ಕನ್ನಡದ ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್ ಮತ್ತು ಅವರ ಪತ್ನಿ ಪಲ್ಲವಿ ಅವರು ತಮ್ಮ 25ನೆಯ ವಿವಾಹ ವಾರ್ಷಿಕೋತ್ಸವವನ್ನು ತುಂಬ ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ. ಇವರ ವಿವಾಹ ವಾರ್ಷಿಕೋತ್ಸವಕ್ಕೆ ಸಾಕಷ್ಟು ಸಿನಿಮಾದ ಕಲಾವಿದರು ಬಂಧು ಮಿತ್ರರು ಸ್ನೇಹಿತರು ಬಂದಿದ್ದರು.
ಅದರಲ್ಲೂ ಪ್ರಿಯಾಂಕಾ ಉಪೇಂದ್ರ, ಹರ್ಷಿಕಾ ಪೂಣಚ್ಚ, ಭಾರತಿ ವಿಷ್ಣುವರ್ಧನ್, ರವಿಶಂಕರ್, ಲವ್ಲಿ ಪ್ರೇಮ್, ವಿಜಯ್ ಪ್ರಕಾಶ್, ಸೃಜನ್ ಲೋಕೇಶ್, ಸುಮಲತಾ ಅಂಬರೀಶ್, ಸಂಗೀತ ಗುರುರಾಜ್ ಇನ್ನೂ ಸಾಕಷ್ಟು ಕಲಾವಿದರು ಆಗಮನ ಮಾಡಿ ಗುರುಕಿರಣ್ ಮತ್ತು ಪಲ್ಲವಿ ಅವರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ.
ಇನ್ನೂ ಗುರುಕಿರಣ್ ಅವರು ಅಕ್ಟೋಬರ್ 28 1970 ರಂದು ಮಂಗಳೂರಿನಲ್ಲಿ ಜನಿಸಿದ್ದಾರೆ. ಗುರುಕಿರಣ್ ಅವರು ನಮ್ಮ ಕನ್ನಡ ಚಿತ್ರಗಳಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಇದರ ಜೊತೆಗೆ ಇವರು ಸಾಕಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನವನ್ನು ಸಹ ಮಾಡಿದ್ದಾರೆ. ಗುರುಕಿರಣ್ ಅವರು 1998 ರಲ್ಲಿ ಉಪೇಂದ್ರ ಅವರ ಅಭಿನಯದ ಎ ಚಿತ್ರದ ಮೂಲಕ ತಮ್ಮ ಗಾಯನದ ಕೆರಿಯರ್ ಅನ್ನು ಶುರು ಮಾಡಿಕೊಂಡರು.
ಇದಕ್ಕೆ ಇವರಿಗೆ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಎನ್ನುವ ಉದಯ ಫಿಲಂ ಅವಾರ್ಡ್ ಕೂಡ ದೊರಕಿತು. ಇದಾದ ಮೇಲೆ ಉಪೇಂದ್ರ, ಅಸುರ, ಅಪ್ಪು, ನಿನಗಾಗಿ, ತುಂಟಾಟ, ಹಾಲಿವುಡ್, ಕರಿಯ, ಆಪ್ತಮಿತ್ರ, ಮೌರ್ಯ, ಸೈ, ಆಟೋ ಶಂಕರ್, ಸ್ವಾಮಿ, ರಾಮ ಶಾಮ ಭಾಮ, ಪಲ್ಲಕ್ಕಿ, ಬಿಂದಾಸ್, ಅರಮನೆ, ಗುಲಾಮ, ಜೀವ, ಸುಗ್ರೀವ, ಮೈಲಾರಿ, ವಿಲನ್, ಲಕ್ಷ್ಮೀ, ಚಾರ್ಮಿನಾರ್, ನಾಗರಹಾವು, ಚೌಕ, ಆಯುಷ್ಮಾನ್ ಭವ ಹೀಗೆ ಇನ್ನೂ ಸಾಕಷ್ಟು ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.
ಹಾಗೆಯೇ ಕೆಲ ಹಾಡುಗಳನ್ನು ಸಹ ಹಾಡಿದ್ದಾರೆ. ಇನ್ನೂ ಗುರುಕಿರಣ್ ಮತ್ತು ಪಲ್ಲವಿ ಅವರಿಗೆ ಹೃದಯ್ ಕಿರಣ್ ಶೆಟ್ಟಿ ಮತ್ತು ಶ್ರಾವ್ಯ ಗುರುಕಿರಣ್ ಎನ್ನುವ ಇಬ್ಬರು ಮಕ್ಕಳು ಕೂಡ ಇದ್ದಾರೆ. ಗುರುಕಿರಣ್ ಮತ್ತು ಪಲ್ಲವಿ ಗುರುಕಿರಣ್ ಅವರ ವಿವಾಹ ವಾರ್ಷಿಕೋತ್ಸವದ ಸಂಭ್ರಮದ ಕೆಲ ದೃಶ್ಯಗಳು ನಿಮಗಾಗಿ…..