ದಕ್ಷಿಣ ಭಾರತದ ಕೆಲ ಸಿನಿಮಾ ಸೆಲೆಬ್ರಿಟಿಗಳು ತಮ್ಮ ಮದುವೆಗಳನ್ನು ತುಂಬಾ ದುಬಾರಿಯಾಗಿ ಮಾಡಿಕೊಂಡಿದ್ದಾರೆ. ಅಂತಹ ಸೆಲೆಬ್ರಿಟಿಗಳು ಯಾರೆಂದು ಇಲ್ಲಿ ತಿಳಿದುಕೊಳ್ಳೋಣ ಬನ್ನಿ..
ತೆಲುಗಿನ ಯಂಗ್ ಟೈಗರ್ ಆಗಿರುವ ಜೂನಿಯರ್ ಎನ್ ಟಿ ಆರ್ ಮೇ 5 2011 ರಂದು ಲಕ್ಷ್ಮಿ ಪ್ರಣಿತ ಎನ್ನುವವರನ್ನು ಹೈದರಾಬಾದ್ ನಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇವರ ಮದುವೆಯ ಖರ್ಚು ಸುಮಾರು 100 ಕೋಟಿ ರೂ.ಗಳು ಆಗಿದೆ. ಹಾಗೆ ಲಕ್ಷ್ಮಿ ಪ್ರಣಿತ ಅವರು ಧರಿಸಿರುವ ಸೀರೆಯ ಬೆಲೆ ಸುಮಾರು 1 ಕೋಟಿ ರೂ. ಆಗಿತ್ತು.
ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ಮಾರ್ಚ್ 6 2011 ರಂದು ಸ್ನೇಹ ರೆಡ್ಡಿ ಎನ್ನುವವರನ್ನು ಹೈದರಾಬಾದ್ ನಲ್ಲಿ ತುಂಬಾ ಅದ್ದೂರಿಯಾಗಿ ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇವರು ಮದುವೆ ಆದ ಮಂಟಪವನ್ನು ತಿರುಪತ್ತಿಯ ದೇವಸ್ಥಾನದಂತೆ ಮಾಡಿ ಅವರ ಮದುವೆಗೆ ಸಾವಿರಾರು ಜನರು ಅತಿಥಿಗಳಾಗಿದ್ದರು. ಇನ್ನು ಇವರ ಮದುವೆಗೆ ಸುಮಾರು 90 ರಿಂದ 100 ಕೋಟಿ ರೂ.ಗಳು ಖರ್ಚಾಗಿತ್ತು.
ಮೆಗಾಸ್ಟಾರ್ ಚಿರಂಜೀವಿ ಅವರ ಮಗ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರು ಉಪಾಸಣಾ ಕಾಮಿನೆನಿ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇವರ ವಿವಾಹವು ಹೈದರಾಬಾದ್ ನ ಒಂದು ಫಾರ್ಮ್ ಹೌಸ್ ನಲ್ಲಿ ಜರುಗಿದ್ದು ಫಾರ್ಮ್ ಹೌಸ್ ಪೂರ್ತಿ ಮುತ್ತುಗಳಿಂದ ಅಲಂಕಾರ ಮಾಡಿದ್ದು ಸಾಕಷ್ಟು ದುಡ್ಡನ್ನು ವೆಚ್ಚ ಮಾಡಿ ಇವರ ಮದುವೆಯನ್ನು ಮಾಡಲಾಗಿದೆ. ಇನ್ನು ಇವರ ಮದುವೆಯ ಆಹ್ವಾನ ಪತ್ರಿಕೆ ಸುಮಾರು 1200 ರೂ.ಗಳು ಖರ್ಚಾಗಿತ್ತು.
