ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಇರುವ ನಟರು ಆಗಿನ ಕಾಲದಲ್ಲಿ ತುಂಬ ಅಪರೂಪದ ಜನಪ್ರಿಯ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಅವುಗಳು ಯಾವುವೆಂದು ಇಲ್ಲಿ ನೋಡೋಣ ಬನ್ನಿ..ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಕಷ್ಟು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ದರ್ಶನ್ ಅವರು ಮೊದಲನೆಯ ಬಾರಿಗೆ ನಾಕೌಟ್ ಸೋಡಾ ಎನ್ನುವ ಜನಪ್ರಿಯ ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ. ಈ ಜಾಹೀರಾತನ್ನು ನೀವು ಇಲ್ಲಿ ನೋಡಬಹುದು.
ಕಿಚ್ಚ ಸುದೀಪ್ ಅವರು ಕೂಡ ಹಲವಾರು ಟಿವಿ ಅಡ್ವರ್ಟೈಸ್ ಮೆಂಟ್ ಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ ಅವರಿಗೆ ಹೆಚ್ಚು ಫೇಮಸ್ ತಂದುಕೊಟ್ಟಿದ್ದು ನಾಕೌಟ್ ಸೋಡಾ ಜಾಹೀರಾತು.
ಉಪೇಂದ್ರ ಅವರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಎಲ್ಲರಿಗೂ ಮನರಂಜನೆ ನೀಡುತ್ತಾರೆ. ಹಾಗೆಯೇ ಇವರು ಯುಬಿ ಸೋಡಾ ಎನ್ನುವ ಜಾಹಿರಾತಿನಲ್ಲಿ ನಟಿಸಿ ಅದರಲ್ಲಿ ಎಲ್ಲಾ ಓಕೆ ಕೂಲ್ ಡ್ರಿಂಕ್ಸ್ ಯಾಕೆ ಎನ್ನುವ ಡೈಲಾಗ್ ಸಖತ್ ಫೇಮಸ್ ಆಗಿತ್ತು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮಣಪ್ಪುರಂ ಗೋಲ್ಡ್ ಲೋನ್ ನ ರಾಯಭಾರಿಯಾಗಿದ್ದು ಇದರಲ್ಲಿ ಸಾಕಷ್ಟು ಟಿವಿ ಅಡ್ವರ್ಟೈಸ್ ಮೆಂಟ್ ಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿದ ಮಣಪುರಂ ನ ಒಂದು ಜನಪ್ರಿಯ ಜಾಹೀರಾತನ್ನು ಇಲ್ಲಿ ನೀವು ನೋಡಬಹುದು.
ಉಪೇಂದ್ರ ಅವರು ಲೂನಾರ್ಸ್ ವಾಕ್ ಮೇಟ್ ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು ಇದರಲ್ಲಿ ಒಂದು ಜಾಹೀರಾತಿನಲ್ಲಿ ತುಂಬ ಫನ್ನಿಯಾಗಿ ಅಭಿನಯ ಮಾಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಪೋತಿಸ್ ಎನ್ನುವ ಅಡ್ವರ್ಟೈಸ್ ಮೆಂಟ್ ನಲ್ಲಿ ಅಭಿನಯಿಸಿದ್ದರು. ಇನ್ನೂ ಇವರ ಜೊತೆಗೆ ತಮನ್ನಾ ಭಾಟಿಯಾ, ಸಾಧು ಕೋಕಿಲ, ಅವಿನಾಶ್, ಸುಧಾ ಬೆಳವಾಡಿ ಅವರು ಕೂಡ ಅಭಿನಯಿಸಿದ್ದಾರೆ. ಇನ್ನು ಈ ಈ ಜಾಹೀರಾತು ತುಂಬಾನೆ ಫೇಮಸ್ ಆಗಿತ್ತು.
ರಮೇಶ್ ಅರವಿಂದ್ ಅವರು ಸಾಕಷ್ಟು ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ ವಾಸು ಅಗರಬತ್ತಿ ಜಾಹೀರಾತು ತುಂಬಾನೆ ಫೇಮಸ್ ಎಂದು ಹೇಳಬಹುದು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕಲ್ಯಾಣ್ ಜ್ಯುವೆಲ್ಲರ್ಸ್ ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಇನ್ನು ಕಲ್ಯಾಣ್ ಜ್ಯುವೆಲ್ಲರ್ಸ್ ನ ಸಾಕಷ್ಟು ಜಾಹೀರಾತುಗಳನ್ನು ನೀಡಿದ್ದಾರೆ. ಇದರಲ್ಲಿ ಇದು ಕೂಡ ಒಂದು…..