ಸೈಮಾ ಅವಾರ್ಡ್ಸ್ 2022 ಪ್ರಶಸ್ತಿ ಪಡೆದಿರುವ ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳು, ಯಾರ್ ಯಾರು ಗೊತ್ತೇ ?? ನಿಮ್ಮ ನೆಚ್ಚಿನ ನಟ ಯಾರು ??
ಸೈಮಾ ಅವಾರ್ಡ್ಸ್ ಕಾರ್ಯಕ್ರಮವು ನಮ್ಮ ಕರ್ನಾಟಕದ ರಾಜಧಾನಿ ಆಗಿರುವ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದಿದೆ. ಇನ್ನೂ ಈ ಕಾರ್ಯಕ್ರಮವು ಸೆಪ್ಟೆಂಬರ್ 10 ಮತ್ತು 11 ರಂದು ಬೆಂಗಳೂರಿನಲ್ಲಿ ಇರುವ ಪ್ಯಾಲೆಸ್ ಗ್ರೌಂಡ್ ನಲ್ಲಿ ಜರಗಿತು. ಈ ಕಾರ್ಯಕ್ರಮಕ್ಕೆ ಕನ್ನಡ ತೆಲುಗು ತಮಿಳು ಬಾಲಿವುಡ್ ಮತ್ತು ಮಲಯಾಳಂನ ಸಾಕಷ್ಟು ಕಲಾವಿದರು ಆಗಮನ ಮಾಡಿದ್ದರು.
ಇನ್ನೂ ಸೈಮಾ ಅವಾರ್ಡ್ಸ್ ಕಾರ್ಯಕ್ರಮವು 2012 ರಲ್ಲಿ ಆರಂಭಗೊಂಡಿದ್ದು ಇನ್ನೂ ಈ ಬಾರಿ ಇದು 10 ವರ್ಷದ ಸಂಭ್ರಮಾಚರಣೆಯಲ್ಲಿ ಇದೆ. ಇದು ಕೂಡ ಒಂದು ವಿಶೇಷ ಎಂದು ಹೇಳಬಹುದು.
ಇನ್ನೂ ಇದರಲ್ಲಿ ಅತ್ಯುತ್ತಮ ನಟರಾಗಿ ಪುನೀತ್ ರಾಜ್ ಕುಮಾರ್, ಅತ್ಯುತ್ತಮ ನಟಿಯಾಗಿ ಆಶಿಕ ರಂಗನಾಥ್, ಅತ್ಯುತ್ತಮ ನಟಿ ಕ್ರಿಟಿಕ್ಸ್ ಅಮೃತಾ ಅಯ್ಯಂಗಾರ್, ಅತ್ಯುತ್ತಮ ಹಾಸ್ಯ ನಟ ಚಿಕ್ಕಣ್ಣ, ಅತ್ಯುತ್ತಮ ನಿರ್ದೇಶನ ತರುಣ್ ಸುಧೀರ್, ಅತ್ಯುತ್ತಮ ಪೋಷಕ ನಟಿ ಆರೋಹಿ ನಾರಾಯಣ್, ಅತ್ಯುತ್ತಮ ಪೋಷಕ ನಟ ಪ್ರಮೋದ್, ಅತ್ಯುತ್ತಮ ಹಿನ್ನಲೆ ಗಾಯಕಿ ಚೈತ್ರಾ ಆಚಾರ್, ಅತ್ಯುತ್ತಮ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೀಗೆ ಸಾಕಷ್ಟು ಪ್ರಶಸ್ತಿಗಳನ್ನು ನಮ್ಮ ಕನ್ನಡದ ಕಲಾವಿದರು ಪಡೆದುಕೊಂಡಿದ್ದಾರೆ.
ಇನ್ನೂ ಈ ಕಾರ್ಯಕ್ರಮಕ್ಕೆ ಯಶ್, ರಾಧಿಕಾ ಪಂಡಿತ್, ರಣ್ವೀರ್ ಸಿಂಗ್, ಆಶಿಕಾ ರಂಗನಾಥ್, ಡಾಲಿ ಧನಂಜಯ್, ಸುಮಲತಾ, ಅಭಿಷೇಕ್ ಅಂಬರೀಷ್, ಅಲ್ಲು ಅರ್ಜುನ್, ಕಮಲ್ ಹಾಸನ್, ಅಮೃತಾ ಅಯ್ಯಂಗಾರ್ ಇನ್ನೂ ಸಾಕಷ್ಟು ಬೇರೆ ಬೇರೆ ಭಾಷೆಗಳ ಕಲಾವಿದರು ಆಗಮನ ಮಾಡಿದ್ದರು.
