ಹಿಟ್ಲರ್ ಕಲ್ಯಾಣ ಧಾರಾವಾಹಿಯ ಜನಪ್ರಿಯ ನಟ ದಿಲೀಪ್ ರಾಜ್ ಅವರು ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ. ಹೌದು ತಮ್ಮ ಹೊಸ ಮನೆಯ ಗೃಹಪ್ರವೇಶವನ್ನು ಈಗಾಗಲೇ ಮಾಡಿದ್ದು ತಮ್ಮ ಮನೆಗೆ ರಾಜ್ ಶ್ರೀ ಎನ್ನುವ ಹೆಸರನ್ನು ಇಟ್ಟಿದ್ದಾರೆ. ಹಾಗೆಯೇ ಇವರ ಮನೆಯ ಗೃಹ ಪ್ರವೇಶಕ್ಕೆ ಸಾಕಷ್ಟು ಕಲಾವಿದರು ಬಂಧು ಮಿತ್ರರು ಮತ್ತು ಸ್ನೇಹಿತರು ಆಗಮಣ ಮಾಡಿದ್ದರು.
ದಿಲೀಪ್ ರಾಜ್ ಅವರು ತಮ್ಮ ಪತ್ನಿ ಶ್ರೀವಿದ್ಯಾ ಅವರ ಜೊತೆಗೆ ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಇನ್ನೂ ದಿಲೀಪ್ ರಾಜ್ ಅವರು ಸೆಪ್ಟೆಂಬರ್ 2 1978 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು 2005 ರಂದು ಬಾಯ್ ಫ್ರೆಂಡ್ ಎನ್ನುವ ಕನ್ನಡ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು.
ಇದಾದ ಮೇಲೆ ನನ್ನ ಲವ್ ಮಾಡ್ತೀಯಾ, 7 ಓ ಕ್ಲಾಕ್, ಮಿಲನ, ನಿನಗಾಗಿ ಕಾದಿರುವೆ, ಲವ್ ಗುರು, ಕಿಲಾಡಿ ಕೃಷ್ಣ, ಗಾನ ಬಜಾನ, ಸುಗ್ರೀವ, ಪೊಲೀಸ್ ಕ್ವಾರ್ಟರ್ಸ್, ಐಯಾಮ್ ಸಾರಿ, ಮತ್ತೆ ಬನ್ನಿ ಪ್ರೀತಿಸೋಣ, ಪಂಚಾಮೃತ, ಚಾಲೆಂಜ್, ಬರ್ಫಿ, ಮಹಾನದಿ, ಟೋನಿ, ಲಕ್ಷ್ಮಿ, ಭೈರವಿ, ನನ್ ಲೈಫಲ್ಲಿ, ಮರ್ಯಾದೆ, ಮಿಂಚಾಗಿ ನೀ ಬರಲು, ಯೂಟರ್ನ್, ಅಂಬಿ ನಿಂಗ್ ವಯಸ್ಸಾಯ್ತೋ, ಕಿಸ್ಮತ್ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ಕಿರುತೆರೆಯಲ್ಲಿ ನೋಡಿದರೆ ಇವರು ಜನನಿ, ಅರ್ಧಸತ್ಯ, ರಂಗೋಲಿ, ಕುಂಕುಮ ಭಾಗ್ಯ, ಮಾಂಗಲ್ಯ, ಮಳೆಬಿಲ್ಲು, ಪ್ರೀತಿಗಾಗಿ, ರಥಸಪ್ತಮಿ ಎನ್ನುವ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರು ಕೇವಲ ನಟ ಮಾತ್ರವಲ್ಲ ಡಬ್ಬಿಂಗ್ ಆರ್ಟಿಸ್ಟ್ ಮತ್ತು ನಿರ್ಮಾಪಕ ಕೂಡ ಹೌದು. ಇವರು ಸಾಕಷ್ಟು ಕನ್ನಡದ ಕಲಾವಿದರಿಗೆ ತಮ್ಮ ಧ್ವನಿಯನ್ನು ಸಹ ನೀಡಿದ್ದಾರೆ.
ಪ್ರಸ್ತುತ ದಿಲೀಪ್ ರಾಜ್ ಅವರು ಎ.ಜೆ ಅಂದರೆ ಅಭಿರಾಮ್ ಜಯಶಂಕರ್ ಎನ್ನುವ ಪಾತ್ರದಲ್ಲಿ ಹಿಟ್ಲರ್ ಕಲ್ಯಾಣ ಎನ್ನುವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಈ ಧಾರಾವಾಹಿಯನ್ನು ಇವರು ನಿರ್ಮಾಣ ಸಹ ಮಾಡುತ್ತಿದ್ದಾರೆ. ಈ ಧಾರಾವಾಹಿ 2021 ರಿಂದ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಹಾಗೆಯೇ ವಿದ್ಯಾ ವಿನಾಯಕ, ಮತ್ತು ಪಾರು ಧಾರಾವಾಹಿಗಳನ್ನು ಕೂಡ ಇವರು ನಿರ್ಮಾಣ ಮಾಡುತ್ತಿದ್ದಾರೆ.