Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ಈ ನಟಿಯ ಜೀವನ ಏನಾಗಿದೆ ಗೊತ್ತೇ ?? ಪಾಪ ಇಂಥ ಸ್ಥಿತಿ ಯಾರಿಗೂ ಬೇಡ ಕಣ್ರೀ !!

0

ಸಾಕಷ್ಟು ಜನರು ಎಲ್ಲಾ ಕಲಾವಿದರ ಬಳಿ ತುಂಬಾ ಹಣವಿರುತ್ತದೆ ವಜ್ರ ವೈಡೂರ್ಯಗಳ ಇರುತ್ತದೆ ಎಂದು ಅಂದುಕೊಂಡಿರುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ಎಲ್ಲಾ ಕಲಾವಿದರು ಈ ರೀತಿಯ ಸುಖ ಸುಪ್ಪತ್ತಿಗೆಯನ್ನು ಅನುಭವಿಸುವುದಿಲ್ಲ. ಕೆಲ ಕಲಾವಿದರ ಜೀವನದಲ್ಲೂ ಕೂಡ ತುಂಬಾನೇ ಕಷ್ಟಗಳು ಇರುತ್ತವೆ.

ಲಲಿತಮ್ಮ ಎನ್ನುವವರು ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ ಧಾರಾವಾಹಿಗಳಲ್ಲೂ ಕೂಡ ನಟಿಸಿದ್ದಾರೆ. ಇವರು ಸಿನಿಮಾ ರಂಗದಲ್ಲಿ ಬೆಳೆದು ಜೀವನದಲ್ಲಿ ಸೆಟಲ್ ಆಗಬೇಕು ಎಂದು ತುಂಬಾನೆ ಕಷ್ಟ ಪಡುತ್ತಿದ್ದಾರೆ. ಲಲಿತಮ್ಮ ಅವರು ತಮ್ಮ ಬಳಿ ಇರುವ ಒಡವೆಗಳನ್ನು ಒಬ್ಬ ವ್ಯಕ್ತಿಗೆ ನಂಬಿಕೆಯಿಂದ ಕೊಟ್ಟು ಅವರಿಂದ ಮೋಸ ಹೋಗಿದ್ದಾರೆ.

ಇವುಗಳನ್ನು ಲಲಿತಮ್ಮ ಅವರು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಲಲಿತಮ್ಮ ಅವರಿಗೆ ನಟನೆ ಮತ್ತು ಹಾಡು ಹಾಡುವುದಕ್ಕೆ ತುಂಬ ಇಷ್ಟವಿತ್ತಂತೆ. ಆದರೆ ಎಲ್ಲೂ ಕೂಡ ಅವಕಾಶಗಳು ಸಿಗುತ್ತಿರಲಿಲ್ಲ. ಒಂದು ದಿನ ಇವರು ಶಾಲೆಯಲ್ಲಿ ಓದುತ್ತಿರುವಾಗ ಅವರ ಮೇಷ್ಟ್ರು ನಾಟಕದಲ್ಲಿ ಅಭಿನಯಿಸುವುದಕ್ಕೆ ಅವಕಾಶ ಕೊಟ್ಟರಂತೆ. ನನ್ನನ್ನು ನೋಡಿ ಯಾರೂ ಕೂಡ ಅವಕಾಶ ಕೊಡುತ್ತಿರಲಿಲ್ಲ.

ಇದರ ಜೊತೆಗೆ ನನ್ನ ನಟನೆಯ ಪ್ರತಿಭೆಯನ್ನು ಕೂಡ ಯಾರು ನೋಡುತ್ತಿರಲಿಲ್ಲ. ಆದರೆ ಒಬ್ಬರೇ ಒಬ್ಬರು ನನಗೆ ಸುಂಟರಗಾಳಿ ಸಿನಿಮಾದಲ್ಲಿ ಇವರೇ ಆ ಪಾತ್ರವನ್ನು ಮಾಡಬೇಕು ಎಂದು ಸಾಧುಕೋಕಿಲಾ ಅವರು ನನಗೆ ಅವಕಾಶ ಕೊಟ್ಟರು ಎಂದು ಹೇಳಿದರು. ನನ್ನನ್ನು ನೋಡಿ ಇವರು ಅಭಿನಯ ಮಾಡುತ್ತಾರಾ ಎನ್ನುವ ರೀತಿ ನೋಡುತ್ತಿದ್ದರು. ಆದರೆ ನಾನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ನನ್ನ ಬಳಿ ಇರುವ ಒಡವೆಗಳನ್ನು ಥಿಯೇಟರ್ ಬುಕ್ ಮಾಡುವುದಕ್ಕೆ ತಿಮ್ಮಯ್ಯ ಎನ್ನುವ ವ್ಯಕ್ತಿಗೆ ಕೊಟ್ಟಿದ್ದೆ. ಆದರೆ ಅವರು ನನಗೆ ವಾಪಸ್ ನೀಡಲಿಲ್ಲ. ಇನ್ನೊಬ್ಬರಿಗೆ ಕಲಾಕ್ಷೇತ್ರ ಬುಕ್ ಮಾಡುವುದಕ್ಕೆ ಸ್ವಲ್ಪ ಒಡವೆ ಹಣವನ್ನು ಕೊಟ್ಟಿದ್ದೆ ಆದರೆ ಅವರು ಕೂಡ ನನಗೆ ವಾಪಸ್ ಮಾಡಿಲ್ಲ. ನಾನು ಅವರನ್ನು ಕೇಳುವುದಕ್ಕೂ ಕೂಡ ಹೋಗಲಿಲ್ಲ. ನನ್ನ ಸ್ವಂತ ಸಹೋದರನು ಕಷ್ಟಕ್ಕೆ ಆಗಲಿಲ್ಲ.

ನನ್ನ ತಾಯಿ ತೀರಿಕೊಂಡಾಗ ನನ್ನ ಸಹೋದರ ನನ್ನ ಅಮ್ಮನ ಅಂತ್ಯಸಂಸ್ಕಾರ ಮಾಡಲಿಲ್ಲ. ನನಗೆ ನನ್ನ ತಾಯಿಯೇ ಎಲ್ಲ ಆದ ಕಾರಣ ನಾನು ಸಾಯಬೇಕು ಎಂದು ಅಂದುಕೊಂಡಿದ್ದೆ. ಆದರೆ ಇದಕ್ಕೂ ಮುನ್ನ ನನ್ನ ಪ್ರತಿಭೆಯನ್ನು ತೋರಿಸಬೇಕೆಂದು ನಿರ್ಧಾರ ಮಾಡಿದೆ. ನಟನೆ ಮಾಡುವ ಮುನ್ನ ನಾನು ಸೇಲ್ಸ್ ಕೆಲಸ ಮಾಡಿದ್ದೆ, ಎಲ್ಲ ಮನೆಗೂ ಹೋಗಿ ಲಿರಿಲ್ ಸಾಬೂನೂಗಳನ್ನು ಮಾರಿದ್ದೆ, ಒಂದು ಆಫೀಸ್‌ ನಲ್ಲಿ ಕ್ಲರ್ಕ್ ಕೆಲಸ ಕೂಡ ಮಾಡಿದ್ದೆ.

ಇದಾದ ಮೇಲೆ ನನಗೆ ನಾಟಕದ ಮೇಲೆ ಆಸಕ್ತಿ ಇದ್ದ ಕಾರಣ ಎಲ್ಲವನ್ನು ಬಿಟ್ಟು ಸಿನಿಮಾ ರಂಗದಲ್ಲಿ ನಟಿಸಲು ಶುರು ಮಾಡಿಕೊಂಡೆ. ಆದರೆ ಕರೋನಾದಿಂದ ಲಾಕ್‌ ಡೌನ್ ಆಗಿದ್ದ ಕಾರಣ ನನಗೆ ಆರ್ಥಿಕ ಸಮಸ್ಯೆ ತುಂಬಾ ಎದುರಾಯಿತು. ಹಾಗಾಗಿ ನನಗೆ ಆಗ ಶಿವಣ್ಣ ಅವರು ಸಹಾಯ ಮಾಡಿದ್ದರು. ಆದರೆ ಯಾರಿಗೆ ಏನು ಹೇಳಬೇಡಿ ಎಂದಿದ್ದರು. ಇದರಂತೆ ಪುನೀತ್ ರಾಜ್ ಕುಮಾರ್ ಅವರು ಕೂಡ ಇದ್ದರು…..

Leave A Reply