Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಹಲವಾರು ದಿನಗಳ ಬಳಿಕ ಕೊಲ್ಲೂರು ಶ್ರೀ ಮೂಕಾಂಬಿಕೆ ದರ್ಶನ ಪಡೆದು ಖುಷಿಪಟ್ಟ ನಟಿ ರಕ್ಷಿತಾ..!! 

0

ಕನ್ನಡದ ಜನಪ್ರಿಯ ನಟಿ ರಕ್ಷಿತಾ ಅವರು ಈಗ ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ಮಾಡಿ ದೇವರ ದರ್ಶನವನ್ನು ಮಾಡುತ್ತಿದ್ದಾರೆ. ಇನ್ನೂ ಇವರ ಜೊತೆ ಕಾಮಿಡಿ ಕಿಲಾಡಿಗಳು ಸೂರಜ್ ಮತ್ತು ಇತರ ಸ್ನೇಹಿತರು ಸೇರಿದಂತೆ ಈಗ ಕೊಲ್ಲೂರಿನಲ್ಲಿರುವ ಶ್ರೀ ಮೂಕಾಂಬಿಕೆ ದೇವಿಯ ದರ್ಶನವನ್ನು ಮಾಡಿದ್ದಾರೆ. ಇದರ ಕೆಲ ದೃಶ್ಯಗಳನ್ನು ನೀವು ನೋಡಬಹುದು.

ಇನ್ನೂ ನಟಿ ರಕ್ಷಿತಾ ಅವರ ಮೊದಲ ಹೆಸರು ಶ್ವೇತಾ ಎಂದು. ಇವರು ಮಾರ್ಚ್ 31 1984 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಡಿ.ಸಿ ಗೌರಿಶಂಕರ್ ಮತ್ತು ತಾಯಿಯ ಹೆಸರು ಮಮತಾ ರಾವ್. ಇನ್ನು ರಕ್ಷಿತಾ ಅವರು ತಮಿಳು ಕನ್ನಡ ತೆಲುಗು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇದರ ಜೊತೆಗೆ ಕೆಲ ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.

ರಕ್ಷಿತಾ ಅವರು 2002 ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಅಪ್ಪು ಚಿತ್ರದ ಮೂಲಕ ಮೊದಲನೆಯದಾಗಿ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಇದಾದ ಮೇಲೆ ಇವರು ಸಾಕಷ್ಟು ಕನ್ನಡದ ಟಾಪ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇನ್ನು ತೆಲುಗಿನಲ್ಲಿ ಈಡಿಯೆಟ್ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ನೀಡಿದರು.

ಹಾಗೆಯೇ ತಮಿಳಿನಲ್ಲಿ ದಮ್ ಚಿತ್ರದ ಮೂಲಕ ತಮಿಳು ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದರು. ಇವರು ಎಲ್ಲಾ ಭಾಷೆಗಳಲ್ಲಿ ಸೇರಿ ಸುಮಾರು 30 ಗಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಹಾಗೆಯೇ ರಕ್ಷಿತಾ ಅವರು ಜೋಗಯ್ಯ, ಡಿ.ಕೆ, ಎಕ್ ಲವ್‌ ಯಾ ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.

 

ಹಾಗೆಯೇ ರಕ್ಷಿತಾ ಅವರು ಸಾಕಷ್ಟು ರಿಯಾಲಿಟಿ ಶೋಗಳಿಗೆ ಮತ್ತು ಕಾರ್ಯಕ್ರಮಗಳಿಗೆ ಜಡ್ಜ್ ಕೂಡ ಆಗಿದ್ದರು. ಇನ್ನು ರಕ್ಷಿತಾ ಅವರು 2007 ರಲ್ಲಿ ಕನ್ನಡದ ಖ್ಯಾತ ನಿರ್ದೇಶಕರಾಗಿರುವ ಪ್ರೇಮ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಪ್ರೇಮ್ ಅವರು ಅಕ್ಟೊಬರ್ 22 1976 ರಂದು ಮದ್ದೂರಿನಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ರಾಜಪ್ಪ ಗೌಡ ಮತ್ತು ತಾಯಿ ಹೆಸರು ಭಾಗ್ಯಮ್ಮ ಗೌಡ.

ಪ್ರೇಮ್ ಅವರು ನಿರ್ದೇಶನದ ಜೊತೆಗೆ ಕೆಲ ಸಿನಿಮಾಗಳಲ್ಲಿ ನಟಿನೆ ಕೂಡ ಮಾಡಿದ್ದಾರೆ ಜತೆಗೆ ಕೆಲ ಹಾಡುಗಳನ್ನು ಹಾಡಿದ್ದಾರೆ. ಇವರು ಕರಿಯಾ, ಎಕ್ಸ್ ಕ್ಯೂಸ್ ಮಿ, ಜೋಗಿ, ಈ ಪ್ರೀತಿ ಏಕೆ ಭೂಮಿ ಮೇಲಿದೆ, ರಾಜ್ ದಿ ಶೋ ಮ್ಯಾನ್, ಜೋಗಯ್ಯ, ದಿ ವಿಲನ್, ಏಕ್ ಲವ್ ಯಾ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಾಗೆಯೇ ಈ ಪ್ರೀತಿ ಏಕೆ ಭೂಮಿ ಮೇಲಿದೆ, ಪ್ರೇಮ್ ಅಡ್ಡ, ದಾಸವಾಳ, ಡಿ.ಕೆ ಚಿತ್ರಗಳಲ್ಲಿ ಹೀರೋ ಆಗಿ ನಟನೆ ಮಾಡಿದ್ದಾರೆ…..

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply