ನಮ್ಮ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಒಳ್ಳೆ ಒಳ್ಳೆಯ ಧಾರಾವಾಹಿಗಳು ಮೂಡಿ ಬರುತ್ತಿವೆ. ಒಂದು ಧಾರಾವಾಹಿಕ್ಕಿಂತ ಮತ್ತೊಂದು ಧಾರಾವಾಹಿಯು ತುಂಬ ಸೊಗಸಾಗಿ ಇರುತ್ತವೆ. ಅದರಲ್ಲೂ ಕಲಾವಿದರು ಕೂಡ ಸಿನಿಮಾಗಳಲ್ಲಿ ಮಾಡುವ ರೀತಿಯಲ್ಲಿ ಸೀರಿಯಲ್ ಗಾಗಿ ತುಂಬಾನೆ ಕಷ್ಟ ಪಡುತ್ತಾರೆ. ನಟಿ ಇರಬಹುದು ಅಥವಾ ನಟ ಆಗಿರಬಹುದು ಇಬ್ಬರೂ ಕೂಡ ಕಿರುತೆರೆಯ ಧಾರಾವಾಹಿಗಳಲ್ಲಿ ತುಂಬಾನೇ ಕಷ್ಟ ಪಟ್ಟು ಅಭಿನಯ ಮಾಡುತ್ತಾರೆ.
ಅದರಲ್ಲಿ ನಾವು ಈಗ ಕನ್ನಡತಿ ಸೀರಿಯಲ್ ನಲ್ಲಿ ನಟಿಸುತ್ತಿರುವ ರಂಜನಿ ರಾಘವನ್ ಅವರ ಬಗ್ಗೆ ಮಾತನಾಡೋಣ. ಇನ್ನೂ ಕನ್ನಡತಿ ಧಾರಾವಾಹಿಯು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಈ ಧಾರಾವಾಹಿಯನ್ನು ಯಶ್ವಂತ್ ಪಾಂಡು ಅವರು ನಿರ್ದೇಶನ ಮಾಡುತ್ತಿದ್ದಾರೆ ಮತ್ತು ಸಿನಿಮಾ ನಿರ್ದೇಶಕರಾದ ಪ್ರಕಾಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ.
ಇನ್ನೂ ಈ ಸೀರಿಯಲ್ ನಲ್ಲಿ ಕಿರಣ್ ರಾಜ್, ರಂಜನಿ ರಾಘವನ್, ಸಾರಾ ಅಣ್ಣಯ್ಯ, ಚಿತ್ಕಲಾ ಬಿರಾದಾರ್, ರವಿಕುಮಾರ್ ಇನ್ನೂ ಸಾಕಷ್ಟು ಕಲಾವಿದರು ಅಭಿನಯಿಸುತ್ತಿದ್ದಾರೆ. ಇನ್ನೂ ರಂಜನಿ ರಾಘವನ್ ಅವರು ಕನ್ನಡತಿ ಸೀರಿಯಲ್ ಶೂಟಿಂಗ್ ನ ಒಂದು ಎಪಿಸೋಡ್ ನಲ್ಲಿ ಬಾವಿಗೆ ಬೀಳುತ್ತಾರೆ. ಅಂದರೆ ಅವರನ್ನು ಬಾವಿಗೆ ತಳ್ಳುತ್ತಾರೆ. ಈ ಸೀನನ್ನು ನೋಡುವುದಕ್ಕೆ ನಿಜವಾಗಿಯೂ ಭಯ ಆಗುತ್ತದೆ. ಅದರ ವಿಡಿಯೋವನ್ನು ಇಲ್ಲಿ ನೀವು ನೋಡಬಹುದು.
ಇನ್ನು ರಂಜನಿ ರಾಘವನ್ ಅವರು ಮಾರ್ಚ್ 29 1994 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಪುಟ್ಟಗೌರಿ ಮದುವೆ ಎನ್ನುವ ಧಾರಾವಾಹಿಯ ಮುಖಾಂತರ ಕಿರುತೆರೆಗೆ ಕಾಲಿಟ್ಟರು. ಇದಾದ ಮೇಲೆ ಮಲಯಾಳಂನಲ್ಲಿ ಕೂಡ ಒಂದು ಧಾರಾವಾಹಿಯಲ್ಲಿ ನಟಿಸಿದ್ದಾರೆ. ನಂತರ ಇಷ್ಟ ದೇವತೆ ಪ್ರಸ್ತುತ ಕನ್ನಡತಿ ಸೀರಿಯಲ್ ನಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುತ್ತಿದ್ದಾರೆ.
ಇನ್ನು ಸಿನಿಮಾಗೆ ಬಂದರೆ 2017 ರಲ್ಲಿ ರಾಜಹಂಸ ಚಿತ್ರದಲ್ಲಿ ಮೊದಲನೆಯದಾಗಿ ನಟಿಸುತ್ತಾರೆ. ತದನಂತರ ಠಕ್ಕರ್, ಸತ್ಯಂ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎನ್ನುವ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಹಕೂನ ಮಟಾಟ ಎನ್ನುವ ವೆಬ್ ಸಿರೀಸ್ ನಲ್ಲೂ ಕೂಡ ಅಭಿನಯಿಸಿದ್ದಾರೆ…..