Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸ್ವಂತ ವಿಮಾನ ಹೊಂದಿರುವ ಕನ್ನಡದ ಸ್ಟಾರ್ ನಟಿಯರು?? ಮೊದಲ ಬಾರಿಗೆ ಇಲ್ಲಿದ್ದಾರೆ ನೋಡಿ!!

0

ಎಲ್ಲರಿಗೂ ತಮ್ಮ ತಮ್ಮ ಜೀವನದಲ್ಲಿ ಒಂದು ಬಾರಿಯಾದರೂ ವಿಮಾನ ಏರಬೇಕು ಎನ್ನುವ ಕನಸು ಆಸೆ ಇರುತ್ತದೆ. ಆದರೆ ವಿಮಾನದಲ್ಲಿ ಪ್ರಯಾಣಿಸುವುದು ಎಂದರೆ ಅದು ಸುಲಭದ ಮಾತಲ್ಲ. ಏಕೆಂದರೆ ಇದಕ್ಕೆ ಸಾಕಷ್ಟು ಹಣವು ಬೇಕಾಗುತ್ತದೆ. ಆದರೆ ಕೆಲವರು ಸ್ವಂತ ವಿಮಾನವನ್ನೇ ಖರೀದಿಸುತ್ತಾರೆ. ಇವರ ಬಳಿ ಎಷ್ಟು ಹಣ ಇರಬೇಕು ಎಂದು ಯೋಚನೆ ಮಾಡಿ ನೋಡಿ. ಹೌದು ನಮ್ಮ ಭಾರತದಲ್ಲಿ ಅದರಲ್ಲೂ ಕನ್ನಡದ ಸ್ಟಾರ್ ನಟಿಯರು ಯಾರು ಸ್ವಂತ ವಿಮಾನವನ್ನು ಖರೀದಿ ಮಾಡಿದ್ದಾರೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ..

ಕನ್ನಡದ ಖ್ಯಾತ ಸ್ಟಾರ್ ನಟಿ ಕೆ.ಆರ್ ವಿಜಯ ಅವರು ನವೆಂಬರ್ 30 1948 ರಂದು ತಿರುವನಂತಪುರಂನಲ್ಲಿ ಜನಿಸಿದ್ದಾರೆ. ಇವರಿಗೆ ಈಗ 73 ವರ್ಷಗಳಾಗಿವೆ. ವಿಜಯಾ ಅವರು ತಮಿಳು ಮಲಯಾಳಂ ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಆಗಿನ ಕಾಲದ ಟಾಪ್ ನಟಿಯಾಗಿ ಮಿಂಚಿದವರು. ಇವರು ತಮ್ಮ ಸಿನಿಮಾ ಕೆರಿಯರ್ ಅನ್ನು 1963 ರಲ್ಲಿ ಶುರು ಮಾಡಿಕೊಂಡು ಸುಮಾರು 50 ವರ್ಷಗಳ ಕಾಲ ಸಿನಿಮಾ ಅವಧಿಯನ್ನು ಕಳೆದಿದ್ದಾರೆ.

ಇನ್ನೂ ಇವರು 1963 ರಲ್ಲಿ ತಮಿಳಿನ ಕರ್ಪಗಂ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಗೆ ಕಾಲಿಟ್ಟರು. ಹಾಗೆಯೇ ನಮ್ಮ ಕನ್ನಡದಲ್ಲಿ 1983 ರಲ್ಲಿ ಚಿನ್ನದಂತ ಮಗ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ತದನಂತರ ಮಹಾಶಕ್ತಿ ಮಾಯೆ, ಓಂಶಕ್ತಿ, ಮುತ್ತಿನಂಥ ಹೆಂಡತಿ, ಒಂದಾಗೋಣ ಬಾ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರು 70,80, 90ರ ಸಮಯದಲ್ಲಿ ಟಾಪ್ ನಟಿಯಾಗಿ ಸಾಕಷ್ಟು ದೊಡ್ಡ ದೊಡ್ಡ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ.

 

ಇನ್ನು ಇವರ ಬಳಿ ಸ್ವಂತ ವಿಮಾನ ಮತ್ತು ಸಾಕಷ್ಟು ಸ್ವಂತ ಹೋಟೆಲ್ ಗಳಿವೆ. ವಿಜಯ ಮತ್ತು ಅವರ ಪತಿ ವೇಲಾಯುಧನ್ ನಾಯರ್ ಅವರು ದೊಡ್ಡ ಸಂಭ್ರಮಗಳಿಗೆ ಮತ್ತು ಬೇರೆ ಪ್ರದೇಶಗಳಿಗೆ ಹೋಗುವುದಕ್ಕೆ ತಮ್ಮ ಸ್ವಂತ ವಿಮಾನವನ್ನು ಉಪಯೋಗಿಸುತ್ತಿದ್ದರು. ಆದರೆ ವೇಲಾಯುಧನ್ ನಾಯರ್ ಅವರು 2016 ರಲ್ಲಿ ನಿಧನರಾದರು.

