ಸೋಷಿಯಲ್ ಮೀಡಿಯಾವನ್ನೇ ತಲ್ಲಣ ಗೊಳಿಸಿದ ಈ ಬಲೂನ್ ಹುಡುಗಿ ಯಾರು ಗೊತ್ತೇ ?? ಇವರ ಹಿನ್ನೆಲೆ ಏನು ಗೊತ್ತೇ ?? ತಿಳಿದರೆ ನಿಜಕ್ಕೂ ವಿಸ್ಮಯ ಆಗ್ತೀರಾ !!
ಈಗ ಕಾಲ ಹೇಗಿದೆಯೆಂದರೆ ಸೋಷಿಯಲ್ ಮೀಡಿಯಾ ಒಂದಿದ್ದರೆ ಸಾಕು ರಾತ್ರೋರಾತ್ರಿ ಒಂದೇ ದಿನಕ್ಕೆ ಸ್ಟಾರ್ ಗಳಾಗಿ ಮಿಂಚುತ್ತಾರೆ. ಅವರ ಒಂದು ಫೋಟೋ ಅಥವಾ ಒಂದು ವೀಡಿಯೊದಿಂದ ಒಂದೇ ದಿನದಲ್ಲೇ ಸ್ಟಾರ್ ಆಗುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ಈ ಮಟ್ಟಕ್ಕೆ ಬರುವುದಕ್ಕೆ ಸಾಕಷ್ಟು ಕಷ್ಟವನ್ನು ಪಡುತ್ತಿದ್ದರು. ತುಂಬಾ ಏರುಪೇರುಗಳನ್ನು ನೋಡಿ ನೋವುಗಳನ್ನು ತಡೆದುಕೊಂಡು ಬಂದು ಎತ್ತರಕ್ಕೆ ಬೆಳೆಯುತ್ತಿದ್ದರು.
ಆದರೆ ಈಗ ಹಾಗಿಲ್ಲ ಸೋಷಿಯಲ್ ಮೀಡಿಯಾದಿಂದ ಸಾಕಷ್ಟು ಜನರು ರಾತ್ರೋರಾತ್ರಿ ಸ್ಟಾರ್ ಗಳಾಗಿರುವ ಉದಾಹರಣೆಗಳು ಹೆಚ್ಚು ಇವೆ ಎಂದು ಹೇಳಬಹುದು. ಇತ್ತೀಚೆಗೆಷ್ಟೇ ಒಬ್ಬ ಕೇರಳದ ಮುದುಕ ಕೂಲಿ ಕೆಲಸ ಮಾಡುತ್ತಿದ್ದ. ಆತನ ಒಂದು ಫೋಟೋ ವಿಡಿಯೋದಿಂದ ರಾತ್ರೋರಾತ್ರಿ ಮಾಡೆಲ್ ಆಗಿ ಬದಲಾದರು. ಇದರೊಂದಿಗೆ ಈಗ ಮತ್ತೊಂದು ಉದಾಹರಣೆ ಬಂದಿದೆ.
ಹೌದು ಕೇರಳದಲ್ಲಿ ರಾಜಸ್ಥಾನದ ಹುಡುಗಿ ಹೊಟ್ಟೆಪಾಡಿಗಾಗಿ ಬಲೂನ್ ಗಳನ್ನು ಮಾರುತ್ತಿದ್ದಳು. ಒಬ್ಬ ಫೋಟೋಗ್ರಫರ್ ಆ ಹುಡುಗಿಯ ಸ್ಟೈಲಿಷ್ ಫೋಟೊಗಳನ್ನು ತೆಗೆಯುವುದರ ಮೂಲಕ ಈ ಬಲೂನ್ ಹುಡುಗಿ ರಾತ್ರೋ ರಾತ್ರಿ ಫೋಟೋಗ್ರಫಿ ಮಾಡೆಲ್ ಆಗಿ ಬದಲಾದಳು. ಈಕೆಯ ಹೆಸರು ಖಿಷ್ಬೂ ಎಂದು. ಖಿಷ್ಬೂ ಮತ್ತು ತನ್ನ ತಾಯಿ ಇಬ್ಬರು ಹೊಟ್ಟೆಪಾಡಿಗಾಗಿ ಅನಿವಾರ್ಯತೆಯಿಂದ ಬಲೂನ್ ಗಳನ್ನು ಮಾರುತ್ತಿದ್ದರು.
