Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸಿಹಿ ಕಹಿ ಚಂದ್ರು ಮನೆಯಲ್ಲಿ ಟೊಮೆಟೊ ಬಾತ್ ಎಷ್ಟು ಚೆನ್ನಾಗಿ ಮಾಡ್ತಾರೆ ನೋಡಿ..!! ಟೊಮೊಟೊ ಬಾತ್ ರೆಸಿಪಿ ಮಾಡಿ ವಿಡಿಯೋ ಹಂಚಿಕೊಂಡ ಸಿಹಿಕಹಿ ಚಂದ್ರು ಪುತ್ರಿ!!

0

ನಟ ಸಿಹಿಕಹಿ ಚಂದ್ರು ಅವರ ಮನೆಯಲ್ಲಿ ತಮ್ಮ ಮಗಳಾದ ಹಿತಾ ಚಂದ್ರಶೇಖರ್ ಮತ್ತು ಪತ್ನಿ ಸಿಹಿಕಹಿ ಗೀತಾ ಅವರು ಸೇರಿ ಟೊಮೆಟೊ ಬಾತ್ ರೆಸಿಪಿಯನ್ನು ಮಾಡಿದ್ದಾರೆ. ಈ ಅಡುಗೆಯನ್ನು ಅಭಿಮಾನಿಗಳು ತುಂಬಾ ಜನ ಕೇಳುತ್ತಿದ್ದರಂತೆ. ಹಾಗಾಗಿ ಟೊಮೆಟೊ ಬಾತ್ ನ ಪೂರ್ತಿ ಅಡುಗೆಯನ್ನು ವೀಡಿಯೋ ಮಾಡಿ ಅಭಿಮಾನಿಗಳಿಗೋಸ್ಕರ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಹಿತಾ ಚಂದ್ರಶೇಖರ್, ಆಕೆಯ ಸ್ನೇಹಿತೆ ಮತ್ತು ಸಿಹಿಕಹಿ ಗೀತಾ ಅವರು ಇದ್ದಾರೆ. ಹಿತಾ ಚಂದ್ರಶೇಖರ್ ಅವರು ಮಾಡಿದ ಟೊಮೆಟೊ ಬಾತ್ ರೆಸಿಪಿಯ ವೀಡಿಯೋ ಇಲ್ಲಿ ನೀವು ನೋಡಬಹುದು. ಇನ್ನು ನಿಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ಸಿಹಿಕಹಿ ಚಂದ್ರು ಅವರು ಹಾಸ್ಯದ ಪಾತ್ರಗಳಲ್ಲಿ ನಟನೆ ಮಾಡುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ.

ಇವರು ಏಪ್ರಿಲ್ 15 1961 ರಂದು ದಾವಣಗೆರೆಯಲ್ಲಿ ಜನಿಸಿದ್ದಾರೆ. ಸಿಹಿಕಹಿ ಚಂದ್ರು ಅವರು 1990 ರಂದು ಗಣೇಶನ ಮದುವೆ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು.

ಇದಾದ ಮೇಲೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಬೊಂಬಾಟ್ ಭೋಜನ ಕಾರ್ಯಕ್ರಮವನ್ನು ಸಿಹಿಕಹಿ ಚಂದ್ರು ಅವರು ತುಂಬ ಸೊಗಸಾಗಿ ನಡೆಸಿಕೊಟ್ಟರು.

ಇದರಿಂದ ಇವರು ಸಖತ್ ಫೇಮಸ್ ಕೂಡ ಆದರು. ಇನ್ನೂ ಬಿಗ್ ಬಾಸ್ ಕನ್ನಡ 5 ನೆಯ ಸೀಸನ್ ನಲ್ಲೂ ಕೂಡ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಯಿಂದ ಇವರು 49ನೆಯ ದಿನದಂದು ಹೊರಗೆ ಬಂದರು. ಇನ್ನು ಸಿಹಿಕಹಿ ಚಂದ್ರು ಅವರು ಕನ್ನಡದ ಜನಪ್ರಿಯ ನಟಿ ಸಿಹಿಕಹಿ ಗೀತಾ ಅವರನ್ನು 1990 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ.

ಇನ್ನು ಇವರ ಮಗಳು ಹಿತಾ ಚಂದ್ರಶೇಖರ್ ಅವರು 2017 ರಲ್ಲಿ ¼ ಕೆಜಿ ಪ್ರೀತಿ ಎಂಬ ಕನ್ನಡ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ಇದಾದ ಮೇಲೆ ಒಂಥರಾ ಬಣ್ಣಗಳು, ಯೋಗಿ, ದುನಿಯಾ, ಪ್ರೀಮಿಯರ್ ಪದ್ಮಿನಿ, ಖಾಜಿ ಮತ್ತು ಒಂದು ಹಿಂದಿ ಚಿತ್ರದಲ್ಲಿ ನಟಿಸಿದ್ದಾರೆ.

ಹಿತಾ ಚಂದ್ರಶೇಖರ್ ಅವರು ಜನಪ್ರಿಯ ನಟ ಕಿರಣ್ ಶ್ರೀನಿವಾಸ್ ಎನ್ನುವವರನ್ನು 2019 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ…..

Leave A Reply