Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಯಾವೆಲ್ಲ ನಟರು ತಮ್ಮ‌ ತಾಯಿಯೊಂದಿಗೆ ನಟಿಸಿದ್ದಾರೆ ಗೊತ್ತಾ?!

0

ನಮ್ಮ ಕನ್ನಡ ಚಿತ್ರರಂಗದಲ್ಲಿ ಒಬ್ಬರಿಗಿಂತ ಒಬ್ಬರನ್ನು ಮೀರಿಸುವಂತಹ ಅಪಾರ ಕಲಾವಿದರಿದ್ದಾರೆ.‌ ಈ‌ ವಿಷಯದಲ್ಲಿ ನಮ್ಮ‌ ಸ್ಯಾಂಡಲ್ ವುಡ್ ಶ್ರೀಮಂತವಾಗಿದೆ. ಸ್ಯಾಂಡಲ್ ವುಡ್ ಕಲಾವಿದರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ಪರ ಭಾಷೆಗಳಲ್ಲಿಯೂ ಮಿಂಚಿದ್ದಾರೆ. ಡಾ ರಾಜ್ ಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್, ಅಂಬರೀಶ್, ಲೋಕೇಶ್, ಶಂಕರ್ ನಾಗ್ ಹೀಗೆ ಅನೇಕ ಮೇರು ನಟರು ನಮ್ಮ ಚಿತ್ರರಂಗದ ಆಸ್ತಿಗಳು.

ಇದೀಗ ಅವರ್ಯಾರು ಇಲ್ಲವಾದರೂ ಆ ನಂತರ ಬಂದ ನಟರು ಕನ್ನಡ ರಂಗವನ್ನು ಆಳುತ್ತಿದ್ದಾರೆ. ಇನ್ನು ಇವತ್ತು ನಾವು ನಿಮಗೆ ನಮ್ಮ ಸ್ಯಾಂಡಲ್ ವುಡ್ ನ ಯಾವೆಲ್ಲ ನಟರು ಅವರ ತಾಯಂದಿರ ಜೊತೆ ನಟಿಸಿದ್ದಾರೆ ಅನ್ನುವುದನ್ನು ಹೇಳಲಿದ್ದೇವೆ. ಮೊದಲನೆಯದಾಗಿ ಸೂಪರ್ ಸ್ಟಾರ್ ಉಪೇಂದ್ರ. ತರ್ಲೆ ನನ್ಮಗ ಚಿತ್ರ ನಿರ್ದೇಶನ ಮಾಡುವ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಇವರು, ಮೊತ್ತ ಮೊದಲು ನಟಿಸಿದ್ದು ತಾನೇ ನಿರ್ದೇಶನ ಮಾಡಿದ ಎ ಸಿನಿಮಾದಲ್ಲಿ.

ರಿಯಲ್‌ ಸ್ಟಾರ್ ಆಗಿ ಗುರುತಿಸಿಕೊಂಡ ಉಪೇಂದ್ರ ಅವರು ತನ್ನ ತಾಯಿ ಅನಸೂಯ ರಾವ್ ಅವರನ್ನು ತನ್ನ‌ ಸಿನಿಮಾದಲ್ಲಿ ನಟಿಸುವಂತೆ ಮಾಡಿದ್ದಾರೆ. ಹೌದು, ತಾನೇ ನಟಿಸಿ ನಿರ್ದೇಶಿಸಿರುವ ಸೂಪರ್ ಸಿನಿಮಾದಲ್ಲಿ‌ ಉಪೇಂದ್ರ ತಾಯಿ ಅತಿಥಿ ಪಾತ್ರ ಮಾಡಿದ್ದಾರೆ. ಇನ್ನು, ಕ್ರೇಜಿ‌ಸ್ಟಾರ್ ರವಿಚಂದ್ರನ್ ಅವರು ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿ ಯ ಅದ್ಭುತ ಕಲಾವಿದ.‌ ಸಿನಿಮಾದಲ್ಲಿ ರಿಚ್ ನೆಸ್ ತಂದಿರುವ ಕಲಾವಿದ. ಇವರ ತಾಯಿ ಪುಟ್ಟಮ್ಮ ವೀರಸ್ವಾಮಿ.

