ಸಿಪಿ ಯೋಗೇಶ್ವರ್ ಅವರ ಸೈನಿಕ ಚಿತ್ರದಲ್ಲಿ ನಟಿಸಿದ್ದ ಸಾಕ್ಷಿ ಶಿವಾನಂದ್ ಅವರು ಮದುವೆ ಆಗಿದ್ದು ಯಾರನ್ನ ಈಗ ಅವರು ಎಲ್ಲಿದ್ದಾರೆ ಗೊತ್ತೇ ??
ದಕ್ಷಿಣ ಭಾರತದ ಖ್ಯಾತ ನಟಿಯರ ಪಟ್ಟಿ ತುಂಬಾನೇ ಇದೆ ಎಂದು ಹೇಳಬಹುದು. ಅದರಲ್ಲಿ ಸಾಕ್ಷಿ ಶಿವಾನಂದ್ ಅವರು ಕೂಡ ಒಬ್ಬರು. ಸ್ಟಾರ್ ನಟಿ ಸಾಕ್ಷಿ ಶಿವಾನಂದ್ ಅವರು ಏಪ್ರಿಲ್ 15 1977 ರಂದು ಮುಂಬೈನಲ್ಲಿ ಜನಿಸಿದ್ದಾರೆ. ಇವರು ತೆಲುಗು ತಮಿಳು ಕನ್ನಡ ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಸಾಕ್ಷಿ ಶಿವಾನಂದ್ ಅವರು 1995 ರಲ್ಲಿ ಹಿಂದಿಯಲ್ಲಿ ಜನಂ ಕುಂಡ್ಲಿ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಶುರು ಮಾಡಿಕೊಂಡರು. ಇದಾದ ಮೇಲೆ ಇವರು ಹಿಂದಿ ಮಲೆಯಾಳಂ ತೆಲುಗು ಚಿತ್ರಗಳಲ್ಲಿ ಸಾಕಷ್ಟು ನಟಿಸಿ ನಂತರ 2002 ರಲ್ಲಿ ಕನ್ನಡದಲ್ಲಿ ನಾನು ನಾನೇ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.
ಇದಾದ ಮೇಲೆ ಸೈನಿಕ, ಕೋದಂಡರಾಮ, ತಂದೆಗೆ ತಕ್ಕ ಮಗ, ಸೌಂದರ್ಯ, ಪರಮಶಿವ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಸೈನಿಕ ಚಿತ್ರದಲ್ಲಿ ಅಭಿನಯಿಸಿದ ಸಾಕ್ಷಿ ಶಿವಾನಂದ ಅವರು ಸ್ಯಾಂಡಲ್ ವುಡ್ ನಲ್ಲಿ ಒಂದು ಒಳ್ಳೆಯ ಗುರುತನ್ನು ಸಾಧಿಸಿಕೊಂಡರು. ಸಾಕ್ಷಿ ಶಿವಾನಂದ್ ಅವರು 5 ಭಾಷೆಗಳಲ್ಲಿ ಸೇರಿ ಸುಮಾರು 40 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ಸಾಕ್ಷಿ ಶಿವಾನಂದ್ ಅವರು ಕೊನೆಯದಾಗಿ ಪರಮಶಿವ ಎನ್ನುವ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದಾದ ಮೇಲೆ ಇವರು ಯಾವ ಚಿತ್ರದಲ್ಲಿ ಕೂಡ ನಟಿಸಲಿಲ್ಲ. ಇನ್ನು ಸಾಕ್ಷಿ ಶಿವಾನಂದ್ ಅವರು ಟಾಲಿವುಡ್ ನಲ್ಲಿ ಕೂಡ ದೊಡ್ಡ ದೊಡ್ಡ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಹೌದು ಮೆಗಾಸ್ಟಾರ್ ಚಿರಂಜೀವಿ, ಅಕ್ಕಿನೇನಿ ನಾಗಾರ್ಜುನ, ಬಾಲಕೃಷ್ಣ, ಮಹೇಶ್ ಬಾಬು, ಮೋಹನ್ ಬಾಬು ಹೀಗೆ ದೊಡ್ಡ ನಟರ ಜೊತೆಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನು ಇವರಿಗೆ ಶಿಲ್ಪಾ ಆನಂದ್ ಎನ್ನುವ ತಂಗಿ ಕೂಡ ಇದ್ದಾರೆ. ಈಕೆ ಕೂಡ ಸಿನಿಮಾಗಳಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಸಾಕ್ಷಿ ಶಿವಾನಂದ್ ಅವರು ಸಾಗರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇಲ್ಲಿ ನೀವು ಸಾಕ್ಷಿ ಶಿವಾನಂದ್ ಅವರ ಫ್ಯಾಮಿಲಿಯ ಕೆಲ ಸುಂದರ ದೃಶ್ಯಗಳನ್ನು ನೋಡಬಹುದು…..