ಬಾಲಿವುಡ್ ನ ಖ್ಯಾತ ಕಲಾವಿದರಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಮದುವೆ ನವಂಬರ್ 14 2018 ರಂದು ಇಟಲಿಯ ಲೇಕ್ ಕೋವಾದಲ್ಲಿ ಜರುಗಿದ್ದು ಇವರ ಮದುವೆಗೆ ಸುಮಾರು 77 ಕೋಟಿ ರೂ.ಗಳು ವೆಚ್ಚವಾಗಿದೆ. ಇನ್ನು ಇವರ ಮದುವೆಗೆ ಬಂದ ಅತಿಥಿಗಳಿಗೆ ಅಂದರೆ ಅವರು ನೆಲೆಸಿದ್ದ ಹೋಟೆಲಿಗೆ ಸುಮಾರು 2 ರೂ.ಗಳ ಖರ್ಚನ್ನು ಮಾಡಿದ್ದರು.
ಬಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶರ್ಮ ಅವರು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಡಿಸೆಂಬರ್ 11 2017 ರಂದು ಇಟಲಿಯ ಟೆಸ್ಕಾ ರೆಸಾರ್ಟ್ ನಲ್ಲಿ ತುಂಬಾ ಅದ್ದೂರಿಯಾಗಿ ವಿವಾಹ ಮಾಡಿಕೊಂಡರು. ಇನ್ನು ಇವರ ಮದುವೆಗೆ ಬಂದ ಅತಿಥಿಗಳು ಹೋಟೆಲ್ ನಲ್ಲಿ ನೆಲೆಸುವುದಕ್ಕೆ ಸುಮಾರು 50 ಕೋಟಿ ರೂ. ಗಳು ವೆಚ್ಚವಾಗಿತ್ತು. ಇನ್ನು ಇವರ ಮದುವೆಗೆ ಸುಮಾರು 100 ಕೋಟಿ ರೂ.ಗಳು ಖರ್ಚಾಗಿತ್ತು.
ಕನ್ನಡದ ಖ್ಯಾತ ಕಲಾವಿದರಾಗಿರುವ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ತುಂಬಾ ಅದ್ದೂರಿಯಾಗಿ ವಿವಾಹ ಮಾಡಿಕೊಂಡರು. ಇನ್ನು ಇವರ ಮದುವೆಗೆ ಸಾವಿರಾರು ಸಂಖ್ಯೆಯಲ್ಲಿ ಅತಿಥಿಗಳು ಬಂದಿದ್ದರು. ಇನ್ನು ಇವರ ಮದುವೆ ಕೂಡ ದುಬಾರಿ ಮದುವೆಯಲ್ಲಿ ಒಂದಾಗಿದೆ.
ತಮಿಳಿನ ಖ್ಯಾತ ನಟ ಧನುಷ್ ಅವರು ತಲೈವಾ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್ ಅವರ ಮಗಳು ಐಶ್ವರ್ಯ ರಜನಿಕಾಂತ್ ಅವರನ್ನು ಕೇವಲ 21ನೇ ವರ್ಷದಲ್ಲೇ ವಿವಾಹ ಮಾಡಿಕೊಂಡರು. ಇನ್ನ ಇವರ ಮದುವೆ ತುಂಬಾ ಆಡಂಬರವಾಗಿ ವೈಭವವಾಗಿ ನಡೆದಿತ್ತು.
ತಮಿಳಿನ ಖ್ಯಾತ ಕಲಾವಿದರಾದ ಸೂರ್ಯ ಮತ್ತು ಜ್ಯೋತಿಕ ಅವರು ಚೆನ್ನನಲ್ಲಿ ತುಂಬಾ ಅದ್ದೂರಿಯಾಗಿ ವಿವಾಹ ಮಾಡಿಕೊಂಡರು. ಇನ್ನ ಇವರ ಮದುವೆಗೆ ಸಾಕಷ್ಟು ರಾಜಕೀಯ ವ್ಯಕ್ತಿಗಳು ಸಿನಿಮಾದ ಕಲಾವಿದರು ಬಂದು ದಂಪತಿಗಳಿಗೆ ಆಶೀರ್ವಾದ ಮಾಡಿದ್ದರು. ಇನ್ನು ಇವರ ಮದುವೆ ಕೂಡ ದುಬಾರಿ ಮದುವೆಯಲ್ಲಿ ಒಂದಾಗಿದೆ…..