ಕನ್ನಡದ ಖ್ಯಾತ ಕಲಾವಿದ ಸೃಜನ್ ಲೋಕೇಶ್ ಮತ್ತು ಗ್ರೀಷ್ಮಾ ಅವರ ಎರಡನೆಯ ಮಗ ಶ್ರೇಷ್ಟ್ ಲೋಕೇಶ್ ಹುಟ್ಟುಹಬ್ಬವನ್ನು ತುಂಬ ಅದ್ಧೂರಿಯಾಗಿ ಮಾಡಿದ್ದಾರೆ. ತಮ್ಮ ಮಗನ ಹುಟ್ಟುಹಬ್ಬಕ್ಕೆ ಬಂಧುಮಿತ್ರರು ಸ್ನೇಹಿತರು ಇನ್ನೂ ಸಾಕಷ್ಟು ಕಲಾವಿದರು ಆಗಮನ ಮಾಡಿದ್ದರು.
ಅದರಲ್ಲಿ ಚಂದನ್ ಶೆಟ್ಟಿ ಅವರ ಪತ್ನಿ ನಿವೇದಿತಾ ಗೌಡ ಮತ್ತು ನಟಿ ಮೇಘನಾ ರಾಜ್ ತಮ್ಮ ಮಗ ರಾಯನ್ ರಾಜ್ ಸರ್ಜಾ ಜೊತೆಗೆ ಆಗಮಿಸಿ ಸೃಜನ್ ಲೋಕೇಶ್ ಅವರ ಮಗನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಸೃಜನ್ ಲೋಕೇಶ್ ಮಗನ ಹುಟ್ಟುಹಬ್ಬದ ಕೆಲ ಸುಂದರ ದೃಶ್ಯಗಳನ್ನು ನೀವು ನೋಡಬಹುದು.
ಇನ್ನು ಸೃಜನ್ ಲೋಕೇಶ್ ಅವರು ಜೂನ್ 28 1980 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಲೋಕೇಶ್ ಅವರು ಕೂಡ ಖ್ಯಾತ ನಟರಾಗಿದ್ದರು ಮತ್ತು ಇವರ ತಾಯಿ ಗಿರಿಜಾ ಲೋಕೇಶ್ ಅವರು ಖ್ಯಾತ ನಟಿಯಾಗಿದ್ದಾರೆ. ಸೃಜನ್ ಲೋಕೇಶ್ ಅವರು 1991 ರಂದು ವೀರಪ್ಪನ್ ಎನ್ನುವ ಚಿತ್ರದಲ್ಲಿ ಮೊದಲನೆಯದಾಗಿ ಬಾಲ ನಟರಾಗಿ ಅಭಿನಯಿಸಿದ್ದಾರೆ.
ಇನ್ನು 2002 ರಲ್ಲಿ ಬಿಡುಗಡೆಯಾಗಿದ್ದ ನೀಲ ಮೇಘ ಶ್ಯಾಮ ಎನ್ನುವ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಇದಾದ ಮೇಲೆ ಪ್ರೀತಿಗಾಗಿ, ನವಗ್ರಹ, ಚಿಂಗಾರಿ, ಸ್ನೇಹಿತರು, ಎದೆಗಾರಿಕೆ, ಲವ್ ಯು ಆಲಿಯ, ಜಗ್ಗುದಾದ, ಚಕ್ರವರ್ತಿ, ಎಲ್ಲಿದ್ದೆ ಇಲ್ಲಿ ತನಕ ಇನ್ನೂ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಇನ್ನು ಸೃಜನ್ ಲೋಕೇಶ್ ಅವರಿಗೆ ತಮ್ಮದೇ ಆದ ಲೋಕೇಶ್ ಪ್ರೊಡಕ್ಷನ್ಸ್ ಎನ್ನುವ ಪ್ರೊಡಕ್ಷನ್ ಕಂಪನಿ ಕೂಡ ಇದೆ. ಹಾಗೆಯೇ ಸೃಜನ್ ಲೋಕೇಶ್ ಅವರು ಟಿವಿ ಶೋಗಳನ್ನು ಹೋಸ್ಟ್ ಮಾಡುವುದರಲ್ಲಿ ತುಂಬಾ ಫೇಮಸ್. ಇವರು 2011 ರಲ್ಲಿ ಮಜಾ ವಿತ್ ಸೃಜಾ ಎನ್ನುವ ಕಾರ್ಯಕ್ರಮವನ್ನು ಮೊದಲನೆಯದಾಗಿ ಹೋಸ್ಟ್ ಮಾಡಿದರು.
ಇದಾದ ಮೇಲೆ ಸೈ, ಕಿಚನ್ ಕಿಲಾಡಿಗಳು, ಸ್ಟಾರ್ ಸಿಂಗರ್, ಮಮ್ಮಿ ನಂ 1, ಚೋಟಾ ಚಾಂಪಿಯನ್, ಮಜಾ ಟಾಕೀಸ್, ಕಾಮಿಡಿ ಟಾಕೀಸ್ ಶೋಗಳನ್ನು ಹೋಸ್ಟ್ ಮಾಡಿದ್ದಾರೆ. ಇನ್ನೂ ಇವರು ಕಲರ್ಸ್ ಕನ್ನಡ ವಾಹಿನಿಯ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ ಸೀಸನ್ ಎರಡರಲ್ಲೂ ಕೂಡ ಭಾಗವಹಿಸಿದ್ದರು.
ಇತ್ತೀಚೆಗೆಯಷ್ಟೆ ರಾಜಾರಾಣಿ ಕಾರ್ಯಕ್ರಮವು ಮುಕ್ತಾಯವಾಯಿತು. ಈ ಕಾರ್ಯಕ್ರಮಕ್ಕೆ ಇವರು ಜಡ್ಜ್ ಆಗಿ ಕೆಲಸ ಮಾಡಿದ್ದರು. ಪ್ರಸ್ತುತ ಸೃಜನ್ ಲೋಕೇಶ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸಾರ್ ಕಾರ್ಯಕ್ರಮಕ್ಕೆ ಅನು ಪ್ರಭಾಕರ್ ಮತ್ತು ತಾರಾ ಅವರ ಜೊತೆಗೆ ಜಡ್ಜ್ ಆಗಿದ್ದಾರೆ…..