ಬಹುಮುಖ ಪ್ರತಿಭೆಯ ಸ್ಟಾರ್ ನಟಿ ಸಿತಾರಾ ಅವರು ಜೂನ್ 30 1973 ರಂದು ಕೇರಳದಲ್ಲಿ ಜನಿಸಿದರು. ಇವರ ಪೂರ್ತಿ ಹೆಸರು ಸಿತಾರ ನಾಯರ್. ಇವರ ತಂದೆಯ ಹೆಸರು ಎ.ಆರ್ ಪರಮೇಶ್ವರನ್ ನಾಯರ್ ಮತ್ತು ತಾಯಿಯ ಹೆಸರು ವಲ್ಸಲಾ ನಾಯರ್. ಸಿತಾರಾ ಅವರು ಮಲಯಾಳಂ ತಮಿಳು ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಸಕ್ಕತ್ ಜನಪ್ರಿಯರಾಗಿದ್ದಾರೆ.
ನಮ್ಮ ಕನ್ನಡದಲ್ಲಿ ಡಾ.ರಾಜ್ ಕುಮಾರ್ ಅವರ ಜೊತೆಗೆ ಅಭಿನಯಿಸುವುದಕ್ಕೆ ಸಾಕಷ್ಟು ನಟಿಯರು ಹಾತೊರೆಯುತ್ತಿದ್ದರು. ಇದರಂತೆಯೇ ಡಾ.ವಿಷ್ಣುವರ್ಧನ್ ಅವರ ಜೊತೆ ನಟಿಸುವುದಕ್ಕೂ ಕೂಡ ಅದೃಷ್ಟ ಎಂದು ಭಾವಿಸುತ್ತಿದ್ದರು. ಅದರಲ್ಲಿ ಸಿತಾರಾ ಅವರು ವಿಷ್ಣುವರ್ಧನ್ ಅವರ ಜೊತೆಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಪರ್ಫೆಕ್ಟ್ ಜೋಡಿ ಎಂದೇ ಎನಿಸಿಕೊಂಡಿರು.
ಇನ್ನೂ ಸಿತಾರಾ ಅವರು 1986 ರಲ್ಲಿ ಮಲಯಾಳಂನಲ್ಲಿ ಕಾವೇರಿ ಎನ್ನುವ ಚಿತ್ರದ ಮೂಲಕ ಇವರು ತಮ್ಮ ಸಿನಿಮಾ ಜೀವನವನ್ನು ಶುರುಮಾಡಿದರು. ಇನ್ನೂ ನಮ್ಮ ಕನ್ನಡದಲ್ಲಿ 1994 ರಲ್ಲಿ ಹಾಲುಂಡ ತವರು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಮೂಲಕ ಇವರು ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡರು.
ತದನಂತರ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಅನಂತ್ ನಾಗ್, ವಿಷ್ಣುವರ್ಧನ್, ಡಾ ರಾಜ್ ಕುಮಾರ್, ಚರಣ್ ರಾಜ್, ದರ್ಶನ್, ಚಿರು ಸರ್ಜಾ, ಪುನೀತ್ ರಾಜ್ ಕುಮಾರ್ ಇನ್ನೂ ಸಾಕಷ್ಟು ನಟರ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಸಿತಾರ ಅವರ ತಂದೆ ಕೂಡ ಚಿತ್ರೀಕರಣದಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ತಂದೆಯ ಜೊತೆಗೆ ಸಿತಾರ ಅವರು ಪ್ರತಿನಿತ್ಯ ಚಿತ್ರದ ಶೂಟಿಂಗ್ ಸೆಟ್ ಗೆ ಹೋಗಿ ನೋಡುತ್ತಿದ್ದರು.
ಅಲ್ಲಿ ಇವರಿಗೆ ನಟನೆಯ ಮೇಲೆ ತುಂಬಾ ಆಸಕ್ತಿ ಬಂತು. ಇದರಂತೆಯೇ ಇವರು ಈಗ ದೊಡ್ಡ ಸ್ಟಾರ್ ನಟಿ ಕೂಡ ಆದರು. ಆದರೆ ಸಿತಾರಾ ಅವರು ಈ ಮಧ್ಯದಲ್ಲಿ ತಮ್ಮ ತಂದೆಯನ್ನು ಕೂಡ ಕಳೆದುಕೊಳ್ಳುತ್ತಾರೆ. ತಮ್ಮ ತಂದೆ ತೀರಿಕೊಂಡ ಮೇಲೆ ಇವರು ಸ್ವಲ್ಪ ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರವಾದರು. ತದನಂತರ ಮತ್ತೆ ಪ್ರವೇಶಿಸಿ ಈಗ ಸಾಕಷ್ಟು ಪೋಷಕ ಪಾತ್ರಗಳಲ್ಲಿ ಅಭಿನಯ ಮಾಡುತ್ತಿದ್ದಾರೆ.
ಇನ್ನೂ ಒಂದು ಸಂದರ್ಶನದಲ್ಲಿ ಸಿತಾರಾಅವರು ಸ್ವತಃ ತಾವು ಏಕೆ ಮದುವೆಯಾಗಿಲ್ಲ ಎನ್ನುವ ಕಾರಣವನ್ನು ಹೇಳಿದ್ದಾರೆ. ಸಿತಾರ ಅವರು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ ಸ್ವಲ್ಪವೇ ದಿನಗಳಲ್ಲಿ ಸಾಕಷ್ಟು ಜನಪ್ರಿಯರಾದರು. ಇವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನೀಡುತ್ತಿರುವ ಸಮಯದಲ್ಲಿ ತಮ್ಮ ವೈಯಕ್ತಿಕ ಜೀವನವನ್ನು ಮರೆತೇ ಬಿಟ್ಟರಂತೆ. ಅದಕ್ಕೆ ಸಮಯವು ಕೂಡ ಸಿಗಲಿಲ್ಲ ಎಂದು ಹೇಳಿದರು.
ಇನ್ನು ಮತ್ತೊಂದು ಕಾರಣ ಏನೆಂದರೆ ಯಾವುದೇ ಹುಡುಗಿಯಾಗಲೀ ತನಗೆ ಬರುವ ಪತಿ ಒಬ್ಬ ಒಳ್ಳೆಯ ಸ್ನೇಹಿತನಾಗಿರಬೇಕು ಎಲ್ಲಾ ವಿಷಯದಲ್ಲೂ ಅರ್ಥ ಮಾಡಿಕೊಳ್ಳುವನಾಗಿರಬೇಕು ಎಂದು ಬಯಸುತ್ತಾರೆ. ಹೀಗೆ ನನಗೆ ಅಂತಹವರು ಯಾರು ಸಿಕ್ಕಿಲ್ಲ ಎಂದು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸೀತಾರ ಅವರಿಗೆ ಈಗ 48 ವರ್ಷಗಳಾಗಿವೆ. ಇವರು ಪ್ರಸ್ತುತ ಸಿನಿಮಾಗಳಲ್ಲಿ ಸಾಕಷ್ಟು ನಟ ನಟಿಯರಿಗೆ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದು ಜೊತೆಗೆ ಕಿರುತೆರೆಯಲ್ಲೂ ಕೂಡ ಕೆಲ ಧಾರಾವಾಹಿಗಳಲ್ಲಿ ಅಭಿನಯ ಮಾಡುತ್ತಿದ್ದಾರೆ……