ಹಿಂದಿ ರಿಯಾಲಿಟಿ ಶೋ ನಲ್ಲಿ ಯಶ್ ಹವಾ ಹೇಗಿತ್ತು ಗೊತ್ತಾ ?? ಇದು ಕಣ್ರೀ ಕನ್ನಡಿಗರ ಮರ್ಯಾದೆ ಅಂದ್ರೆ, ನೋಡಿ ಲೈವ್ ವಿಡಿಯೋ !!
ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಿತ್ರದ ಮೂಲಕ ಇಡೀ ವಿಶ್ವದಲ್ಲೇ ಪ್ರಖ್ಯಾತ ಹೊಂದಿದ್ದಾರೆ. ಇವರ ಕೆಜಿಎಫ್ 1 ಚಿತ್ರ ಎಷ್ಟರ ಮಟ್ಟಿಗೆ ಇದೆ ಎಂದರೆ ಇವರಿಗೆ ವಿದೇಶಗಳಲ್ಲಿ ಮೂಲೆಮೂಲೆಗಳಲ್ಲೂ ಕೂಡ ಅಭಿಮಾನಿಗಳು ಇದ್ದಾರೆ. ನಮ್ಮ ಕನ್ನಡ ಇಂಡಸ್ಟ್ರಿಗೆ ಕೆಜಿಎಫ್ ಚಿತ್ರವೂ ಒಂದು ಕಿರೀಟ ಎಂದು ಹೇಳಬಹುದು.
ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ಮೊದಲು ಕಿರುತೆರೆಯ ನಂದಗೋಕುಲ ಧಾರಾವಾಹಿಯ ಮುಖಾಂತರ ಕಾಲಿಟ್ಟು ನಂತರ ಮೊಗ್ಗಿನ ಮನಸು ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಇದಾದ ಮೇಲೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ರಾಕಿ ಚಿತ್ರದ ಮೂಲಕ ನಾಯಕ ನಟರಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿದರು.
ಇನ್ನೂ ಕೆಜಿಎಫ್ 2 ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದ್ದು ಇದು ತೆರೆಯ ಮೇಲೆ ನೋಡಲು ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ಇನ್ನು ನಮ್ಮ ಯಶ್ ಅವರ ಹವಾ ಹೇಗಿದೆ ಎಂದರೆ ಹಿಂದಿ ರಿಯಾಲಿಟಿ ಶೋ ಆಗಿರುವ ದಿ ಬಿಗ್ ಪಿಕ್ಚರ್ ಶೋ ನಲ್ಲಿ ನೋಡಬಹುದು.
ದಿ ಬಿಗ್ ಪಿಕ್ಚರ್ ರಿಯಾಲಿಟಿ ಶೋ ಅಕ್ಟೋಬರ್ 16 2021 ರಂದು ಶುರುವಾಯಿತು ಮತ್ತು ಜನವರಿ 9 2022 ರಂದು ಮುಕ್ತಾಯವಾಯಿತು. ಇದನ್ನು ಬಾಲಿವುಡ್ ಖ್ಯಾತ ನಟ ರಣ್ವೀರ್ ಸಿಂಗ್ ಅವರು ನಿರೂಪಣೆ ಮಾಡುತ್ತಿದ್ದರು. ಇನ್ನು ಇದು ಹಿಂದಿಯ ಕಲರ್ಸ್ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಈ ಶೋ ಮೊದಲನೆಯ ಸೀಸನ್ ಆಗಿದ್ದು ಇದರಲ್ಲಿ ಮೊತ್ತ 12 ಪ್ರಶ್ನೆಗಳು ಇರುತ್ತವೆ ಹಾಗೂ ಇದಕ್ಕೆ 3 ಲೈಫ್ ಲೈನ್ ಗಳು ಸಹ ಇರುತ್ತವೆ.
ಯಾರು ಮೊತ್ತ 12 ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡುತ್ತಾರೆ ಅವರಿಗೆ ಹಣದ ಬಹುಮಾನ ಇರುತ್ತದೆ. ಇನ್ನು ಇದರಲ್ಲಿ ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಅವರು ಕೂಡ ಪಾಲ್ಗೊಂಡಿದ್ದರು. ಇದರಲ್ಲಿ 5 ಲಕ್ಷ ಪ್ರಶ್ನೆಗೆ ನಮ್ಮ ಯಶ್ ಅವರ ಬಗ್ಗೆ ಕೇಳಿದ್ದಾರೆ. ಹೌದು ಯಶ್ ಅವರು ಹಿಂದಿ ರಿಯಾಲಿಟಿ ಶೋ ನಲ್ಲಿ ಕಾಣಿಸಿದ್ದಾರೆ.
ಪ್ರಶ್ನೆ ಏನೆಂದರೆ ಯಶ್ ಅವರು ಯಾವ ಸಿನಿಮಾ ಇಂಡಸ್ಟ್ರಿಗೆ ಸೇರಿದ್ದಾರೆ ಎಂಬುದನ್ನು ಕೇಳಿದ್ದರು. ಇದಕ್ಕೆ 4 ಉತ್ತರಗಳನ್ನು ನೋಡಿದರೆ ಟಾಲಿವುಡ್, ಗಾಲಿವುಡ್, ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ಎಂಬ ಆಪ್ಷನ್ ಗಳನ್ನು ನೀಡಿದ್ದರು.
ಯಶ್ ಅವರು ಕನ್ನಡದ ಖ್ಯಾತ ನಟರಾಗಿದ್ದು ಇವರು ಪ್ಯಾನ್ ಇಂಡಿಯಾ ಹೀರೋ ಮತ್ತು ದಕ್ಷಿಣ ಭಾರತದ ಜನಪ್ರಿಯ ನಾಯಕ ನಟ ಎಂದು ಸೋನಾಕ್ಷಿ ಸಿನ್ಹಾ ಅವರು ಹೇಳಿದರು ಮತ್ತು ಇದಕ್ಕೆ ಸರಿಯಾದ ಉತ್ತರವನ್ನು ನೀಡಿ ಹಣವನ್ನು ಕೂಡ ಗಳಿಸಿದರು…..