ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ಹಠವಾದಿ ಚಿತ್ರದಲ್ಲಿ ರವಿಚಂದ್ರನ್ ಅವರ ಎರಡನೆಯ ಮಗ ವಿಕ್ರಂ ರವಿಚಂದ್ರನ್ ಅವರು ರವಿಚಂದ್ರನ್ ಅವರ ಚಿಕ್ಕ ವಯಸ್ಸಿನ ಪಾತ್ರದಲ್ಲಿ ಬಾಲ ನಟರಾಗಿ ಅಭಿನಯಿಸಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿನಯದ ಅಂಡಮಾನ್ ಅಂಡಮಾನ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಮಗಳಾಗಿ ಅವರ ಎರಡನೆಯ ಮಗಳು ನಿವೇದಿತಾ ಶಿವರಾಜ್ ಕುಮಾರ್ ಅವರು ನಟನೆ ಮಾಡಿದ್ದಾರೆ.
ದುನಿಯಾ ವಿಜಯ್ ಅವರ ಸಿನಿಮಾ ಆಗಿರುವ ಕುಸ್ತಿ ಚಿತ್ರದಲ್ಲಿ ದುನಿಯಾ ವಿಜಯ್ ಅವರ ಮಗ ಸಾಮ್ರಾಟ್ ಚಿಕ್ಕ ವಯಸ್ಸಿನ ಪಾತ್ರದಲ್ಲಿ ನಟಿಸಿದ್ದರು. ಆದರೆ ಈ ಚಿತ್ರವು ಕೆಲ ಕಾರಣಾಂತರಗಳಿಂದ ಅರ್ಧದಲ್ಲೇ ನಿಂತು ಹೋಯಿತು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಐರಾವತ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ದರ್ಶನ್ ಅವರ ಮಗ ವಿನೀಶ್ ತೂಗುದೀಪ್ ಅವರು ನಟಿಸಿದ್ದಾರೆ ಜೊತೆಗೆ ಯಜಮಾನ ಚಿತ್ರದಲ್ಲಿ ಕೂಡ ದರ್ಶನ್ ಅವರ ಜೊತೆಗೆ ಒಂದು ಹಾಡಿನಲ್ಲಿ ಕಾಣಿಸಿದ್ದಾರೆ.
ಪ್ರಿಯಾಂಕ ಉಪೇಂದ್ರ ಅವರ ಅಭಿನಯದ ದೇವಕಿ ಚಿತ್ರದಲ್ಲಿ ಪ್ರಿಯಾಂಕ ಅವರ ಮಗಳಾದ ಐಶ್ವರ್ಯ ಉಪೇಂದ್ರ ಅವರು ಬಾಲನಟಿಯಾಗಿ ಅಭಿನಯಿಸಿದ್ದಾರೆ. ಇದಕ್ಕೆ ಇವರಿಗೆ ಅತ್ಯುತ್ತಮ ಬಾಲ ನಟಿ ಅವಾರ್ಡ್ ಕೂಡ ದೊರಕಿದೆ.
ಡಾ ರಾಜ್ ಕುಮಾರ್ ಅವರ ಅಭಿನಯದ ಮೊತ್ತ 11 ಸಿನಿಮಾಗಳಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಾಲನಟರಾಗಿ ತುಂಬ ಸೊಗಸಾಗಿ ಅಭಿನಯಿಸಿದ್ದಾರೆ.
ಜಗ್ಗೇಶ್ ಅವರ ಅಭಿನಯದ ಸುಮಾರು 5 ಸಿನಿಮಾಗಳಲ್ಲಿ ಅವರ ಎರಡನೆಯ ಮಗ ಯತಿರಾಜ್ ಅವರು ಬಾಲ ನಟರಾಗಿ ಅಭಿನಯಿಸಿದ್ದಾರೆ.
ಎಸ್ ನಾರಾಯಣ್ ಅವರ ಅಭಿನಯದ ಬಾನಲ್ಲೂ ನೀನೆ ಭುವಿಯಲ್ಲೂ ನೀನೇ ಮತ್ತು ವಿಶಾಲಾಕ್ಷ್ಮಮ್ಮನ ಗಂಡ ಎನ್ನುವ ಚಿತ್ರಗಳಲ್ಲಿ ನಾರಾಯಣ್ ಅವರ ಎರಡನೆಯ ಮಗ ಪಂಕಜ್ ಅವರು ಬಾಲ ನಟರಾಗಿ ಅಭಿನಯಿಸಿದ್ದಾರೆ
ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿನಯದ ಚಮಕ್ ಚಿತ್ರದಲ್ಲಿ ಗಣೇಶ್ ಅವರ ಮಗಳು ಚಾರಿತ್ರ್ಯ ಗಣೇಶ ಅವರು ನಟಿಸಿದ್ದಾರೆ ಮತ್ತು ಗೀತಾ ಸಿನಿಮಾದಲ್ಲಿ ಗಣೇಶ್ ಅವರ ಮಗ ವಿಹಾನ್ ಗಣೇಶ್ ಅಭಿನಯಿಸಿದ್ದಾರೆ.
ಅಜಯ್ ರಾವ್ ಅವರ ಅಭಿನಯದ ಲವ್ ಯೂ ರಚ್ಚು ಸಿನಿಮಾದಲ್ಲಿ ಅವರ ಮಗಳು ಒಂದು ಸ್ಪೆಷಲ್ ಪಾತ್ರದಲ್ಲಿ ಕಾಣಿಸಿದ್ದಾರೆ…..