ಗೋಲ್ಡನ್ ಸ್ಟಾರ್ ಗಣೇಶ್ ಅವರು ಹೀರೋ ಆಗುವ ಮುನ್ನ ಇವರು ತುಂಬಾ ಕಷ್ಟವನ್ನು ನೋಡಿ ಬಂದಿದ್ದಾರೆ. ಇವರು ಮೊದಲು ಕಡುಬಡತನದಲ್ಲಿ ಹುಟ್ಟಿದ್ದರು. ಇದಾದ ಮೇಲೆ ಕಾಮೆಡಿ ಟೈಮ್ ಗಣೇಶ್ ಎನ್ನುವ ಕಾರ್ಯಕ್ರಮದ ಮುಖಾಂತರ ಜನಪ್ರಿಯರಾದರು. ತದನಂತರ ಇವರು ಸಿನಿಮಾಗಳಲ್ಲಿ ಸಹಾಯಕ ನಟರಾಗಿ ಅಭಿನಯಿಸುವುದಕ್ಕೆ ಶುರು ಮಾಡಿದರು.
ಹೀಗೆ ತಮ್ಮ ಕೆರಿಯರ್ ಅನ್ನು ಶುರು ಮಾಡಿ 2006 ರಲ್ಲಿ ನಟಿ ರೇಖಾ ಅವರ ಜೊತೆಗೆ ಚೆಲ್ಲಾಟ ಚಿತ್ರದ ಮೂಲಕ ಹೀರೋ ಆಗಿ ತೆರೆಯ ಮೇಲೆ ಕಾಣಿಸಿದರು. ಇದಾದ ಮೇಲೆ ಬಂದ ಮುಂಗಾರು ಮಳೆ ಚಿತ್ರದ ಮೂಲಕ ಇವರು ಎಲ್ಲೆಡೆ ಫೇಮಸ್ ಆದರು ಎಂದು ಹೇಳಬಹುದು. ಇನ್ನು ಗಣೇಶ್ ಅವರು ಜುಲೈ 2 1980 ರಂದು ಅಡಕಮರನಹಳ್ಳಿಯಲ್ಲಿ ಜನಿಸಿದ್ದಾರೆ.
ಇವರ ತಂದೆ ನೇಪಾಳಿ ಮತ್ತು ತಾಯಿ ಕನ್ನಡತಿ. ಇನ್ನು ಗಣೇಶ್ ಅವರು ಮುಂಗಾರು ಮಳೆ ಚಿತ್ರದಲ್ಲಿ ನಟಿಸಿದ ಮೇಲೆ ಸಾಕಷ್ಟು ಹಿಟ್ ಚಿತ್ರಗಳನ್ನು ನಮಗೆ ನೀಡಿದ್ದಾರೆ. ಚೆಲುವಿನ ಚಿತ್ತಾರ, ಗಾಳಿಪಟ, ಮಳೆಯಲಿ ಜೊತೆಯಲಿ, ಶೈಲೂ, ಮುಂಜಾನೆ, ರೋಮಿಯೋ, ಆಟೋರಾಜ, ಶ್ರಾವಣಿ ಸುಬ್ರಹ್ಮಣ್ಯ, ಖುಷಿಖುಷಿಯಾಗಿ, ದಿಲ್ ರಂಗೀಲ, ಸುಂದರಾಂಗ ಜಾಣ, ಚಮಕ್, ಗಿಮಿಕ್, ಗೀತಾ ಹೀಗೆ ಸಾಕಷ್ಟು ಚಿತ್ರಗಳು ಇವೆ ಎಂದು ಹೇಳಬಹುದು.
ಇನ್ನು ಗಣೇಶ್ ಅವರು ಸೂಪರ್ ಮಿನಿಟ್ ಎನ್ನುವ ಕಾರ್ಯಕ್ರಮವನ್ನು 4 ಸೀಸನ್ ಗಳಲ್ಲಿ ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ. ಇನ್ನು ಗಣೇಶ್ ಅವರು 2008 ರಲ್ಲಿ ಶಿಲ್ಪಾ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಚಾರಿತ್ರ್ಯ ಗಣೇಶ್ ಮತ್ತು ವಿಹಾನ್ ಗಣೇಶ್ ಎನ್ನುವ ಇಬ್ಬರು ಮಕ್ಕಳಿದ್ದಾರೆ.
ಹಾಗೆಯೇ ಗಣೇಶ್ ಅವರಿಗೆ ಉಮೇಶ್ ಮತ್ತು ಮಹೇಶ್ ಎನ್ನುವ ಇಬ್ಬರು ಸ್ವಂತ ತಮ್ಮಂದಿರು ಕೂಡ ಇದ್ದಾರೆ. ಇದರಲ್ಲಿ ಮಹೇಶ್ ಅವರು ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಗಣೇಶ್ ಅವರಷ್ಟು ಜನಪ್ರಿಯರಾಗಲಿಲ್ಲ. ಇನ್ನೂ ಮಹೇಶ್ ಅವರು ಮಾಧ್ಯಮಗಳ ಮುಂದೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಗಣೇಶ್ ಅವರ ಇಬ್ಬರು ತಮ್ಮಂದಿರು ಹೇಗಿದ್ದಾರೆ ಎಂದು ಇಲ್ಲಿ ನೀವು ನೋಡಬಹುದು…..