ನಮ್ಮ ಕನ್ನಡ ಕಿರುತೆರೆಯಲ್ಲಿ ಇರುವ ಕೆಲ ನಟಿಯರ ಗಂಡಂದಿರು ಯಾರು ಮತ್ತು ಹೇಗಿದ್ದಾರೆ ಎಂದು ಇಲ್ಲಿ ನೋಡೋಣ ಬನ್ನಿ..
ನೇಹಾ ಗೌಡ ಅವರು ಆಗಸ್ಟ್ 18 1990 ರಂದು ಜನಿಸಿದ್ದಾರೆ. ಇವರು ಕಿರುತೆರೆಯಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮ ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಮಲಯಾಳಂ ಮತ್ತು ತೆಲುಗು ಧಾರಾವಾಹಿಗಳಲ್ಲೂ ಕೂಡ ಅಭಿನಯಿಸಿದ್ದಾರೆ. ಇನ್ನೂ ನೇಹ ಗೌಡ ಅವರು ಫೆಬ್ರವರಿ 18 2018 ರಂದು ಚಂದನ್ ಗೌಡ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಬ್ಬರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ರಾಜಾರಾಣಿ ಶೋನಲ್ಲಿ ಕಂಟೆಸ್ಟೆಂಟ್ ಗಳಾಗಿ ಭಾಗವಹಿಸಿದ್ದರು.
ಶ್ವೇತಾ ಚೆಂಗಪ್ಪ ಅವರು ಫೆಬ್ರವರಿ 9 1987 ರಂದು ಜನಿಸಿದ್ದಾರೆ. ಇವರು ಮಜಾ ಟಾಕೀಸ್ ನಲ್ಲಿ ರಾಣಿ ಪಾತ್ರದಲ್ಲಿ ನಟಿಸಿ ತುಂಬಾ ಜನಪ್ರಿಯರಾಗಿದ್ದಾರೆ. ಇದರ ಜೊತೆಗೆ ಇವರು ವರ್ಷ ಮತ್ತು ತಂಗಿಗಾಗಿ ಎನ್ನುವು ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಹಾಗೆಯೇ ಸಾಕಷ್ಟು ಧಾರಾವಾಹಿಗಳಲ್ಲಿ ಕೂಡ ಅಭಿನಯಿಸಿ ಕೆಲ ಶೋಗಳನ್ನು ಹೋಸ್ಟ್ ಕೂಡ ಮಾಡಿದ್ದಾರೆ. ಇನ್ನು ಶ್ವೇತಾ ಚೆಂಗಪ್ಪ ಅವರು ಕಿರಣ್ ಅಪ್ಪಚ್ಚು ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಕವಿತಾ ಗೌಡ ಅವರು ಜುಲೈ 26 1992 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮ, ವಿದ್ಯಾ ವಿನಾಯಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಪರಭಾಷೆಗಳ ಧಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಹಾಗೆಯೇ ಕೆಲ ಚಿತ್ರಗಳಲ್ಲಿ ಕೂಡ ಇವರು ಬೆಳ್ಳಿತೆರೆಯ ಮೇಲೆ ಕಾಣಿಸಿದ್ದಾರೆ. ಇನ್ನೂ ಕವಿತಾ ಗೌಡ ಅವರು ಚಂದನ್ ಕುಮಾರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಕಾವ್ಯ ಮಹದೇವ್ ಅವರು ಕನ್ನಡದಲ್ಲಿ ಚರಣದಾಸಿ, ನಾ ನಿನ್ನ ಬಿಡಲಾರೆ, ಶ್ರೀ ವಿಷ್ಣು ದಶಾವತಾರ, ನಮ್ಮನೆ ಯುವರಾಣಿ ಎನ್ನುವ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ಕಾವ್ಯ ಅವರು ಮಹದೇವ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಮಯೂರಿ ಅವರು ಮಾರ್ಚ್ 5 1995 ರಂದು ಜನಿಸಿದ್ದಾರೆ. ಇವರು ಅಶ್ವಿನಿ ನಕ್ಷತ್ರ ಚಿತ್ರದ ಮೂಲಕ ಕಿರುತೆರೆಗೆ ಕಾಲಿಟ್ಟು ನಂತರ ಹೀರೋಯಿನ್ ಆಗಿ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಮಯೂರಿ ಅವರು ಅರುಣ್ ರಾಜು ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ದಿಶಾ ಮದನ್ ಅವರು ಮಾರ್ಚ್ 9 1992 ರಂದು ಜನಿಸಿದ್ದಾರೆ. ಇವರು ಕುಲವಧು ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದಾರೆ. ನಂತರ ಫ್ರೆಂಚ್ ಬಿರಿಯಾನಿ ಎನ್ನುವ ಚಿತ್ರದಲ್ಲೂ ಕೂಡ ಅಭಿನಯಿಸಿದ್ದಾರೆ. ಇವರು ಟಿಕ್ ಟಾಕ್ ಮುಖಾಂತರ ಸಖತ್ ಫೇಮಸ್ ಆಗಿದ್ದಾರೆ ಎಂದು ಹೇಳಬಹುದು. ಇನ್ನು ದಿಶಾ ಮದನ್ ಅವರು ಶಶಾಂಕ್ ವಾಸುಕಿ ಗೋಪಾಲ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಶ್ವೇತಾ ಪ್ರಸಾದ್ ಅವರು ಶ್ರೀರಸ್ತು ಶುಭಮಸ್ತು ಎನ್ನುವ ಕನ್ನಡದ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇವರು ಆರ್ ಜೆ ಪ್ರದೀಪ್ ಅವರನ್ನು ಮದುವೆ ಮಾಡಿಕೊಂಡಿದ್ದಾರೆ.
ದೀಪಿಕಾ ಅವರು ಕುಲವಧು ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇನ್ನೂ ಇವರು ಇದೇ ಧಾರಾವಾಹಿಯಲ್ಲಿ ನಟಿಸಿದ್ದ ಆಕರ್ಷ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.
ರಾಜೇಶ್ವರಿ ಅವರು ಅಗ್ನಿಸಾಕ್ಷಿ ಧಾರಾವಾಹಿಯ ಮುಖಾಂತರ ಕಿರುತೆರೆಗೆ ಕಾಲಿಟ್ಟರು. ಇವರು ಕಲ್ಯಾಣ್ ಕೃಷ್ಣ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ…..