ಎಲ್ಲಿ ಹಬ್ಬ ಜಾತ್ರೆಗಳು ಆಗುತ್ತದೋ ಆ ಜಾಗಕ್ಕೆ ಹೋಗಿ ಬಲೂನ್ ಗಳನ್ನು ಮಾರಿ ಅದರಿಂದ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದರು. ಹೀಗೆ ಒಂದು ದಿನ ಕೇರಳದಲ್ಲಿ ಖಿಷ್ಬೂ ಮತ್ತು ತನ್ನ ತಾಯಿ ಬಲೂನುಗಳನ್ನು ಜಾತ್ರೆಯಲ್ಲಿ ಮಾರುತ್ತಿದ್ದರು. ಇದನ್ನು ಪಯ್ಯನ್ನೂರು ಊರಿನ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್ ಅವರ ಕಣ್ಣಿಗೆ ಬಿದ್ದಳು.
ಇವರು ಜಾತ್ರೆಯ ಫೋಟೋಗಳನ್ನು ತೆಗೆಯುವಾಗ ಆ ಹುಡುಗಿ ಬಲೂನ್ ಮಾರುತ್ತಿರುವುದನ್ನು ನೋಡಿ ವಿವಿಧವಾಗಿ ಫೋಟೊಗಳನ್ನು ತಗೆದು ಅವುಗಳನ್ನು ಖಿಷ್ಬೂ ಮತ್ತು ತನ್ನ ತಾಯಿಗೆ ತೋರಿಸಿದರು. ಈ ಫೋಟೋಗಳನ್ನು ನೋಡಿದಾಗ ಇಬ್ಬರು ಖುಷಿಪಟ್ಟರಂತೆ. ಅರ್ಜುನ್ ಕೃಷ್ಣನ್ ಅವರಿಗೆ ಬಲೂನ್ ಹುಡುಗಿಯ ಫೋಟೋವನ್ನು ನೋಡಿ ತುಂಬ ಇಷ್ಟವಾದಳಂತೆ.
ಆ ಹುಡುಗಿ ನೋಡುವುದಕ್ಕೆ ತುಂಬ ಸುಂದರವಾಗಿದ್ದಾಳೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕ್ಷಣದಲ್ಲೇ ಈ ಫೋಟೋ ತುಂಬಾನೇ ವೈರಲ್ ಆಯಿತು. ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಸಾಕಷ್ಟು ಜನರು ಅರ್ಜುನ್ ಅವರಿಗೆ ಕರೆ ಮಾಡಿ ಫೋಟೋ ಶೂಟ್ ಗೆ ಆ ಹುಡುಗಿಯ ಬಗ್ಗೆ ವಿವರಣೆಗಳನ್ನು ಕೇಳುತ್ತಿದ್ದರಂತೆ.
ಇನ್ನೂ ಈ ಹುಡುಗಿಗೆ ಮೇಕಪ್ ಮಾಡುವುದಕ್ಕೆ ರಮ್ಯಾ ಎನ್ನುವವರನ್ನು ಕೂಡ ಕರೆಸಿದರು. ಹೀಗೆ ಈ ಹುಡುಗಿಯನ್ನು ಮೇಕಪ್ ಮಾಡಿ ಫೋಟೋ ಶೂಟ್ ಗೆ ರೆಡಿ ಮಾಡುತ್ತಾರೆ. ಈ ಬಲೂನ್ ಹುಡುಗಿ ಮೇಕೋವರ್ ನಿಂದ ಇನ್ನೂ ತುಂಬ ಚೆನ್ನಾಗಿ ಕಾಣುತ್ತಿದ್ದಳು ಮತ್ತು ಫೋಟೋ ಶೂಟ್ ಗೆ ಒಳ್ಳೆ ಒಳ್ಳೆಯ ಪೋಸ್ ಗಳನ್ನು ಸಹ ನೀಡಿದಳು.
ಅರ್ಜುನ್ ಅವರ ಒಂದು ಫೋಟೋ ದಿಂದ ಈ ಹುಡುಗಿಯ ಜೀವನವೇ ಬದಲಾಯಿತು ಎಂದು ತುಂಬಾನೇ ಖುಷಿ ಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾತ್ರೋ ರಾತ್ರಿ ಹೀರೋ ಆಗಿದ್ದವರು ಜೀರೋ ಆಗಿದ್ದಾರೆ ಮತ್ತು ಜೀರೋ ಆಗಿದ್ದವರು ಹೀರೋ ಆಗಿದ್ದಾರೆ…..