ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆಗೆ ಗಡಿಬಿಡಿ ಕೃಷ್ಣ ಚಿತ್ರದಲ್ಲಿ ಇಂದ್ರಜಾ ಅವರು ಮೊಟ್ಟ ಮೊದಲನೆಯ ಬಾರಿಗೆ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಇವರು ಮಾಡಿರುವ ನಟನೆ ತುಂಬಾ ಅದ್ಭುತ ಎಂದು ಹೇಳಬಹುದು.
ಹಾಗೆಯೇ ಇದರಿಂದ ಇವರು ತುಂಬ ಪ್ರಖ್ಯಾತಿಯನ್ನು ಕೂಡ ಸಾಧಿಸಿಕೊಂಡರು. ಇದಕ್ಕೂ ಮುನ್ನ ಇವರು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಗಡಿಬಿಡಿ ಕೃಷ್ಣ ಚಿತ್ರವನ್ನು ಸಾಯಿಪ್ರಕಾಶ್ ಅವರು ನಿರ್ದೇಶನ ಮಾಡಿದ್ದಾರೆ ಮತ್ತು ಭಾರತಿ ದೇವಿ ಅವರು ನಿರ್ಮಾಣ ಮಾಡಿದ್ದಾರೆ.
ಇದರಲ್ಲಿ ಶಿವರಾಜ್ ಕುಮಾರ್ ಮತ್ತು ನಟಿ ಇಂದ್ರಜಾ ಅವರ ಜೊತೆಗೆ ರವಳಿ ಮತ್ತು ತಾರಾ ಅವರು ಕೂಡ ಅಭಿನಯ ಮಾಡಿದ್ದಾರೆ. ಹಾಗಾದರೆ ಬನ್ನಿ ಇಂದ್ರಜಾ ಅವರು ಈಗ ಹೇಗಿದ್ದಾರೆ ಎಂದು ನೋಡೋಣ. ಇಂದ್ರಜಾ ಅವರು ಜೂನ್ 30 1978 ರಂದು ಆಂಧ್ರಪ್ರದೇಶದಲ್ಲಿರುವ ವಿಜಯವಾಡದಲ್ಲಿ ಜನಿಸಿದ್ದಾರೆ. ಇವರಿಗೆ ಈಗ 43 ವರ್ಷಗಳಾಗಿವೆ.
ಆಗಲೇ ಹೇಳಿದಂತೆ ಇವರು ತೆಲುಗು ತಮಿಳು ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂದ್ರಜಾ ಅವರು 1993 ರಲ್ಲಿ ತಮಿಳಿನಲ್ಲಿ ಉಜೈಪ್ಪಲ್ಲಿ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿದರು. ಇನ್ನು ನಮ್ಮ ಕನ್ನಡದಲ್ಲಿ ಮೊದಲನೆಯದಾಗಿ 1998 ರಲ್ಲಿ ಗಡಿಬಿಡಿ ಕೃಷ್ಣ ಚಿತ್ರದಲ್ಲಿ ನಟಿಸಿದ್ದಾರೆ.
ತದನಂತರ ಕೂಲಿ ರಾಜ, ಪ್ರತ್ಯರ್ಥ, ಅವಳೇ ನನ್ನ ಹುಡುಗಿ, ದಿ ಕಿಲ್ಲರ್, ಮುಂದೈತೆ ಊರ ಹಬ್ಬ, ಸುಂದರ ಪುರುಷ, ಖಡ್ಗ ಎನ್ನುವ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ತಮಿಳು ತೆಲುಗು ಮತ್ತು ಮಲಯಾಳಂನಲ್ಲಿ ಕೆಲ ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದಾರೆ ಮತ್ತು ಕೆಲ ರಿಯಾಲಿಟಿ ಶೋಗಳಿಗೆ ಜಡ್ಜ್ ಕೂಡ ಆಗಿದ್ದಾರೆ.
ಇನ್ನು ನಟಿ ಇಂದ್ರಜಾ ಅವರು 2005 ರಲ್ಲಿ ಮೊಹಮ್ಮದ್ ಅಪ್ಸರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಒಬ್ಬರು ಮಗಳು ಕೂಡ ಇದ್ದಾರೆ. ನಟಿ ಇಂದ್ರಜಾ ಅವರ ಪತಿ ಮತ್ತು ಮಗಳ ಫೋಟೋಗಳನ್ನು ಇಲ್ಲಿ ನೀವು ನೋಡಬಹುದು …..