ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಗೀತಾ ಅವರು ಮೇ 19 1986 ರಂದು ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಗೀತಾ ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳು. ಇನ್ನೂ ಇವರದ್ದು ಈ ವರ್ಷ 36ನೇ ವಿವಾಹ ವಾರ್ಷಿಕೋತ್ಸವ ಆಗಿದೆ. ಪ್ರತಿವರ್ಷ ಇವರಿಬ್ಬರೂ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ತುಂಬ ಅದ್ದೂರಿಯಾಗಿ ಮಾಡಿಕೊಳ್ಳುತ್ತಿದ್ದರು.
ಆದರೆ ಶಿವರಾಜ್ ಕುಮಾರ್ ಅವರ ಸಹೋದರ ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣದಿಂದ ಈ ವರ್ಷ ಇವರು ಯಾವುದೇ ಸಂಭ್ರಮಗಳನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ. ಇನ್ನೂ ರಾಘಣ್ಣ ಅವರು ತಮ್ಮ ಅಣ್ಣನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನೂ ಪುನೀತ್ ರಾಜ್ ಕುಮಾರ್ ಅವರು ಅಕ್ಟೋಬರ್ 29 2021 ರಂದು ದಿಢೀರ್ ಹೃದಯಾಘಾತದಿಂದ ಮರಣ ಹೊಂದಿದರು.
ಇವರ ಅಕಾಲಿಕ ಮರಣವು ಈಗಲೂ ಕೂಡ ಅವರ ಕುಟುಂಬಸ್ಥರಿಗೆ ಅಭಿಮಾನಿಗಳಿಗೆ ನೋವನ್ನುಂಟು ಮಾಡುತ್ತಿದೆ. ಪುನೀತ್ ಅವರ ಸಮಾಧಿಯನ್ನು ನೋಡುವುದಕ್ಕೆ ಪ್ರತಿದಿನ ಈಗಲೂ ಸಹ ಸಾವಿರ ಗಟ್ಟಲೆ ಸಂಖ್ಯೆಯಲ್ಲಿ ಅಭಿಮಾನಿಗಳು ಹೋಗುತ್ತಿದ್ದಾರೆ. ಇನ್ನು ಶಿವರಾಜ್ ಕುಮಾರ್ ಅವರು ಜುಲೈ 12 1962 ರಂದು ಚೆನ್ನೈನಲ್ಲಿ ಜನಿಸಿದರು.
ಡಾ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಶಿವರಾಜ್ ಕುಮಾರ್ ಅವರು ಮೊದಲನೆಯ ಮಗ ಆಗಬೇಕು. ಇವರಿಗೆ ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಪೂರ್ಣಿಮಾ ಮತ್ತು ಲಕ್ಷ್ಮಿ ಇವರುಗಳು ಸಹೋದರರು ಮತ್ತು ಸಹೋದರಿಯರು ಆಗಬೇಕು. ಶಿವರಾಜ್ ಕುಮಾರ್ ಅವರು 1974 ರಲ್ಲಿ ಬಾಲನಟರಾಗಿ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ನಟಿಸಿದ್ದಾರೆ.
ಇದಾದ ಮೇಲೆ 1986 ರಲ್ಲಿ ಆನಂದ್ ಚಿತ್ರದ ಮೂಲಕ ಇವರು ಹೀರೋ ಆಗಿ ಎಂಟ್ರಿ ನೀಡಿದರು. ಇವರು ಸುಮಾರು 35 ವರ್ಷದ ಸಿನಿಮಾ ಅವಧಿಯಲ್ಲಿ 120 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಹಾಗೆಯೇ ಇವರಿಗೆ ನಿರುಪಮ ರಾಜಕುಮಾರ್ ಮತ್ತು ನಿವೇದಿತ ರಾಜ್ ಕುಮಾರ್ ಎಂಬ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇಲ್ಲಿ ನೀವು ಶಿವರಾಜ್ ಕುಮಾರ್ ಮತ್ತು ಗೀತಾ ಅವರ ಕೆಲ ಅಪರೂಪದ ಕ್ಷಣಗಳನ್ನು ನೋಡಬಹುದು…..