ಬಾಲಿವುಡ್ ಬೆಡಗಿ ಶಿಲ್ಪ ಶೆಟ್ಟಿ ಅವರು ಜೂನ್ 8 1975 ರಂದು ಮಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಕನ್ನಡದ ಹುಡುಗಿಯಾಗಿದ್ದರೂ ಬಾಲಿವುಡ್ ನಲ್ಲಿ ಮಿಂಚಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ ತಂದೆಯ ಹೆಸರು ಸುರೇಂದ್ರ ಶೆಟ್ಟಿ ಮತ್ತು ತಾಯಿಯ ಹೆಸರು ಸುನಂದಾ ಶೆಟ್ಟಿ ಎಂದು. ಇವರು ಕೇವಲ ಹಿಂದಿಯಲ್ಲಿ ಮಾತ್ರವಲ್ಲ ಕನ್ನಡ ತೆಲುಗು ಚಿತ್ರಗಳಲ್ಲೂ ಕೂಡ ಅಭಿನಯಿಸಿದ್ದಾರೆ.

ಶಿಲ್ಪಾ ಶೆಟ್ಟಿ ಅವರು 1993 ರಲ್ಲಿ ಹಿಂದಿಯಲ್ಲಿ ಬಾಜಿಗಾರ್ ಎನ್ನುವ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಇನ್ನು ಶಿಲ್ಪಾ ಶೆಟ್ಟಿ ಅವರು 2009 ರಲ್ಲಿ ರಾಜ್ ಕುಂದ್ರಾ ಎನ್ನುವ ದೊಡ್ಡ ಬಿಸಿನೆಸ್ ಮ್ಯಾನ್ ನನ್ನು ವಿವಾಹ ಮಾಡಿಕೊಂಡರು. ಈ ದಂಪತಿಗಳಿಗೆ ಕೂಡ ಸ್ವಂತ ವಿಮಾನವಿದೆ.

ಕನ್ನಡದ ಜನಪ್ರಿಯ ನಟಿ ಮಾಧವಿ ಅವರು ಕನ್ನಡದಲ್ಲಿ ಬಹುತೇಕ ದೊಡ್ಡ ದೊಡ್ಡ ನಟರ ಜೊತೆಗೆ ಅಭಿನಯಿಸಿದ್ದಾರೆ. ಇವರು ಸೆಪ್ಟೆಂಬರ್ 14 1962 ರಂದು ಜನಿಸಿದರು. ಇವರ ತಂದೆಯ ಹೆಸರು ಗೋವಿಂದ ಸ್ವಾಮಿ ಮತ್ತು ತಾಯಿಯ ಹೆಸರು ಶಶಿರೇಖ ಸ್ವಾಮಿ ಎಂದು. ಇವರು ಕನ್ನಡ ಸೇರಿದಂತೆ ತೆಲುಗು ಮಲಯಾಳಂ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಮಾಧವಿಯವರು 1976 ರಲ್ಲಿ ತೆಲುಗಿನ ಒಂದು ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.

ಇವರು ಎಲ್ಲ ಭಾಷೆಗಳಲ್ಲಿ ಸೇರಿ ಸುಮಾರು 300 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಇವರು ಫಾರ್ಮಸಿಸ್ಟ್ ಆಗಿರುವ ರಾಲ್ಫ್ ಶರ್ಮಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ 3 ಜನ ಹೆಣ್ಣು ಮಕ್ಕಳಿದ್ದು ಇವರಿಗೆ ತಮ್ಮದೇ ಆದ ಸ್ವಂತ ವಿಮಾನ ಕೂಡ ಇದೆ. ಪ್ರಸ್ತುತ ಮಾಧವಿಯವರು ತಮ್ಮ ಪತಿಯ ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇವರ ಬಳಿ ಸ್ವಂತ ವಿಮಾನ ಇರುವುದರ ಜೊತೆಗೆ ಅದನ್ನು ಸ್ವತಃ ಮಾಧವಿಯವರು ಓಡಿಸುತ್ತಾರಂತೆ. ಇದು ನಮ್ಮ ಕನ್ನಡಿಗರ ಹೆಮ್ಮೆ ಎಂದು ಹೇಳಬಹುದು……

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply