ಚಿತ್ರರಂಗದಲ್ಲಿ ಸಾಕಷ್ಟು ನಟ ನಟಿಯರಿಗೆ ಹತ್ತಿರದ ಸಂಬಂಧಗಳು ಇರುತ್ತವೆ. ಅಂತಹವರು ಯಾವ ನಟ ನಟಿ ಎಂದು ಇಲ್ಲಿ ತಿಳಿದುಕೊಳ್ಳೋಣ..
ನಮ್ಮ ಕನ್ನಡದ ರಿಯಾಲಿಟಿ ಶೋ ನ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಮತ್ತು ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರಿಬ್ಬರಿಗೂ ಸಂಬಂಧವಿದೆ. ಹೌದು ಅಕುಲ್ ಬಾಲಾಜಿ ಅವರಿಗೆ ಮಹೇಶ್ ಬಾಬು ಅವರು ಕಸಿನ್ ಆಗಬೇಕು.
ಕಿರುತೆರೆ ಮತ್ತು ಬೆಳ್ಳಿತೆರೆಯ ಖ್ಯಾತ ನಟಿ ಚಂದ್ರಕಲಾ ಮೋಹನ್ ಅವರು ಖ್ಯಾತ ನಟಿ ಶ್ರುತಿ ಮತ್ತು ಹಾಸ್ಯ ನಟ ಶರಣ್ ಅವರಿಗೆ ಸಂಬಂಧದಲ್ಲಿ ಕಸಿನ್ ಆಗಬೇಕು.
ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ನಗ್ಮಾ ಮತ್ತು ಜ್ಯೋತಿಕಾ ಅವರಿಬ್ಬರು ಸಂಭಂದದಲ್ಲಿ ತಂಗಿಯಾಗಬೇಕು. ಅಂದರೆ ನಗ್ಮಾ ಮತ್ತು ಜ್ಯೋತಿಕಾ ಅವರ ತಂದೆ ಎರಡು ಮದುವೆಳಾಗಿದ್ದು ಮೊದಲನೆಯ ಹೆಂಡತಿಯ ಮಗಳು ನಗ್ಮಾ ಮತ್ತು ಎರಡನೆಯ ಹೆಂಡತಿಯ ಮಗಳು ಜ್ಯೋತಿಕಾ.
ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ಮತ್ತು ಬಾಲಿವುಡ್ ನ ಸ್ಟಾರ್ ನಟಿ ವಿದ್ಯಾಬಾಲನ್ ಅವರು ಸಂಬಂಧದಲ್ಲಿ ಇಬ್ಬರು ಅಕ್ಕ ತಂಗಿ ಆಗಬೇಕು.
ಶ್ರೀಮುರಳಿ ಅವರ ಪತ್ನಿ ವಿದ್ಯಾ ಅವರಿಗೆ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಹೋದರ ಆಗಬೇಕು. ಶ್ರೀ ಮುರಳಿಯವರು ಪ್ರಶಾಂತ ನೀಲ್ ಅವರಿಗೆ ಭಾವ ಆಗಬೇಕು.
ನಾಗಿಣಿ ಸೀರಿಯಲ್ ಮುಖಾಂತರ ಫೇಮಸ್ ಆಗಿರುವ ದೀಪಿಕಾ ದಾಸ್ ಅವರು ರಾಕಿಂಗ್ ಸ್ಟಾರ್ ಯಶ್ ಅವರಿಗೆ ತಂಗಿಯಾಗಬೇಕು. ರಾಕಿಂಗ್ ಸ್ಟಾರ್ ಯಶ್ ಅವರ ತಾಯಿಯ ತಂಗಿ ಮಗಳೇ ದೀಪಿಕಾ ದಾಸ್.
ಇನ್ನು ಖ್ಯಾತ ಹಿರಿಯ ನಟ ರಾಜೇಶ್ ಅವರ ಮಗಳು ನಿವೇದಿತಾ ಅವರನ್ನು ಅರ್ಜುನ್ ಸರ್ಜಾ ಅವರನ್ನು ವಿವಾಹ ಮಾಡಿಕೊಂಡಿದ್ದು ರಾಜೇಶ್ ಅವರಿಗೆ ಅರ್ಜುನ್ ಸರ್ಜಾ ಅವರ ಅಳಿಯ ಆಗಬೇಕು.
ಕನ್ನಡದ ಖ್ಯಾತ ಸ್ಟಾರ್ ನಟಿ ಪ್ರೇಮಾ ಅವರಿಗೆ ಬಿಗ್ ಬಾಸ್ ಖ್ಯಾತಿ ಮತ್ತು ಕ್ರಿಕೆಟಿಗ ಅಯ್ಯಪ್ಪ ಅವರು ಸ್ವಂತ ತಮ್ಮ ಆಗಬೇಕು.
ದುನಿಯಾ ವಿಜಯ್ ಅವರ ಅಕ್ಕ ಅಂಬುಜಾ ಅವರ ಮಗ ಲೂಸ್ ಮಾದ ಯೋಗೀಶ್. ಹಾಗಾಗಿ ದುನಿಯಾ ವಿಜಯ್ ಅವರಿಗೆ ಯೋಗೇಶ್ ಅವರು ಅಳಿಯ ಆಗಬೇಕು.
ರಾಧಿಕಾ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ವಿವಾಹ ಮಾಡಿಕೊಂಡಿದ್ದು ಇನ್ನು ಕುಮಾರಸ್ವಾಮಿಯವರ ಮೊದಲನೆಯ ಹೆಂಡತಿಯ ಮಗ ನಟ ನಿಖಿಲ್ ಕುಮಾರಸ್ವಾಮಿ. ಹಾಗಾಗಿ ರಾಧಿಕಾ ಕುಮಾರಸ್ವಾಮಿ ಅವರು ನಿಖಿಲ್ ಕುಮಾರಸ್ವಾಮಿ ಅವರಿಗೆ ಚಿಕ್ಕಮ್ಮ ಆಗಬೇಕು.
ಶಿವರಾಜ್ ಕುಮಾರ್ ಅವರು ಗೀತಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದು ಇನ್ನು ಗೀತಾ ಅವರಿಗೆ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಎನ್ನುವ ಇಬ್ಬರು ಸಹೋದರರು ಇದ್ದಾರೆ. ಹಾಗಾಗಿ ಶಿವರಾಜ್ ಕುಮಾರ್ ಅವರಿಗೆ ಇವರಿಬ್ಬರು ಮಾವಂದಿರು ಆಗಬೇಕು.
ಡಾ ರಾಜ್ ಕುಮಾರ್ ಅವರ ಮಗಳು ಪೂರ್ಣಿಮಾ ಅವರನ್ನು ಕನ್ನಡದ ಖ್ಯಾತ ನಟ ರಾಮ್ ಕುಮಾರ್ ಅವರು ವಿವಾಹ ಮಾಡಿಕೊಂಡಿದ್ದು ರಾಜ್ಕುಮಾರ್ ಅವರಿಗೆ ರಾಮಕುಮಾರ್ ಅವರು ಅಳಿಯ ಆಗಬೇಕು…..