Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸಿನಿಮಾ ರಂಗದಲ್ಲಿ ಅವಕಾಶಗಳು ಇಲ್ಲದಿದ್ದಾಗ ಪವಿತ್ರ ಲೋಕೇಶ್ ಆಫೀಸ್ನಲ್ಲಿ ಯಾವ ಕೆಲಸಮಾಡುತ್ತಿದ್ದರು ಗೊತ್ತೆ ?? ಪಾಪ ರೀ !!

0

ನಮಸ್ಕಾರ ಸ್ನೇಹಿತರೇ, ಸಂಕಷ್ಟದ ಪರಿಸ್ಥಿತಿಗೆ ಸಿಲುಕಿ ಟೀಚರ್ ಆಗಿ ಕೆಲಸ ಮಾಡುತ್ತಿರುವ ನಟಿ ದೇವಯಾನಿ ಕಥೆಯನ್ನು ಎಲ್ಲರೂ ನೋಡಿದ್ದೇವೆ. ಅವಕಾಶಗಳು ಇಲ್ಲದಿದ್ದಾಗ ತಿಂಡಿ ಮಾರುತ್ತಿದ್ದ ಶಂಕರ್ ನಾಗ್ ಅವರ ಸ್ಟೋರಿ ಕೇಳಿದ್ದೇವೆ. ಅಂತಹ ಸ್ಥಿತಿಯನ್ನು ಎದುರಿಸಿದರು.

ನಟಿ ಪವಿತ್ರ ಲೋಕೇಶ್.ಹಾಗಾದರೆ ಅದ್ಭುತ ನಟಿಯ ಜೀವನದಲ್ಲಿ ಆದ ಸಂಕಷ್ಟದ ಸ್ಥಿತಿಯನ್ನು ನೋಡೋಣ ಬನ್ನಿ. ಕನ್ನಡದಲ್ಲಿ ವಿಭಿನ್ನ ನಟನೆಯಿಂದ ಗುರುತಿಸಿಕೊಂಡ ನಟ ಮೈಸೂರ್ ಲೋಕೇಶ್ ಅವರ ಮುದ್ದಾದ ಮಗಳು ಪವಿತ್ರ.

ತಂದೆ ಸಡನ್ನಾಗಿ ತೀರಿಕೊಂಡಾಗ ಮನೆಯ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕೇವಲ 16 ವರ್ಷಕ್ಕೆ ಬಣ್ಣ ಹಚ್ಚಿದರು ಪವಿತ್ರ ಅವರು. ತಂದೆಗೆ ಒಳ್ಳೆಯ ಹೆಸರು ಇರುವುದರಿಂದ ನನ್ನನ್ನು ಚಿತ್ರರಂಗದಲ್ಲಿ ಬಹಳ ಪ್ರೀತಿಯಿಂದ ಸ್ವಾಗತಿಸುತ್ತಾರೆ.

ಅವಕಾಶಗಳು ತುಂಬಾ ಬರುತ್ತವೆ ಅಂತ ಭಾವಿಸಿದ್ದರು. ಆದರೆ ಅವರು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ ಅವಕಾಶ ಪಡೆಯುವುದು. ಕೊನೆಗೆ ಅಂಬರೀಶ್ ಅವರ ಸಹಾಯದಿಂದ ಅವಕಾಶ ಪಡೆದ ಪವಿತ್ರ ಲೋಕೇಶ್ ಸುಮಾರು 6 ರಿಂದ 7 ಚಿತ್ರಗಳಲ್ಲಿ ನಟಿಸಿದರು.

ಆದರೆ ಪವಿತ್ರ ಲೋಕೇಶ್ ನಟಿಸಿದ ಯಾವ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ಹೆಸರನ್ನು ಪಡೆಯಲಿಲ್ಲ. ಹಾಗಾಗಿ ಅವಕಾಶಗಳು ಕಡಿಮೆಯಾಗಿ ಕೊನೆಗೆ ಯಾವುದೇ ಅವಕಾಶಗಳು ಇಲ್ಲದೆ ಮನೆಯಲ್ಲಿ ಕೋರುವ ಪರಿಸ್ಥಿತಿ.

ಎದುರಾಯಿತು. ಆಗ ಮನೆಯ ಜವಾಬ್ದಾರಿ ತನ್ನ ಮೇಲೆ ಇದ್ದ ಕಾರಣ ಚಿತ್ರರಂಗದಿಂದ ದೂರ ಆದ ಪವಿತ್ರ ಅವರು ಒಂದು ಪರವಾಗಿ ಕಂಪನಿಯಲ್ಲಿ ಎಚ್ಆರ್ ಅಸಿಸ್ಟೆಂಟ್ ಕೆಲಸಕ್ಕೆ ಸೇರಿಕೊಂಡರು.

ಒಂದು ವರ್ಷ ಸಾಮಾನ್ಯ ಹುಡುಗಿಯಂತೆ ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ದುಡಿದು ಮನೆಯ ಜವಾಬ್ದಾರಿಯನ್ನು ನಿಭಾಯಿಸಿದರು. ಒಂದು ವರ್ಷ ಆದಮೇಲೆ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪವಿತ್ರ.

ಲೋಕೇಶ್ ಯಾರನ್ನು ಕೈ ಚಾಚಿ ಅವಕಾಶಗಳನ್ನು ಕೇಳದೆ ತಮ್ಮ ವಿಭಿನ್ನ ನಟನೆಯಿಂದ ಕನ್ನಡ ಅಲ್ಲದೆ ಬೇರೆ ಭಾಷೆಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡರು.

ಈಗ ಇವರು ಕನ್ನಡದಲ್ಲಿ ನಟಿಸುವುದು ಕಡಿಮೆಯಾದರೂ ತೆಲುಗಿನಲ್ಲಿ ಭಾರೀ ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ.ನಟಿ ಪವಿತ್ರ ಲೋಕೇಶ್ ಅವರ ಧೈರ್ಯವನ್ನು ನಿಜಕ್ಕೂ ಮೆಚ್ಚಲೇಬೇಕು. ಯಾಕೆಂದರೆ ಇಂದಿನ ಯುವ ನಟಿಯರಿಗೆ ಅವರು ಸ್ಪೂರ್ತಿಯಾಗಿ ನಿಂತಿದ್ದಾರೆ…..

Leave A Reply