Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರ ಜೊತೆ ಕನಸಿನ ರಾಣಿ ಮಾಲಾಶ್ರೀ ಅವರ ಅಪರೂಪದ ಕ್ಷಣಗಳು..!!

0

ಡಾ ರಾಜ್ ಕುಮಾರ್ ಅವರ ಕುಟುಂಬ ಎಂದರೆ ದೊಡ್ಮನೆಯವರು ಎಂದು ಹೇಳುತ್ತಾರೆ. ಈ ಮಾತು ಸುಮ್ಮನೇ ಹೇಳುವುದಿಲ್ಲ. ಇದನ್ನು ಅದೇ ರೀತಿ ನಡೆಸಿಕೊಳ್ಳಬೇಕು ಕೂಡ ಹೌದು. ಡಾ ರಾಜ್ ಕುಮಾರ್ ಅವರ ಪ್ರೊಡಕ್ಷನ್ ಕಂಪನಿಯಿಂದ ಸಾಕಷ್ಟು ನಟಿಯರು ಕನ್ನಡ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದರು. ಅದರಲ್ಲಿ ಪ್ರೇಮಾ, ರಮ್ಯಾ, ರಕ್ಷಿತಾ ಇನ್ನೂ ಹಲವಾರು ನಟಿಯರು ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು.

ಇನ್ನು ಇದರಂತೆಯೇ ಕನ್ನಡ ಇಂಡಸ್ಟ್ರಿಯ ಕನಸಿನ ರಾಣಿ ಮಾಲಾಶ್ರೀ ಅವರು ಕೂಡ ರಾಘವೇಂದ್ರ ರಾಜ್ ಕುಮಾರ್ ಅವರ ಜೊತೆಗೆ ಮೊದಲನೆಯದಾಗಿ ಅಭಿನಯಿಸಿ ಕನ್ನಡ ಸಿನಿ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದರು. ಹೌದು ಮಾಲಾಶ್ರೀ ಅವರು ರಾಘವೇಂದ್ರ ರಾಜಕುಮಾರ್ ಅವರ ಜೊತೆಗೆ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಮೊದಲನೆಯದಾಗಿ ನಟಿಸಿ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು.

ಇನ್ನು ನಂಜುಂಡಿ ಕಲ್ಯಾಣ ಚಿತ್ರವನ್ನು ಎಂ ಎಸ್ ರಾಜಶೇಖರ್ ಅವರು ನಿರ್ದೇಶಿಸಿದ್ದಾರೆ ಮತ್ತು ಚಿ ಉದಯಶಂಕರ್ ಅವರು ಕಥೆಯನ್ನು ಬರೆದಿದ್ದಾರೆ. ಹಾಗೆಯೇ ಇದಕ್ಕೆ ಉಪೇಂದ್ರ ಕುಮಾರ್ ಅವರ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಇನ್ನೂ ಈ ಚಿತ್ರವು 1989 ರಲ್ಲಿ ಬಿಡುಗಡೆಯಾಯಿತು. ಮಾಲಾಶ್ರೀ ಅವರು ತಮ್ಮ ಮೊದಲನೆಯ ಚಿತ್ರದ ಮೂಲಕವೇ ತುಂಬಾನೆ ಫೇಮಸ್ ಆದರು.

ಇದಾದ ಮೇಲೆ ಇವರಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶಗಳು ದೊರಕಿದವು. ತದನಂತರ ರಾಘವೇಂದ್ರ ರಾಜ್ ಕುಮಾರ್ ಅವರ ಜೊತೆಗೆ ಗಜಪತಿ ಗರ್ವಭಂಗ ಮತ್ತು ನಾವಿಬ್ಬರು ನಮಗಿಬ್ಬರು ಎನ್ನುವ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಹಾಗೆಯೇ ಶಿವರಾಜ್ ಕುಮಾರ್ ಅವರ ಜೊತೆ ಗಂಗಾ ಯಮುನಾ ಮತ್ತು ಮೃತ್ಯುಂಜಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇವರ ಜೊತೆಗೆ ಅಲ್ಲದೇ ಮಾಲಾಶ್ರೀ ಅವರು ಬಹುತೇಕ ದೊಡ್ಡ ದೊಡ್ಡ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಇನ್ನು ಮಾಲಾಶ್ರೀ ಅವರು ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರ ಜೊತೆಗೇ ಇದ್ದ ಕೆಲ ಅಪರೂಪದ ಕ್ಷಣಗಳನ್ನು ಇಲ್ಲಿ ನೀವು ನೋಡಬಹುದು…..

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply