Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಶಿವಣ್ಣನ ಮನೆ ಗೃಹಪ್ರವೇಶ ಅಪರೂಪದ ಕ್ಷಣಗಳು..!! ನಮ್ಮ ಅಪ್ಪು ಹೇಗೆ ಮಿಂಚುತ್ತಿದ್ರು ನೋಡಿ!

0

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 2007 ರಲ್ಲಿ ಮೊಟ್ಟ ಮೊದಲನೆಯದಾಗಿ ರಾಜ್ ಕುಟುಂಬದಲ್ಲಿ ಮನೆಯನ್ನು ಕಟ್ಟಿಸಿದ್ದಾರೆ. ಹೌದು ಇದಕ್ಕೂ ಮುನ್ನ ರಾಜ್ ಕುಟುಂಬದವರು ಸಾಕಷ್ಟು ಮನೆಗಳನ್ನು ಖರೀದಿ ಮಾಡಿದ್ದಾರೆ. ಹಾಗಾಗಿ ಈ ಮನೆಯು ಮೊಟ್ಟಮೊದಲನೆಯ ಕಟ್ಟಿಸಿದ ಮನೆಯವಾಗಿದೆ.

ಇನ್ನೂ ಗೃಹ ಪ್ರವೇಶದ ಕಾರ್ಯಕ್ರಮದಲ್ಲಿ ಪಾರ್ವತಮ್ಮ ರಾಜಕುಮಾರ್, ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಇನ್ನೂ ಸಾಕಷ್ಟು ರಾಜ್ ಕುಟುಂಬದವರು ಭಾಗಿಯಾಗಿದ್ದರು. ಹಾಗೆಯೇ ಶಿವಣ್ಣ ಅವರು ತಮ್ಮ ಇಷ್ಟದ ತಕ್ಕಂತೆಯೇ ಮನೆಯನ್ನು ಹೆಬ್ಬಾಳ ಮತ್ತು ಯಲಹಂಕ ರಸ್ತೆಯಲ್ಲಿ ಕಟ್ಟಿಸಿಕೊಂಡಿದ್ದಾರೆ. ಶಿವಣ್ಣನ ಮನೆಯ ಗೃಹಪ್ರವೇಶದ ಅಪರೂಪದ ಕ್ಷಣಗಳನ್ನು ಇಲ್ಲಿ ನೀವು ನೋಡಬಹುದು.

ಆದರೆ ಈ ಫೋಟೋಗಳಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಹ ಇದ್ದಾರೆ. ಇವರನ್ನು ನೋಡಿದರೆ ಈಗ ತುಂಬಾನೇ ನೋವಾಗುತ್ತದೆ. ಎಂತಹ ನಟ ತೀರ ಚಿಕ್ಕ ವಯಸ್ಸಿನಲ್ಲಿ ಮರಣ ಹೊಂದಿರುವುದು ಎಲ್ಲರ ಮನಸ್ಸಿಗೂ ಈಗಲೂ ಸಹ ನೋವನ್ನು ಉಂಟು ಮಾಡುತ್ತದೆ.

ಈಗಲೂ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಅವರನ್ನು ಮರೆತಿಲ್ಲ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಪುನೀತ್ ಅವರ ಸಮಾಧಿಯನ್ನು ನೋಡುವುದಕ್ಕೆ ಹೋಗುತ್ತಿದ್ದಾರೆ. ಏನೇ ಆಗಲಿ ನಮ್ಮ ಕನ್ನಡ ರಾಜ್ಯವು ಈ ರೀತಿಯ ನಟನನ್ನು ಇಷ್ಟು ಬೇಗ ಕಳೆದುಕೊಂಡಿರುವುದು ಎಲ್ಲರಿಗೂ ಒಂದು ದೊಡ್ಡ ನಷ್ಟ ಎಂದು ಹೇಳಬಹುದು. ಇವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಹುಟ್ಟಿ ಬರಲಿ ಎಂದು ಎಲ್ಲರೂ ಬಯಸೋಣ.

ಹಾಗೆಯೇ ಶಿವರಾಜ್ ಕುಮಾರ್ ಅವರು 1974 ರಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಬಾಲನಟರಾಗಿ ಮೊದಲನೆಯದಾಗಿ ಅಭಿನಯಿಸಿದ್ದಾರೆ. ಇದಾದ ಮೇಲೆ 1986 ರಲ್ಲಿ ಆನಂದ್ ಚಿತ್ರದ ಮೂಲಕ ಹೀರೋ ಆಗಿ ತೆರೆಯ ಮೇಲೆ ಕಾಣಿಸಿಕೊಂಡರು. ತದನಂತರ ಶಿವರಾಜ್ ಕುಮಾರ್ ಅವರು ಸಾಕಷ್ಟು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಶಿವರಾಜ್ ಕುಮಾರ್ ಅವರಿಗೆ ಈಗ 60 ವರ್ಷಗಳಾಗಿದ್ದರೂ ಈಗಲೂ ಸಹ 30 ವರ್ಷದ ವಯಸ್ಸಿನ ಹುಡುಗನ ರೀತಿ ಡ್ಯಾನ್ಸ್ ಮಾಡುತ್ತಾರೆ ಮತ್ತು ಸಿನಿಮಾಗಾಗಿ ತುಂಬಾನೇ ಕಷ್ಟ ಪಡುತ್ತಾರೆ. ಇನ್ನು ಶಿವರಾಜ್ ಕುಮಾರ್ ಅವರು ಕನ್ನಡದಲ್ಲಿ ಸುಮಾರು 120 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ…..

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply