ಕನ್ನಡದ ರೆಬಲ್ ಸ್ಟಾರ್ ಅಂಬರೀಶ್ ಅವರು ಈಗ ನಮ್ಮ ಜೊತೆ ಇಲ್ಲದೆ ಇದ್ದರೂ ಕೂಡ ಅವರು ಮಾಡಿರುವ ಸಹಾಯಗಳು ಒಳ್ಳೆಯ ಗುಣ ನೇರ ನುಡಿ ಎಲ್ಲವೂ ಕೂಡ ಇನ್ನೂ ಹಾಗೇ ಬದುಕಿದೆ. ಅಂಬರೀಷ್ ಅವರ ಈ ಗುಣಗಳು ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ. ಇನ್ನು ಅಂಬರೀಶ್ ಅವರು ಮೇ 29 1952 ರಲ್ಲಿ ದೊಡ್ಡರಸಿನಕೆರೆಯಲ್ಲಿ ಜನಿಸಿದ್ದಾರೆ.
ಅಂಬರೀಷ್ ಅವರು ಕೇವಲ ಸಿನಿಮಾದ ನಟ ಮಾತ್ರವಲ್ಲ ರಾಜಕೀಯ ಕ್ಷೇತ್ರದಲ್ಲೂ ಕೂಡ ತೊಡಗಿಸಿಕೊಂಡಿದ್ದರು. ಅಂಬರೀಷ್ ಅವರು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ನಾಗರಹಾವು ಚಿತ್ರದಲ್ಲಿ ಮೊದಲನೆಯದಾಗಿ ನಟಿಸಿದರು.
ಈ ಸಿನಿಮಾ 1972 ರಂದು ಬಿಡುಗಡೆಯಾಗಿತ್ತು. ಇನ್ನು ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರು ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದು ಕನ್ನಡ ಇಂಡಸ್ಟ್ರಿಯಲ್ಲಿ ಬಹಳ ಯಶಸ್ಸನ್ನು ಸಾಧಿಸಿತು.
ಇದಾದ ಮೇಲೆ ಅಂಬರೀಶ್ ಅವರು ಸುಮಾರು 208 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಅಂಬರೀಶ್ ಅವರು ದಕ್ಷಿಣ ಭಾರತದ ಖ್ಯಾತ ನಟಿ ಸುಮಲತಾ ಅವರನ್ನು 1991 ರಂದು ವಿವಾಹ ಮಾಡಿಕೊಂಡಿದ್ದರು. ಇವರಿಗೆ ಅಭಿಷೇಕ್ ಅಂಬರೀಶ್ ಎನ್ನುವ ಮಗ ಕೂಡ ಇದ್ದಾರೆ. ಅಭಿಷೇಕ್ ಅಂಬರೀಶ್ ಅವರು ಕೂಡ ಸಿನಿಮಾದ ನಟರಾಗಿದ್ದಾರೆ.
ಇನ್ನು ವಿಷಯಕ್ಕೆ ಬಂದರೆ ಅಂಬರೀಷ್ ಅವರು ಸಾಕಷ್ಟು ನಾಯಕಿಯರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಅಭಿಮಾನಿಗಳು ಅಂಬರೀಷ್ ಅವರನ್ನು ಅಂಬಿಕಾ ಸುಮಲತಾ ಮತ್ತು ಮಹಾಲಕ್ಷ್ಮಿ ಅವರ ಜೊತೆ ನೋಡುವುದಕ್ಕೆ ತುಂಬಾ ಇಷ್ಟಪಡುತ್ತಾರೆ.
ಇದರ ಜೊತೆಗೆ ಆ ಒಂದು ನಟಿಯ ಜೊತೆಗೂ ಕೂಡ ಅಂಬರೀಶ್ ಅವರನ್ನು ನೋಡುವುದಕ್ಕೆ ಅಭಿಮಾನಿಗಳು ಹೆಚ್ಚು ಇಷ್ಟಪಡುತ್ತಾರೆ.
ಹಾಗೆಯೇ ಅಂಬರೀಷ್ ಅವರೇ ಹೇಳಿದಂತೆ ಇವರು ಆ ನಟಿಯ ಜೊತೆ ನಟಿಸುವುದಕ್ಕೆ ತುಂಬಾನೇ ಇಷ್ಟವಂತೆ. ಅಂಬರೀಷ್ ಮತ್ತು ಆ ನಟಿ ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಈ ನಟಿ ದಕ್ಷಿಣ ಭಾರತದ ಪಂಚಭಾಷಾ ನಟಿಯಾಗಿದ್ದು ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಅನಂತ್ ನಾಗ್, ಶ್ರೀನಾಥ್, ಟೈಗರ್ ಪ್ರಭಾಕರ್ ಇನ್ನೂ ಇತರ ನಟರೊಂದಿಗೆ ಅಭಿನಯಿಸಿದ್ದಾರೆ.
ಅದರಲ್ಲೂ ಅನಂತ್ ನಾಗ್ ಅವರ ಜೊತೆಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಇವರಿಬ್ಬರನ್ನು ಎವರ್ ಗ್ರೀನ್ ಜೋಡಿ ಎಂದೇ ಹೇಳುತ್ತಿದ್ದರು. ಆ ನಟಿ ಬೇರೆ ಯಾರೂ ಅಲ್ಲ ಜ್ಯೂಲಿ ಲಕ್ಷ್ಮಿ. ಹೌದು ಅಂಬರೀಷ್ ಅವರೇ ಹೇಳಿದಂತೆ ಜೂಲಿ ಲಕ್ಷ್ಮಿ ಅವರ ಜೊತೆಗೆ ನಟಿಸುವುದಕ್ಕೆ ತುಂಬ ಇಷ್ಟ ಪಡುತ್ತಿದ್ದರಂತೆ…..