ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಇರುವ ನಟಿಯರ ಅಕ್ಕ ತಂಗಿ ಯಾರು ಎಂದು ತಿಳಿದುಕೊಳ್ಳೋಣ ಬನ್ನಿ..ರಚಿತ ರಾಮ್ ಮತ್ತು ನಿತ್ಯ ರಾಮ್ರಚಿತಾ ರಾಮ್ ಅವರು ಅಕ್ಟೋಬರ್ 3 1992 ರಂದು ಜನಿಸಿದ್ದಾರೆ. ಇವರು ಮೊದಲು ಕಿರುತೆರೆಯಲ್ಲಿ ನಟಿಸಿ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಬುಲ್ ಬುಲ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಇನ್ನೂ ಇವರ ಅಕ್ಕ ನಿತ್ಯಾ ರಾಮ್ ಅವರು ಕೂಡ ಕಿರುತೆರೆಯ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಪೂಜಾ ಗಾಂಧಿ ಮತ್ತು ರಾಧಿಕಾ ಗಾಂಧಿ
ಪೂಜಾ ಗಾಂಧಿ ಅವರು ಅಕ್ಟೋಬರ್ 7 1983 ರಂದು ಜನಿಸಿದ್ದಾರೆ. ಇವರು 2006 ರಲ್ಲಿ ಬಿಡುಗಡೆಯಾದ ಮುಂಗಾರು ಮಳೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇನ್ನೂ ಇವರ ತಂಗಿ ರಾಧಿಕಾ ಗಾಂಧಿ ಅವರು ಕೂಡ ಕೆಲ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಸಂಜನಾ ಗಲ್ರಾಣಿ ಮತ್ತು ನಿಕ್ಕಿ ಗಲ್ರಾಣಿ
ಸಂಜನಾ ಗಲ್ರಾಣಿ ಅವರು ಅಕ್ಟೋಬರ್ 10 1989 ರಂದು ಜನಿಸಿದ್ದಾರೆ. ಇವರು ಗಂಡ ಹೆಂಡತಿ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇನ್ನೂ ಇವರ ತಂಗಿ ನಿಕ್ಕಿ ಗಲ್ರಾಣಿ ಅವರು ಕೂಡ ಬಹುಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.
ಸೋನು ಗೌಡ ಮತ್ತು ನೇಹಾ ಗೌಡ
ಸೋನು ಗೌಡ ಅವರು ಮಾರ್ಚ್ 23 1990 ರಂದು ಜನಿಸಿದ್ದಾರೆ. ಇವರು ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇನ್ನೂ ಇವರ ಸಹೋದರಿ ನೇಹ ಗೌಡ ಅವರು ಕೂಡ ಕಿರುತೆರೆಯಲ್ಲಿ ಖ್ಯಾತ ನಟಿಯಾಗಿ ಜನಪ್ರಿಯರಾಗಿದ್ದಾರೆ.
ಅನುಪಮಾ ಗೌಡ ಮತ್ತು ತೇಜಸ್ವಿನಿ
ಖ್ಯಾತ ನಿರೂಪಕಿ ಮತ್ತು ನಟಿ ಆಗಿರುವ ಅನುಪಮಾ ಗೌಡ ಅವರು ಮಾರ್ಚ್ 20 1991 ರಂದು ಜನಿಸಿದ್ದಾರೆ. ಇವರು ಲಂಕೇಶ್ ಪತ್ರಿಕೆ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದು ಇದಾದ ಮೇಲೆ 4 ಚಿತ್ರಗಳಲ್ಲಿ ಇವರು ನಾಯಕಿಯಾಗಿ ಅಭಿನಯ ಮಾಡಿದ್ದಾರೆ. ಇದರ ಜೊತೆಗೆ ಇವರು ಕೆಲ ಧಾರಾವಾಹಿಗಳಲ್ಲಿ ನಡೆಸಿದ್ದು ರಾಜ ರಾಣಿ ಮತ್ತು ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಗಳನ್ನು ನಿರೂಪಣೆ ಸಹ ಮಾಡಿದ್ದಾರೆ. ಇನ್ನೂ ಇವರ ತಂಗಿ ತೇಜಸ್ವಿನಿ ಅವರನ್ನು ಇಲ್ಲಿ ನೀವು ನೋಡಬಹುದು.
