ಒಂದಾನೊಂದು ಕಾಲದಲ್ಲಿ ಇಂದಿನ ಸೂಪರ್ ಸ್ಟಾರ್ ನಟಿಯರು ಆಗ ಸೈಡ್ ಡಾನ್ಸರ್ ಗಳಾಗಿದ್ದರು. ಮೊದಲು ತಮ್ಮ ವೃತ್ತಿಯನ್ನು ಸೈಡ್ ಡಾನ್ಸ್ ಗಳಿಂದ ಪ್ರಾರಂಭಿಸಿ ಇಂದು ಸೂಪರ್ ಸ್ಟಾರ್ ನಟಿ ಆಗಿರುವುದು ಒಂದು ವಿಶೇಷ ಎಂದು ಎಂದು ಹೇಳಬಹುದು. ಹಾಗಾದರೆ ಬನ್ನಿ ಅಂತಹ ನಟಿಯರು ಯಾರು ಎಂದು ಇಲ್ಲಿ ನೋಡೋಣ..
ಶ್ರುತಿ ಹರಿಹರನ್ ಅವರು ಫೆಬ್ರವರಿ 2 1989 ರಂದು ಜನಿಸಿದ್ದಾರೆ. ಇವರು ಲೂಸಿಯಾ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿದರು. ಹಾಗೆಯೇ ಇವರು ಇದಾದ ಮೇಲೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಶ್ರುತಿ ಅವರು ಕಳ್ಳ ಮಳ್ಳ ಸುಳ್ಳ ಎನ್ನುವ ಸಿನಿಮಾದ ಒಂದು ಹಾಡಿನಲ್ಲಿ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿದ್ದಾರೆ.
ಐಂದ್ರಿತಾ ರೇ ಅವರು ಏಪ್ರಿಲ್ 16 1985 ರಂದು ಜನಿಸಿದ್ದಾರೆ. ಇವರು ಮೆರವಣಿಗೆ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರುಮಾಡಿದರು. ತದನಂತರ ಇವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇನ್ನೂ ಐಂದ್ರಿತಾ ರೇ ಅವರು ಮೊದಲು ಧ್ಯಾನ್ ಅವರ ಜಾಕ್ ಪಾಟ್ ಚಿತ್ರದ ಒಂದು ಹಾಡಿನಲ್ಲಿ ಬ್ಯಾಕ್ ಗ್ರೌಂಡ್ ಡಾನ್ಸರ್ ಆಗಿದ್ದರು.
ಡೈಸಿ ಶಾ ಅವರು ಶಾರುಖ್ ಖಾನ್ ಅವರ ತೇರೇ ನಾಮ್ ಎನ್ನುವ ಚಿತ್ರದ ಒಂದು ಹಾಡಿನಲ್ಲಿ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿದ್ದಾರೆ. ಇನ್ನು ಡೈಸಿ ಶಾ ಅವರು ಕೆಲ ಕನ್ನಡ ಚಿತ್ರಗಳಲ್ಲಿ ನಟಿಸುವುದರ ಜತೆಗೆ ಬಾಲಿವುಡ್ ಸಿನಿಮಾಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ.
ನಿಶಾ ಮಿಲನ ಇಷ್ಟಕಾಮ್ಯ ಚಿತ್ರದ ನೀ ನನಗೋಸ್ಕರ ಹಾಡಿನಲ್ಲಿ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿದ್ದಾರೆ. ಇದಾದ ಮೇಲೆ ಇವರು ಕಿರುತೆರೆಗೆ ಕಾಲಿಟ್ಟು ಗಟ್ಟಿಮೇಳ ಧಾರಾವಾಹಿಯ ಮುಖಾಂತರ ರೌಡಿ ಬೇಬಿ ಎಂದೇ ಫೇಮಸ್ ಆದರು. ಹಾಗೆ ಇವರು ತೆಲುಗಿನಲ್ಲೂ ಕೂಡ ಧಾರಾವಾಹಿಗಳಲ್ಲಿ ಲೀಡ್ ರೋಲ್ ನಲ್ಲಿ ಅಭಿನಯಿಸುತ್ತಿದ್ದಾರೆ.
ಕಾಜಲ್ ಅಗರ್ ವಾಲ್ ಅವರು ಐಶ್ವರ್ಯ ರೈ ಮತ್ತು ಅಮಿತಾಭ್ ಬಚ್ಚನ್ ಅವರ ಅಭಿನಯದ ಒಂದು ಸಿನಿಮಾದ ಹಾಡಿನಲ್ಲಿ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿದ್ದಾರೆ. ಇನ್ನೂ ಕಾಜಲ್ ಅಗರ್ ವಾಲ್ ಅವರು ಈಗ ಸೌತ್ ಇಂಡಿಯಾದ ಫೇಮಸ್ ನಟಿಯಾಗಿ ಗುರುತಿಸಿಕೊಂಡಿದ್ದು ಇವರಿಗೆ ಸಾಕಷ್ಟು ಅಭಿಮಾನಿಗಳ ಬಳಗವೇ ಇದೆ.
ಮೇಘನಾ ಗಾಂವ್ಕರ್ ಅವರು ಶ್ಯಾಮಕ್ ದಾವರ್ ಅವರ ಜೊತೆ ಸಾಕಷ್ಟು ವೇದಿಕೆಗಳಲ್ಲಿ ಡಾನ್ಸ್ ಪ್ರದರ್ಶನಗಳನ್ನು ನೀಡಿದ್ದಾರೆ. ಇದಾದ ಮೇಲೆ ಇವರು ನಮ್ ಏರಿಯಾಲ್ ಒಂದಿನ ಚಿತ್ರದ ಮೂಲಕ ನಟಿಸಿ ಇದಾದ ಮೇಲೂ ಕೂಡ ಕೆಲ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಭಾವನಾ ರಾವ್ ಅವರು ತಮ್ಮದೇ ಆದ ಒಂದು ಸ್ವಂತ ನೃತ್ಯ ತಂಡದ ಜೊತೆಗೆ ಸಾಕಷ್ಟು ವೇದಿಕೆಗಳ ಮೇಲೆ ಡಾನ್ಸ್ ಪ್ರದರ್ಶನಗಳನ್ನು ನೀಡಿದ್ದಾರೆ. ಇದಾದ ಮೇಲೆ ಇವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿನಯದ ಗಾಳಿಪಟ ಚಿತ್ರದ ತಮ್ಮ ಸಿನಿಮಾ ಪಯಣ ಶುರು ಮಾಡಿಕೊಂಡರು……