ಸ್ನೇಹಿತರೇ ಬನ್ನಿ ನಾವು ಈಗ ಸ್ಯಾಂಡಲ್ ವುಡ್ ನಟರು ತಮ್ಮ ಮಕ್ಕಳ ಜೊತೆಗೆ ನಟಿಸಿರುವ ಸಿನಿಮಾಗಳು ಯಾವುವು ಎಂದು ತಿಳಿದುಕೊಳ್ಳೋಣ..
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ದೊಡ್ಡ ಮಗಳ ಹೆಸರು ನಿರೂಪಮ ರಾಜ್ ಕುಮಾರ್ ಮತ್ತು ಚಿಕ್ಕ ಮಗಳ ಹೆಸರು ನಿವೇದಿತ ರಾಜ್ ಕುಮಾರ್. ಇದರಲ್ಲಿ ಚಿಕ್ಕ ಮಗಳ ಜೊತೆಗೆ ಶಿವರಾಜಕುಮಾರ್ ಅವರು ಅಂಡಮಾನ್ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ. ಇದರಲ್ಲಿ ನಿವೇದಿತಾ ಅವರು ಇನ್ನೂ ಚಿಕ್ಕ ವಯಸ್ಸಿನಲ್ಲಿ ಇದ್ದರು.
ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಇಬ್ಬರು ಮಕ್ಕಳು ಒಬ್ಬರು ಮನೋರಂಜನ್ ರವಿಚಂದ್ರನ್ ಮತ್ತೊಬ್ಬರು ವಿಕ್ರಮ್ ರವಿಚಂದ್ರನ್. ಇದರಲ್ಲಿ ವಿಕ್ರಮ್ ರವಿಚಂದ್ರನ್ ಅವರು ರವಿಚಂದ್ರನ್ ಅವರ ಅಭಿನಯದ ಹಠವಾದಿ ಚಿತ್ರದಲ್ಲಿ ರವಿಚಂದ್ರನ್ ಅವರ ಚಿಕ್ಕವಯಸ್ಸಿನ ಪಾತ್ರದಲ್ಲಿ ವಿಕ್ರಂ ಅವರು ಅಭಿನಯಿಸಿದ್ದಾರೆ.
ದುನಿಯಾ ವಿಜಯ್ ಅವರಿಗೆ ಸಾಮ್ರಾಟ್ ಎನ್ನುವ ಮಗ ಇದ್ದಾನೆ. ಇನ್ನೂ ಸಾಮ್ರಾಟ್ ದುನಿಯಾ ವಿಜಯ್ ಅಭಿನಯದ ಕುಸ್ತಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗ ವಿನೀಶ್ ದರ್ಶನ್ ಅವರು ತಮ್ಮ ತಂದೆಯ ಜೊತೆಗೆ ಐರಾವತ ಚಿತ್ರದಲ್ಲಿ ನಟಿಸಿದ್ದಾರೆ. ಹಾಗೆಯೇ ಯಜಮಾನ ಚಿತ್ರದಲ್ಲೂ ಕೂಡ ಅಭಿನಯಿಸಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಮತ್ತು ಉಪೇಂದ್ರ ಅವರ ಮಗಳಾದ ಐಶ್ವರ್ಯ ಉಪೇಂದ್ರ ಅವರು ಪ್ರಿಯಾಂಕಾ ಅವರು ನಟಿಸಿದ ದೇವಕಿ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯ ಮಾಡಿದ್ದಾರೆ.
ಡಾ ರಾಜಕುಮಾರ್ ಅವರ ಜೊತೆಗೆ ತಮ್ಮ ಮಗ ಪುನೀತ್ ರಾಜ್ ಕುಮಾರ್ ಅವರು ಪ್ರೇಮದ ಕಾಣಿಕೆ, ಎರಡು ನಕ್ಷತ್ರಗಳು, ಭಕ್ತಪ್ರಹ್ಲಾದ, ಚಲಿಸುವ ಮೋಡಗಳು ಸೇರಿದಂತೆ ಸುಮಾರು 11 ಚಿತ್ರಗಳಲ್ಲಿ ಬಾಲ ನಟರಾಗಿ ಅಭಿನಯಿಸಿದ್ದಾರೆ.
ನವರಸ ನಾಯಕ ಜಗ್ಗೇಶ್ ಅವರಿಗೆ ಇಬ್ಬರು ಮಕ್ಕಳು ಒಬ್ಬರು ಗುರುರಾಜ್ ಮತ್ತೊಬ್ಬರು ಯತಿರಾಜ್. ಇದರಲ್ಲಿ ಯತಿರಾಜ್ ಅವರು ಜಗ್ಗೇಶ್ ಅವರ ಸಿನಿಮಾಗಳಾಗಿರುವ ಜಿಪುಣ ನನ್ನ ಗಂಡ ಹೀಗೆ ಇನ್ನೂ ಮೊತ್ತ 5 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗ ವಿಹಾನ್ ಗಣೇಶ್ ಗೀತಾ ಚಿತ್ರದಲ್ಲಿ ಅಭಿನಯಿಸಿದ್ದಾರೆ ಮತ್ತು ಮಗಳು ಚಾರಿತ್ರ್ಯ ಗಣೇಶ್ ಚಮಕ್ ಚಿತ್ರದಲ್ಲಿ ಅಭಿನಯಿಸಿದ್ದಾರೆ…..