ಅಶ್ವಿತಿ ಶೆಟ್ಟಿ ಮತ್ತು ಅದ್ವಿತಿ ಶೆಟ್ಟಿ
ಅಶ್ವಿತಿ ಶೆಟ್ಟಿ ಮತ್ತು ಅದ್ವಿತಿ ಶೆಟ್ಟಿ ಇಬ್ಬರು ಅವಳಿ ಜವಳಿ ಆಗಿದ್ದು ಇವರು ಮಿಸ್ಟರ್ & ಮಿಸಸ್ ರಾಮಾಚಾರಿ ಸಿನಿಮಾದ ಮುಖಾಂತರ ಬೆಳ್ಳಿತೆರೆಗೆ ಕಾಲಿಟ್ಟು ಒಳ್ಳೆಯ ಹೆಸರನ್ನು ಸಂಪಾದನೆ ಮಾಡಿಕೊಂಡರು.
ಅನುರಾಧಾ ಭಟ್ ಮತ್ತು ಅನುಪಮಾ ಭಟ್
ಖ್ಯಾತ ನಿರೂಪಕಿ ಮತ್ತು ಗಾಯಕಿ ಆಗಿರುವ ಅನುರಾಧ ಭಟ್ ಅವರು ವಿವಿಧ ಭಾಷೆಗಳಲ್ಲಿ ಸುಮಾರು 1500 ಹಾಡುಗಳನ್ನು ಹಾಡಿದ್ದಾರೆ. ಇನ್ನೂ ಇವರ ಸಹೋದರಿ ಅನುಪಮಾ ಭಟ್ ಅವರು ಕೂಡ ಒಳ್ಳೆಯ ಗಾಯಕಿ ಮತ್ತು ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ.
ವೈಭವಿ ವೈನಿಧಿ ಮತ್ತು ವೈಸಿರಿ
ವೈಭವಿ ವೈನಿಧಿ ಮತ್ತು ವೈಸಿರಿಗೆ ಈ 3 ಜನರು ಕನ್ನಡದ ಖ್ಯಾತ ನಟ ಜೈ ಜಗದೀಶ್ ಮತ್ತು ನಟಿ ವಿಜಯ್ ಲಕ್ಷ್ಮಿ ಸಿಂಗ್ ಅವರ ಮಕ್ಕಳು.
ಕಾರುಣ್ಯ ರಾಮ್ ಮತ್ತು ಸಮೃದ್ಧಿ ರಾಮ್
ಕಾರುಣ್ಯ ರಾಮ್ ಅವರು ಸೀನಾ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು. ಇನ್ನೂ ಇವರ ತಂಗಿ ಸಮೃದ್ಧಿ ರಾಮ್ ಅವರನ್ನು ಇಲ್ಲಿ ನೀವು ನೋಡಬಹುದು.
ಆಶಿಕಾ ರಂಗನಾಥ್ ಮತ್ತು ಅನುಷಾ ರಂಗನಾಥ್
ಆಶಿಕಾ ರಂಗನಾಥ್ ಅವರು ಆಗಸ್ಟ್ 5 1996 ರಲ್ಲಿ ಜನಿಸಿದ್ದಾರೆ. ಇವರು ಕ್ರೇಜಿಬಾಯ್ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದರು. ಇನ್ನೂ ಇವರ ಅಕ್ಕ ಅನುಷಾ ರಂಗನಾಥ್ ಅವರು ಕೂಡ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಅಭಿನಯಿಸಿದ್ದಾರೆ…..