ಸೋಷಿಯಲ್ ಮೀಡಿಯಾದಲ್ಲಿ ಗಾಳಿಪಟದಂತೆ ಗಾಳಿಪಟ 2 ಸಿನಿಮಾದ ಈ ಹಾಡು ಹಾರಾಡುತ್ತಿದೆ, ಕೇಳಿಲ್ಲ ಅಂದ್ರೆ ಈಗಲೇ ಕೇಳಿ ತುಂಬಾ ಖುಷಿ ಪಡ್ತೀರಾ !!
ಖ್ಯಾತ ನಿರ್ದೇಶಕರಾಗಿರುವ ಮತ್ತು ಸಾಹಿತ್ಯಗಾರ ಆಗಿರುವ ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಬರುತ್ತಿರುವ ಗಾಳಿಪಟ 2 ಸಿನಿಮಾವನ್ನು ನೋಡುವುದಕ್ಕೆ ಈಗಾಗಲೇ ಬಹುತೇಕ ಅಭಿಮಾನಿಗಳು ಕಾಲ್ತುದಿಯಲ್ಲಿ ನಿಂತಿದ್ದಾರೆ. ಇನ್ನು ಈ ಸಿನಿಮಾ ಬಿಡುಗಡೆಯಾಗುವುದಕ್ಕೆ ಕೇವಲ ಕೆಲವೇ ದಿನಗಳು ಇದೆ ಎಂದು ಹೇಳಬಹುದು.
ಹೌದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿನಯದ ಗಾಳಿಪಟ 2 ಸಿನಿಮಾ ಮುಂದಿನ ತಿಂಗಳು ಆಗಸ್ಟ್ 12 ರಂದು ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ. ಇನ್ನು ಈ ಸಿನಿಮಾದ ಹಾಡುಗಳು ಈಗಾಗಲೇ ಒಂದೊಂದಾಗಿಯೇ ಬಿಡುಗಡೆಯಾಗುತ್ತಿದೆ. ಇದರಂತೆಯೇ ಮೂರನೆಯ ಹಾಡಾಗಿರುವ ದೇವ್ಲೆ ದೇವ್ಲೆ ಹಾಡು ಸಖತ್ ಸದ್ದನ್ನು ಮಾಡುತ್ತಿದೆ.
ಹೌದು ಈ ಹಾಡಿಗೆ ಸಾಕಷ್ಟು ಅಭಿಮಾನಿಗಳು ರೀಲ್ಸ್ ಮಾಡೋದ್ರಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ. ಇನ್ನೂ ದೇವ್ಲೆ ದೇವ್ಲೆ ಹಾಡು ಬಿಡುಗಡೆಯಾಗಿದ ಕೆಲವೇ ನಿಮಿಷಗಳಲ್ಲಿ ಎಲ್ಲರ ಮನ ಮುಟ್ಟಿ ಈಗ ಹಿಟ್ ಲಿಸ್ಟ್ ಸೇರಿದೆ. ಇನ್ನೂ ಈ ಹಾಡನ್ನು ಯೋಗರಾಜ್ ಭಟ್ ಅವರು ಬರೆದಿದ್ದಾರೆ, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಹಾಡಿದ್ದಾರೆ ಮತ್ತು ಖ್ಯಾತ ಸಂಗೀತ ನಿರ್ದೇಶಕ ಆಗಿರುವ ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.
ಇನ್ನೂ ಈ ಹಾಡನ್ನು ಕಜಾಕಿಸ್ತಾನದ ಹಿಮಭರಿತ ಶೀತ ವಾತಾವರಣದಲ್ಲಿ ಶೂಟಿಂಗ್ ಮಾಡಲಾಗಿದೆ. ಈ ಸಿನಿಮಾ ಸೂರಜ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆಗಿದ್ದು ರಮೇಶ್ ರೆಡ್ಡಿ ಅವರು ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಹೌದು ಈಗಾಗಲೇ ರಮೇಶ್ ರೆಡ್ಡಿ ಅವರು ಉಪ್ಪು ಹುಳಿ ಖಾರ, ಪಡ್ಡೆಹುಳಿ, ನಾತಿಚರಾಮಿ, 100 ಇನ್ನೂ ಸಾಕಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
ಹಾಗೆಯೇ ಗಾಳಿಪಟ 2 ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ಅನಂತ್ ನಾಗ್, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ವೈಭವಿ ಶಾಂಡಿಲ್ಯ, ಸುಧಾ ಬೆಳವಾಡಿ ಇನ್ನೂ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಇನ್ನೂ ದೇವ್ಲೆ ದೇವ್ಲೆ ಹಾಡಂತೂ ಸೋಷಿಯಲ್ ಮೀಡಿಯಾದಲ್ಲಿ ಗಾಳಿಪಟದಂತೆ ಹಾರಾಡುತ್ತಿದೆ. ಈ ಹಾಡನ್ನು ನೀವು ಇನ್ನೂ ಕೇಳಿಲ್ಲ ಎಂದರೆ ಕೂಡಲೇ ಕೇಳಿ. ಇನ್ನೂ ಈ ಹಾಡನ್ನು ಕೇಳಿರುವವರ ಮನಸ್ಸು ಸೋಲದೆ ಇರುವುದಿಲ್ಲ…..