ಇನ್ನೂ ಈ ಕಾರ್ಯಕ್ರಮದ ಮುಖಾಂತರ ನಮ್ಮ ದಕ್ಷಿಣ ಭಾರತದ ಎಲ್ಲಾ ಕಲಾವಿದರು ಒಟ್ಟಾರೆಯಾಗಿ ಸೇರಿ ಎಲ್ಲರನ್ನೂ ಖುಷಿ ಖುಷಿಯಾಗಿ ಮಾತನಾಡಿಸುತ್ತಾ ಇರುತ್ತಾರೆ. ಇನ್ನು ಈ ರೀತಿಯ ಕಾರ್ಯಕ್ರಮವನ್ನು ಪ್ರೇಕ್ಷಕರು ನೋಡುವುದಕ್ಕೆ ತುಂಬಾ ಉತ್ಸಾಹರಾಗಿರುತ್ತಾರೆ.
ಇನ್ನೂ ಈ ಈ ಬಾರಿ 19 ವಿಭಾಗಗಳಲ್ಲಿ ಅವಾರ್ಡ್ಸ್ ಗೆ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಯಾರು ಯಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಎಂದು ನೋಡೋಣ ಬನ್ನಿ..
ಬೆಸ್ಟ್ ಆಕ್ಟ್ರೆಸ್ ಅವಾರ್ಡ್ – ಆಶಿಕಾ ರಂಗನಾಥ್
ಬೆಸ್ಟ್ ಡೈರೆಕ್ಟರ್ ಅವಾರ್ಡ್ – ತರುಣ್ ಸುಧೀರ್
ಬೆಸ್ಟ್ ಆಕ್ಟರ್ ನೆಗೆಟಿವ್ ರೋಲ್ ಅವಾರ್ಡ್ – ಪ್ರಮೋದ್ ಶೆಟ್ಟಿ
ಬೆಸ್ಟ್ ಕಾಮಿಡಿಯನ್ ಅವಾರ್ಡ್ – ಚಿಕ್ಕಣ್ಣ
ಬೆಸ್ಟ್ ಸಪೋರ್ಟಿಂಗ್ ರೋಲ್ ಅವಾರ್ಡ್ – ಪ್ರಮೋದ್
ಬೆಸ್ಟ್ ಆಕ್ಟರ್ ಅವಾರ್ಡ್ – ಪುನೀತ್ ರಾಜಕುಮಾರ್
ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಅವಾರ್ಡ್ – ಅರ್ಜುನ್ ಜನ್ಯ
ಬೆಸ್ಟ್ ಪ್ಲೇಬ್ಯಾಕ್ ಸಿಂಗರ್ ಫೀಮೇಲ್ ಅವಾರ್ಡ್ – ಚೈತ್ರ ಆಚಾರ್
ಬೆಸ್ಟ್ ಪ್ಲೇಬ್ಯಾಕ್ ಸಿಂಗರ್ ಮೇಲ್ ಅವಾರ್ಡ್ – ಅರ್ಮನ್ ಮಲ್ಲಿಕ್.
ಬೆಸ್ಟ್ ಸಪೋರ್ಟಿಂಗ್ ರೋಲ್ ಅವಾರ್ಡ್ – ಅಮೃತಾ ಅಯ್ಯಂಗಾರ್, ಬೆಸ್ಟ್ ಡೆಬ್ಯುಟೆಂಟ್ ಆಕ್ಟರ್ ಅವಾರ್ಡ್ – ನಾಗಭೂಷಣ್
ಬೆಸ್ಟ್ ಡೆಬ್ಯುಟೆಂಟ್ ಆಕ್ಟ್ರೆಸ್ ಅವಾರ್ಡ್ – ಶರಣ್ಯಾ ಶೆಟ್ಟಿ
ಬೆಸ್ಟ್ ಡೆಬ್ಯೂಟೆಂಟ್ ಡೈರೆಕ್ಟರ್ ಅವಾರ್ಡ್ – ಶಂಕರ್ ಗುರು
ಬೆಸ್ಟ್ ಸಿನೆಮಾಟೋಗ್ರಾಫರ್ ಅವಾರ್ಡ್ – ಸುಧಾಕರ ರಾಜ್
ಬೆಸ್ಟ್ ಸಿನಿಮಾ ಲಿರಿಕ್ಸ್ ರೈಟರ್ ಅವಾರ್ಡ್ – ವಾಸುಕಿ ವೈಭವ್