ಸಿನಿಮಾ ಕ್ಷೇತ್ರ ಕೈ ಬಿಟ್ಟರೂ ತಮ್ಮದೇ ಸ್ವ ಶಕ್ತಿಯಿಂದ ಲಕ್ಷಾಂತರ ರೂಪಾಯಿ ದುಡಿಯುತ್ತಿರುವ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಕುಮಾರ್, ಅದೆಷ್ಟು ಲಕ್ಷ ಗೊತ್ತೇ ??
ಕನ್ನಡ ಸಿನಿಮಾರಂಗದಲ್ಲಿ ಒಂದಾನೊಂದು ಕಾಲದಲ್ಲಿ ಅದೆಷ್ಟೋ ನಟ – ನಟಿಯರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತದನಂತರದಲ್ಲಿ ಹೇಳ ಹೆಸರಿಲ್ಲದಂತೆ ಸಿನಿಮಾ ಕ್ಷೇತ್ರದಿಂದ ದೂರ ಉಳಿದು ಬಿಡುತ್ತಾರೆ . ಅಂತಹವರಲ್ಲಿ ಲೀಲಾವತಿ ಕೂಡ ಒಬ್ಬರು. ಒಂದು ಕಾಲದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಲೀಲಾವತಿ ನಾಯಕಿಯಾಗಿ, ನಂತರ ಪೋಷಕ ನಟಿಯಾಗಿ ಮಿಂಚಿದ್ದರು.
ಡಾ ರಾಜ್ ಕುಮಾರ್ ರಂತಹ ಮೇರು ನಟರೊಂದಿಗೆ ಅಭಿನಯಿಸಿದ ಕೀರ್ತಿ ಅವರದ್ದು. ವಯಸ್ಸಾದ ಮೂಲೂ ಅನೇಕ ಸಿನಿಮಾಗಳಲ್ಲಿ ಹಾಗೆಯೇ ಕಿರುತೆರೆಯಲ್ಲಿಯೂ ನಟಿಸಿದವರು ಲೀಲಾವತಿ. ಇನ್ನು ಅವರ ಮಗ ವಿನೋದ್ ರಾಜ್ ಕುಮಾರ್ ಅಂತೂ 80 ರ ದಶಕದ ಖ್ಯಾತ ನಟ. ಕನ್ನಡದ ಮೈಕಲ್ ಜಾಕ್ಸನ್ ಎಂದೇ ಫೇಮಸ್ ಆಗಿದ್ದರು.
ಡ್ಯಾನ್ಸ್ ರಾಜಾ ಡ್ಯಾನ್ ಮೂಲಕ ಸಿನಿಮಾ ಜಗತ್ತಿಗೆ ಎಂಟ್ರಿ ಪಡೆದಿದ್ದ ವಿನೋದ್ ರಾಜ್ ತಮ್ಮ ಡ್ಯಾನ್ಸ್ ನಿಂದಲೇ ಜನಪ್ರಿಯತೆ ಗಳಿಸಿದ್ದರು. ಆದರೆ ಕೊನೆಗೆ ಅನಾರೋಗ್ಯ ಕಾಡಿ ಚಿತ್ರರಂಗದಿಂದ ದೂರ ಉಳಿದಿದ್ದರು. ನಂತರದಲ್ಲಿ ಅವರಿಗೆ ಸಿನಿಮಾದಲ್ಲಿ ಅವಕಾಶಗಳೇ ಕಡಿಮೆ ಆಗಿ ಬಿಟ್ಟಿತ್ತು.
ತನ್ನ ತಾಯಿಯನ್ನು ದೇವರಂತೆ ಪೂಜಿಸುವ ವಿನೋದ್ ರಾಜ್ ಕುಮಾರ್ ಅವರು ಆರ್ಥಿಕವಾಗಿ ಸಂಕಷ್ಟ ಎದುರಿಸಿದ್ದರು. ಇದೀಗ 53 ವರ್ಷ ತುಂಬಿರುವ ವಿನೋದ್ ರಾಜ್ ಕುಮಾರ್ ತನ್ನ ಪೂತಿ ಜೀವನವನ್ನು ಅಮ್ಮನಿಗಾಗಿ ಮುಡಿಪಾಗಿಟ್ಟವರು. ಮಗ ಹುಟ್ಟಿದರೆ ವಿನೋದ್ ರಾಜ್ ಕುಮಾರ್ ನಂತೆ ಹುಟ್ಟಬೇಕು ಎಂದು ಅನೇಕರು ಹೇಳಿದ್ದೂ ಇದೆ.
ಹೀಗೆ ಇನ್ನು ಸಿನಿಮಾದ ಸಹವಾಸವೇ ಬೇಡ ಎಂದು ನಿರ್ಧಾರ ಮಾಡಿಕೊಂಡ ವಿನೋದ್ ರಾಜ್ ಕುಮಾರ್ ಕೃಷಿಯತ್ತ ಒಲವು ತೋರಿಸುತ್ತಾರೆ. ತಮ್ಮ ಜಮೀನಿನಲ್ಲಿ ಭತ್ತ, ಕಬ್ಬು, ಜೋಳ ಹೀಗೆ ಬೇರೆ ಬೇರೆ ದವಸ – ಧಾನ್ಯಗಳನ್ನು ಬೆಶೆಯುತ್ತಾರೆ. ಇದೀಗ ಅದರಿಂದ ವಾರ್ಷಿಕವಾಗಿ 20 ರಿಂದ 25 ಲಕ್ಷವರೆಗೆ ಆದಾಯ ಗಳಿಸುತ್ತಿದ್ದಾರೆ. ಹೀಗೆ ತಮ್ಮ ರಕ್ತದಲ್ಲಿಯೇ ಇರುವ ಸಿನಿಮಾ.
ಅಭಿರುಚಿಯನ್ನು ಬಿಟ್ಟು, ಕೃಷಿಯತ್ತ ಒಲವು ತ್ರಿಸಿರುವ ಲೀಲಾವತಿ ಕೂಡ ತಮಮ್ ಹೆಚ್ಚ್ನ ಸಮಯವನ್ನು ಜಮೀನಿನಲ್ಲಿಯೇ ಕಳೆಯುತ್ತಾರೆ. ಇತ್ತ ವಿನೋದ್ ರಾಜ್ ಕುಮಾರ್ ಕೂಡ ಈ ವ್ಯವಸಾಯದಿಂದ ಸಂತೃಪ್ತಿ ಕಂಡಿದ್ದಾರೆ. ಅಷ್ಟೇ ಅಲ್ಲ ಕಷ್ಟ ಅಂದವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಒಟ್ಟಿನಲ್ಲಿ ಸಾಧಿಸುವ ಛಲ ಇದ್ದರೆ ದಾರಿ ನೂರಾರು ಇದೆ ಅನ್ನುವುದನ್ನು ಇವರು ತೋರಿಸಿಕೊಟ್ಟಿದ್ದಾರೆ.