ಧನ್ಯ ರಾಮ್ ಕುಮಾರ್ ಅವರು ಸೂರಜ್ ಗೌಡ ಅವರ ಜೊತೆಗೆ ನಿನ್ನ ಸನಿಹಕೆ ಎನ್ನುವ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಇವರ ಸಹೋದರ ಧೀರನ್ ರಾಜ್ ಕುಮಾರ್ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ನಟರಾಗಿದ್ದಾರೆ. ಇವರು ಶಿವ 143 ಎನ್ನುವ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಹಾಸ್ಯ ನಟ ಶರಣ್ ಅವರು ಎಲ್ಲರಿಗೂ ಗೊತ್ತೇ ಇದ್ದಾರೆ. ಮೊದಲು ಇವರು ಸಾಕಷ್ಟು ಚಿತ್ರಗಳಲ್ಲಿ ಹಾಸ್ಯನಟರಾಗಿ ಅಭಿನಯಿಸುತ್ತಿದ್ದರು ತದನಂತರ ನಾಯಕ ನಟರಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನೂ ಇವರ ತಂಗಿ ಕನ್ನಡದ ಖ್ಯಾತ ನಟಿ ಶ್ರುತಿ ಅವರು ಕೂಡ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಿತ್ರದ ಮೂಲಕ ಪಾನ್ ಇಂಡಿಯಾ ನಟರಾಗಿ ಗುರುತಿಸಿಕೊಂಡರು. ಇವರ ಸಹೋದರಿ ದೀಪಿಕಾ ದಾಸ್ ಅವರು ಕಿರುತೆರೆಯ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ನಟ ದುನಿಯಾ ವಿಜಯ್ ಅವರು ಸಾಕಷ್ಟು ಚಿತ್ರಗಳಲ್ಲಿ ಸಹಾಯಕ ನಟರಾಗಿ ಅಭಿನಯಿಸಿದ್ದಾರೆ. ತದನಂತರ ದುನಿಯಾ ಚಿತ್ರದ ಮೂಲಕ ಇವರು ನಾಯಕ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇನ್ನು ಇವರ ಸಹೋದರಿಯ ಹೆಸರು ಅಂಬುಜಾ.
ಬೇಬಿ ಶಾಮಿಲಿ ಅವರು ಬಾಲನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಬಾಲ್ಯ ವಯಸ್ಸಿನಲ್ಲಿ ಸಾಕಷ್ಟು ಗುರುತನ್ನು ಸಾಧಿಸಿಕೊಂಡಿದ್ದರು. ಇನ್ನು ಇವರ ಸಹೋದರ ರಿಚರ್ಡ್ ರಿಷಿ ಅವರು ತೆಲುಗು ಮತ್ತು ತಮಿಳು ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
ಸೃಜನ್ ಲೋಕೇಶ್ ಅವರು ಮಜಾ ಟಾಕೀಸ್ ಶೋ ಮುಖಾಂತರ ತುಂಬಾನೇ ಜನಪ್ರಿಯರಾದರು. ಇವರು ಸಾಕಷ್ಟು ಶೋಗಳನ್ನು ನಡೆಸುತ್ತಿದ್ದು ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಇನ್ನೂ ಇವರ ಸಹೋದರಿ ಪೂಜಾ.
ಲೋಕೇಶ್ ಅವರು ಕೂಡ ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ನಟಿ ಪ್ರೇಮಾ ಅವರು ಸ್ಯಾಂಡಲ್ ವುಡ್ ನಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನೂ ಇವರ ಸಹೋದರ ಅಯ್ಯಪ್ಪ ಇಂಡಿಯನ್ ಕ್ರಿಕೆಟಿಗರಾಗಿದ್ದಾರೆ ಮತ್ತು ಇವರು ಬಿಗ್ ಬಾಸ್ ಮನೆಗೆ ಕೂಡ ಪ್ರವೇಶ ಮಾಡಿದ್ದರು.
ಪವಿತ್ರಾ ಲೋಕೇಶ್ ತೆಲುಗು ಮತ್ತು ಕನ್ನಡ ಭಾಷಾ ಸಹಾಯಕ ನಟಿಯಾಗಿ ಅಭಿನಯಸಿದ್ದಾರೆ. ಇವರ ಸಹೋದರಿ ಆದಿ ಲೋಕೇಶ್ ಅವರು ಕನ್ನಡ ಭಾಷೆಯಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ರಕ್ಷಿತಾ ಪ್ರೇಮ್ ಅವರು ತೆಲುಗು ಮತ್ತು ಕನ್ನಡ ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಸಹೋದರ ರಾಣಾ ಅವರು ಏಕ್ ಲವ್ ಯ ಎನ್ನುವ ಹೊಸ ಚಿತ್ರದಲ್ಲಿ ನಟಿಸಿದ್ದಾರೆ.
ವಿನಯ ಪ್ರಸಾದ್ ಅವರು ಕನ್ನಡ ಮಲಯಾಳಂ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಸಹೋದರ ರವಿ ಭಟ್ ಅವರು ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದು ಕಿರುತೆರೆಯಲ್ಲಿ ಕೂಡ ನಟಿಸಿದ್ದಾರೆ…..