, ರವಿವರ್ಮ, ತಾಯಿಯಿಲ್ಲದ ತಬ್ಬಲಿ, ಆಟೋಶಂಕರ್, ಜಂಭದ ಹುಡುಗಿ, ಗೋಕುಲ, ಕೃಷ್ಣ, ಶಿವಂ, ಲವ್ ಯು ಆಲಿಯ, ರಾಜತಂತ್ರ, ಅವತಾರಪುರುಷ ಇನ್ನೂ ಸಾಕಷ್ಟು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಬಹುದು.
ನಟಿ ಭವ್ಯಾ ಅವರು ಕೊಟ್ಟ ಪಾತ್ರಗಳನ್ನು ತುಂಬ ಅಚ್ಚುಕಟ್ಟಾಗಿ ಮಾಡುತ್ತಿದ್ದರಂತೆ. ಇನ್ನೂ ಇವರು ಹೆಚ್ಚಾಗಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆಗೆ ಅಭಿನಯಿಸಿದ್ದಾರೆ. ಹಾಗೆಯೇ ಭವ್ಯಾ ಅವರು ಶಂಕರ್ ನಾಗ್ ಅವರ ಜೊತೆ ಅಭಿನಯಿಸಿದ ಎಸ್ ಪಿ ಸಾಂಗ್ಲಿಯಾನ ಚಿತ್ರ ಅಂತೂ ತುಂಬಾನೇ ಹಿಟ್ ಎಂದು ಹೇಳಬಹುದು.
ಇನ್ನು ಭವ್ಯಾ ಅವರು ಮುಖೇಶ್ ಪಾಟೀಲ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಮುಖೇಶ್ ಪಾಟೀಲ್ ಅವರು ಮುಂಬೈನಲ್ಲಿ ಒಬ್ಬ ಹೋಟೆಲ್ ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ. ಇವರಿಗೆ ಒಬ್ಬರು ಮಗಳು ಸಹ ಇದ್ದಾರೆ. ಇನ್ನೂ ತಮ್ಮ ಮಗಳನ್ನು ಸಿನಿಮಾ ರಂಗದಿಂದ ದೂರ ಇಟ್ಟಿದ್ದಾರೆ.
ಹೌದು ಇವರು ತಮ್ಮ ಮಗಳನ್ನು ವಿದೇಶಕ್ಕೆ ಕಳುಹಿಸಿ ಅಲ್ಲಿ ಉನ್ನತ ಶಿಕ್ಷಣವನ್ನು ಕೊಡಿಸುತ್ತಿದ್ದಾರೆ. ಪ್ರಸ್ತುತ ನಟಿ ಭವ್ಯಾ ಅವರು ತಮ್ಮ ಪತಿಯ ಜೊತೆಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ನಟಿ ಭವ್ಯಾ ಅವರ ಸುಂದರ ಕುಟುಂಬ ಹೇಗಿದೆ ಎಂದು ಕೆಲ ದೃಶ್ಯಗಳಿಂದ ನೋಡಬಹುದು…..