ತಾಯಿಯ ಮೇಲೆ‌ ಅಪಾರ ಪ್ರೀತಿ ಇರುವ ಅವರು ಕೂಡ ತಮ್ಮ ತಾಯಿಯನ್ನು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಮಾಡಿದ್ದಾರೆ. ಅವರೇ ಬರೆದು ನಿರ್ದೇಶಿಸಿರುವ ಹಠವಾದಿ‌‌ ಸಿನಿಮಾದಲ್ಲಿ ಬರುವ ಒಂದು ಹಾಡಿನಲ್ಲಿ ಪುಟ್ಟಮ್ಮ‌ ನಟಿಸಿದ್ದಾರೆ. ಹಠ ಹಠ ಗೆಲ್ಲೋನಿಗೆ ಬೇಕು ಹಠ ಎನ್ನುವ ಹಾಡಿನಲ್ಲಿ ರವಿಚಂದ್ರನ್ ಅವರಿಗೆ ಆರತಿ ತೆಗೆಯುವ ಸೀನ್ ನಲ್ಲಿ‌‌ ಕಾಣಿಸಿಕೊಂಡಿದ್ದಾರೆ.

 

ಇನ್ನು ಡಾ ರಾಜ್ ಕುಮಾರ್ ಅವರ ಕುಟುಂಬ ಕಲಾವಿದರ ಕುಟುಂಬ.‌ ರಾಜ್ ಕುಮಾರ್ ಹಾಗೂ ಮಕ್ಕಳು ನಟನಾ ಇಂಡಸ್ಟ್ರಿ ಯಲ್ಲಿದ್ದರೆ ಪಾರ್ವತಮ್ಮ‌ ಮಾತ್ರ ಸಿನಿಮಾ ನಿರ್ಮಾಣ ಕೆಲಸದಲ್ಲಿ ಮಾತ್ರ ಗುರುತಿಸಿಕೊಂಡವರು.‌ ಆದರೆ ಜೋಗಿ‌ಪ್ರೇಮ್ ನಿರ್ದೇಶನದ ಜೋಗಿ ಸಿನಿಮಾದಲ್ಲಿ ಶಿವಣ್ಣನಿಗೆ ಭಿಕ್ಷೆ ನೀಡುವ ಪಾತ್ರದಲ್ಲಿ ‌ಡಾ ರಾಜ್‌ಕುಮಾರ್ ಹಾಗೂ ಪಾರ್ವತಮ್ಮ‌ ಕಾಣಿಸಿಕೊಡಿದ್ದಾರೆ.‌

ಇದರಲ್ಲಿ ಇಬ್ಬರೂ ಶಿವರಾಜ್ ಕುಮಾರ್ ಅವರಿಗೆ ಆಶೀರ್ವಾದ ಮಾಡುತ್ತಾರೆ. ಅದೇ ರೀತಿ ಲೂಸ್ ಮಾದ ಅವರ ತಾಯಿ ಅಂಬುಜ ಕೂಡ ಒಬ್ಬ ನಟಿ. ಇವರಿಬ್ಬರೂ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಸಿನಿಮಾ‌ ಜರ್ನಿ ಆರಂಭ ಮಾಡಿದ್ದರು. ದುನಿಯಾ ಸಿನಿಮಾದಲ್ಲಿ ಯೋಗಿಯವರು ಲೂಸ್ ಮಾದ ಆಗಿ ಎಂಟ್ರಿ ಕೊಟ್ಟಿದ್ದರು. ‌ಇದೇ‌ ಸಿನಿಮಾದಲ್ಲಿ ಅಂಬುಜ ಅವರು ನಟಿಸಿದ್ದಾರೆ. ಅವರು ಅದರಲ್ಲಿ ಹಾಸ್ಟೆಲ್ ವಾರ್ಡನ್ ಆಗಿ ಕಾಣಿಸಿಕೊಂಡಿದ್ದರು. ಅದೇ ರೀತಿ,

ಸೃಜನ್‌ ಲೋಕೇಶ್ ತಾಯಿ‌ ಗಿರಿಜಾ ಲೋಕೇಶ್ ಅವರು ಕೂಡ ಮಗನ ಜೊತೆ ಸ್ನೇಹಿತರು, ಎಲ್ಲಿದ್ದೆ ಇಲ್ಲಿ ತನಕ, ಅನ್ನುವ ಸಿನಿಮಾದಲ್ಲಿ‌ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.‌ ಇನ್ನು, ಕನ್ನಡ ಸಿನಿಮಾ ಇಂಡಸ್ಟ್ರಿಯ ಅದ್ಭುತ ಕಲಾವಿದರಲ್ಲಿ ವಿನೋದ್ ರಾಜ್ ಕೂಡ ಒಬ್ಬರು.‌ಅವರ ತಾಯಿ‌ ಲೀಲಾವತಿ ಕೂಡ ಅದ್ಭುತ ನಟಿ.‌ ಇವರಿಬ್ಬರೂ ಜೊತೆಯಾಗಿ ,
ಕಾಲೇಜ್ ಹೀರೋ, ಕನ್ನಡದ ಕಂದ, ಯಾರದು, ನಂಜುಂಡ, ಶುಕ್ರ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.‌ ಈ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply