ಕನ್ನಡ ಇಂಡಸ್ಟ್ರಿಯ ಬೆಳ್ಳಿತೆರೆಯಲ್ಲಿ ಸಾಕಷ್ಟು ಜೋಡಿಗಳು ಒಂದೇ ಸಿನಿಮಾದಲ್ಲಿ ನಟಿಸಿ ನಂತರ ಮದುವೆಯಾಗಿರುವ ಜೋಡಿಗಳು ಸಾಕಷ್ಟು ಜನರು ಇದ್ದಾರೆ. ಇನ್ನು ಇದರಂತೆಯೇ ಕನ್ನಡದ ಕಿರುತೆರೆಯಲ್ಲಿ ಕೂಡ ಶೂಟಿಂಗ್ ಸೆಟ್ ನಲ್ಲಿ ಪ್ರೀತಿಸಿ ನಂತರ ರಿಯಲ್ ಲೈಫ್ ನಲ್ಲೂ ಕೂಡ ಜೋಡಿಗಳಾಗಿದ್ದಾರೆ. ಅವರು ಯಾರೆಂದು ಇಲ್ಲಿ ನೋಡೋಣ ಬನ್ನಿ..
ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿಯಲ್ಲಿ ಭವಾನಿ ಸಿಂಗ್ ಮತ್ತು ಪಂಕಜ ಶಿವಣ್ಣ ಅವರು ಮುಖ್ಯವಾದ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಇಬ್ಬರು ರಿಯಲ್ ಲೈಫ್ ನಲ್ಲೂ ಕೂಡ ಮದುವೆಯಾಗಿ ರಿಯಲ್ ಜೋಡಿಗಳಾಗಿ ಇದ್ದಾರೆ. ಹಾಗೆ ಇವರಿಬ್ಬರೂ ಜೋಡಿ ನಂಬರ್ 1 ಎನ್ನುವ ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿದ್ದಾರೆ.
ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ದಿವ್ಯಶ್ರೀ ಮತ್ತು ಗೋವಿಂದೇಗೌಡ ಅವರು ಇಬ್ಬರು ಈ ಶೋನಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಈ ಸೆಟ್ ಮುಖಾಂತರ ಇವರಿಬ್ಬರ ಪರಿಚಯ ಸ್ನೇಹವಾಗಿ ತದನಂತರ ಪ್ರೀತಿಸಿ ವಿವಾಹ ಮಾಡಿಕೊಂಡರು. ಇವರಿಗೆ ಒಂದು ಮುದ್ದಾದ ಹೆಣ್ಣು ಮಗಳು ಕೂಡ ಇದ್ದಾಳೆ.
ಮಿಸ್ಟರ್ ಅಂಡ್ ಮಿಸಸ್ ರಂಗೆಗೌಡ ಧಾರವಾಹಿಯಲ್ಲಿ ರಘು ಮತ್ತು ಅಮೃತ ರಾಮಮೂರ್ತಿ ಅವರು ಒಟ್ಟಾರೆಯಾಗಿ ನಟಿಸಿ ಈ ಸೀರಿಯಲ್ ಮುಖಾಂತರ ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿ ತದನಂತರ ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಧೃತಿ ಎನ್ನುವ ಮಗಳು ಸಹ ಇದ್ದಾಳೆ.
ದೀಪಿಕಾ ಮತ್ತು ಆಕರ್ಷ್ ಅವರು ಇಬ್ಬರು ಕುಲವಧು ಧಾರವಾಹಿಯಲ್ಲಿ ಜೊತೆಯಾಗಿ ನಟಿಸಿ ರಿಯಲ್ ಲೈಫ್ ನಲ್ಲೂ ಕೂಡ ಜೋಡಿಗಳಾಗಿದ್ದಾರೆ. ಇನ್ನು ಇವರು ರಾಜ ರಾಣಿ ಕಾರ್ಯಕ್ರಮದಲ್ಲೂ ಕೂಡ ಭಾಗವಹಿಸಿದ್ದರು.
ರೂಪ ಪ್ರಭಾಕರ್ ಮತ್ತು ಪ್ರಶಾಂತ್ ಇಬ್ಬರೂ ಫೇಮಸ್ ದಾರಾವಾಹಿ ಸಿಲ್ಲಿಲಲ್ಲಿ ಧಾರವಾಹಿಯಲ್ಲಿ ಜೊತೆಯಾಗಿ ನಟಿಸಿ ನಂತರ ಪ್ರೀತಿಸಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಒಬ್ಬ ಮಗ ಕೂಡ ಇದ್ದಾನೆ.. ಇನ್ನು ಪ್ರಶಾಂತ್ ಮತ್ತು ರೂಪ ಪ್ರಭಾಕರ್ ಇಬ್ಬರು ರಾಜಾ ರಾಣಿ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದರು.
ಚಂದನ್ ಕುಮಾರ್ ಮತ್ತು ಕವಿತಾ ಗೌಡ ಇಬ್ಬರು ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ನಟಿಸಿ ನಂತರ ಪ್ರೀತಿಸಿ ವಿವಾಹ ಮಾಡಿಕೊಂಡಿದ್ದಾರೆ. ಸದ್ಯ ಇವರು ಇಬ್ಬರೂ ಬಿಸಿನೆಸ್ ನಲ್ಲಿ ಮಗ್ನರಾಗಿದ್ದು ಯಾವುದೇ ಸೀರಿಯಲ್ ಅಥವಾ ಸಿನಿಮಾಗಳಲ್ಲಿ ನಟಿಸುತ್ತಿಲ್ಲ.
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಇಬ್ಬರು ಕಲರ್ಸ್ ಕನ್ನಡ ವಾಹಿನಿಯ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ ನಲ್ಲಿ ಇಬ್ಬರು ಕಂಟೆಸ್ಟೆಂಟ್ಗಳಾಗಿ ಭಾಗವಹಿಸಿದ್ದರು. ತದನಂತರ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಇವರಿಬ್ಬರ ಪರಿಚಯ ಮತ್ತಷ್ಟು ಹೆಚ್ಚಾಗಿ ಅದು ಪ್ರೀತಿಗೆ ತಿರುಗಿ ವಿವಾಹ ಮಾಡಿಕೊಂಡರು.
ಕನ್ನಡ ಕಿರುತೆರೆಯ ಖ್ಯಾತ ಕಲಾವಿದರಾಗಿರುವ ವಿನಯ್ ಮತ್ತು ಐಶ್ವರ್ಯ ಇಬ್ಬರು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇವರಿಬ್ಬರೂ ಕೂಡ ರಾಜಾ ರಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು……