Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸ್ಟಾರ್ ಅಂದ್ರೆ ಹೀಗಿರಬೇಕು, ನಟ ಶರಣ್ ರವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಅಡುಗೆ ಮಾಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ !!

0

ಕೆಲವರು ಸಿನಿಮಾ ರಂಗದಲ್ಲಿ ದೊಡ್ಡ ಸ್ಟಾರ್ ಆದರೆ ತಮ್ಮ ಮೊದಲನೆಯ ಜೀವನವನ್ನು ಮರೆತು ಬಿಡುತ್ತಾರೆ. ಹೌದು ಕೆಲವರಿಗೆ ತಮ್ಮ ಮೊದಲನೆಯ ಜೀವನವು ಹೇಗಿತ್ತು ಎಂದೇ ಅವರು ನೆನಪು ಕೂಡ ಮಾಡಿಕೊಳ್ಳುವುದಿಲ್ಲ. ಆದರೆ ಇನ್ನೂ ಕೆಲ ಕಲಾವಿದರು ಮೊದಲಿನಿಂದಲೂ ಕಷ್ಟದ ಜೀವನವನ್ನು ನೋಡಿ ಈಗ ದೊಡ್ಡ ಸ್ಟಾರ್ ಆಗಿದ್ದರು ಕೂಡ ಆ ಮೊದಲನೆಯ ಜೀವನವನ್ನು ಇನ್ನೂ ಮರೆತಿರುವುದಿಲ್ಲ.

ಅಂತಹವರು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸ್ಟಾರ್ ಗಳು ಇದ್ದಾರೆ ಎಂದು ಹೇಳಬಹುದು. ಈಗ ನಾವು ಹೇಳಲು ಹೊರಟಿರುವ ಸ್ಟಾರ್ ಯಾರು ಎಂದರೆ ಅವರು ಬೇರೆ ಯಾರೂ ಅಲ್ಲ ಹಾಸ್ಯನಟ ಶರಣ್. ಶರಣ್ ಅವರು ಮೊದಲು ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿದ್ದರು. ಇದಾದ ಮೇಲೆ ತಮ್ಮ 100ನೆಯ ಚಿತ್ರದ ಮೂಲಕ ಇವರು ನಾಯಕನಟರಾಗಿ ಸಿನಿಮಾಗಳಲ್ಲಿ ನಟಿಸುವುದಕ್ಕೆ ಶುರು ಮಾಡಿಕೊಂಡರು.

 

ಇನ್ನು ಶರಣ್ ಅವರು ಫೆಬ್ರವರಿ 6 1972 ರಂದು ಹಾಸನದಲ್ಲಿ ಜನಿಸಿದರು. ಇವರ ತಂದೆಯ ಹೆಸರು ಜೆ.ವಿ ಕೃಷ್ಣ ಮತ್ತು ತಾಯಿಯ ಹೆಸರು ರಾಧಾ ಕೃಷ್ಣ. ಇನ್ನು ಇವರಿಗೆ ನಟಿ ಶ್ರುತಿ ಅವರು ತಂಗಿಯಾಗಬೇಕು. ಮೊದಲು ಶರಣ್ ಅವರು ಸಿನಿಮಾಗಳಲ್ಲಿ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ಅಭಿನಯ ಮಾಡುತ್ತಿದ್ದರು. ತದನಂತರ ಜನಪ್ರಿಯ ನಟರಾಗಿ ಈಗ ಗುರುತಿಸಿಕೊಂಡಿದ್ದಾರೆ.

ಇವರು 1996 ರಲ್ಲಿ ಪ್ರೇಮ ಪ್ರೇಮ ಪ್ರೇಮ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು. ಹೀಗೆ ಸುಮಾರು ಚಿತ್ರಗಳಲ್ಲಿ ಹಾಸ್ಯದ ಪಾತ್ರಗಳನ್ನು ಮಾಡಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ತದನಂತರ ರಾಂಬೋ ಚಿತ್ರದ ಮೂಲಕ ಇವರು ನಾಯಕ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡರು.

ಇದಾದ ಮೇಲೆ ಸಾಕಷ್ಟು ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯ ಮಾಡಿದ್ದಾರೆ. ಇದರ ಜೊತೆಗೆ ಇವರು ರಾಜ ರಾಜೇಂದ್ರ, ವಜ್ರಕಾಯ, ಬುಲೆಟ್ ಬಸ್ಯಾ, ದನ ಕಾಯೋನು ಚಿತ್ರಗಳಲ್ಲಿ ಹಾಡನ್ನು ಕೂಡ ಹಾಡಿದ್ದಾರೆ. ಇನ್ನು ಶರಣ್ ಅವರು ಹೇಳಬೇಕು ಅಂದರೆ ತುಂಬಾ ಸಿಂಪಲ್.

ಇವರು ಇಷ್ಟು ದೊಡ್ಡ ಸ್ಟಾರ್ ನಟ ಆಗಿದ್ದರು ಕೂಡ ತಮ್ಮ ಜಮೀನಿಗೆ ಹೋಗಿ ಅಲ್ಲಿ ಸ್ವತಃ ಅಡುಗೆಯನ್ನು ಮಾಡಿ ಸವಿದಿದ್ದಾರೆ. ಇದರ ವಿಡಿಯೋವನ್ನು ಇಲ್ಲಿ ನೀವು ನೋಡಬಹುದು. ಇದನ್ನು ನೋಡಿದರೆ ಸ್ಟಾರ್ ಎಂದರೆ ಹೀಗಿರಬೇಕು ಎಂದು ಅನಿಸುತ್ತದೆ…..

Leave A Reply